You are currently viewing ಕುಕನೂರು | 17ನೇ ವಾರ್ಡಗೆ ಭೇಟಿ ನೀಡಿದ ಅಧ್ಯಕ್ಷೆ ಲೀಲಾವತಿ ಮುಧೋಳ್ ಗೆ “ಸಾರ್ವಜನಿಕ ಮಹಿಳಾ ಶೌಚಾಲಯ” ನಿರ್ಮಾಣಕ್ಕೆ ಮನವಿ! 

ಕುಕನೂರು | 17ನೇ ವಾರ್ಡಗೆ ಭೇಟಿ ನೀಡಿದ ಅಧ್ಯಕ್ಷೆ ಲೀಲಾವತಿ ಮುಧೋಳ್ ಗೆ “ಸಾರ್ವಜನಿಕ ಮಹಿಳಾ ಶೌಚಾಲಯ” ನಿರ್ಮಾಣಕ್ಕೆ ಮನವಿ! 

ಕುಕನೂರು | 17ನೇ ವಾರ್ಡಗೆ ಭೇಟಿ ನೀಡಿದ ಅಧ್ಯಕ್ಷೆ ಲೀಲಾವತಿ ಮುಧೋಳ್ ಗೆ “ಸಾರ್ವಜನಿಕ ಮಹಿಳಾ ಶೌಚಾಲಯ” ನಿರ್ಮಾಣಕ್ಕೆ ಮನವಿ! 

PV ನ್ಯೂಸ್ ಡಿಜಿಟಲ್ : 

ಕುಕನೂರು, ಮೇ 19 : ಪಟ್ಟಣದ 17ನೇ ವಾರ್ಡ್‌ಗೆ ಭೇಟಿ ನೀಡಿದ ಪಟ್ಟಣ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಮುಧೋಳ್ ಅವರಿಗೆ ಸ್ಥಳೀಯ ನಿವಾಸಿಗಳು, ವಿಶೇಷವಾಗಿ ಮಹಿಳೆಯರು, ಹಿರಿಯರು ಸೇರಿ ಭೇಟಿಯಾಗಿ “ಸಾರ್ವಜನಿಕ ಮಹಿಳಾ ಶೌಚಾಲಯ” ನಿರ್ಮಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಈ ಕುರಿತು ಇಂದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ 17ನೇ ವಾರ್ಡಿನ ಪಟ್ಟಣ ಪಂಚಾಯತ್ ಸದಸ್ಯ ಶಿವರಾಜ್ ಗೌಡ ಸೋಮನಗೌಡ ಹಾಗೂ ಕುಂತಳನಗರದ ನಾಗರಿಕರು ಹಾಗೂ ಧ್ವನಿ ಎತ್ತಿ ಆಕ್ರೋಶ ಹೊರ ಹಾಕಿದ್ದರು. ಈ ಪರಿಣಾಮ, ಸಭೆ ಮುಗಿದ ತಕ್ಷಣವೇ ವಾರ್ಡಿಗೆ ಭೇಟಿ ನೀಡಿದ ಅಧ್ಯಕ್ಷರ ನೇತೃತ್ವ ತಂಡವು ಇವರ ಮನವಿಯನ್ನ ಸ್ವೀಕರಿಸಿದರು.

 ಮನವಿಗೆ ಸಕರಾತ್ಮಕ ಸ್ಪಂದನೆ : ಸ್ಪೆಷಲ್ ಗ್ರಾಂಟ್ ಮಾಡಿ ಸಾರ್ವಜನಿಕ ಮಹಿಳಾ ಶೌಚಾಲಯವನ್ನು ನಿರ್ಮಿಸಲು ಪ್ರಯತ್ನ ಪಡುತ್ತೇವೆ ಮತ್ತು ಸ್ವಚ್ಛತೆಯ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

“ನಮ್ಮ ವಾರ್ಡ್‌ನಲ್ಲಿ ಇದುವರೆಗೆ ಸುಸಜ್ಜಿತವಾದ ಸಾರ್ವಜನಿಕ ಮಹಿಳಾ ಶೌಚಾಲಯವಿಲ್ಲದೆ ತೀವ್ರ ತೊಂದರೆಯಾಗಿದೆ. ಹೆಣ್ಣುಮಕ್ಕಳು, ವೃದ್ಧರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಪ್ರತಿದಿನ ತೀವ್ರ ಮುಜುಗರ ಮತ್ತು ಅಸಹನೀಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಸ್ವಚ್ಛ ಭಾರತದ ಮಾತಾಡುವ ಈ ಕಾಲದಲ್ಲೂ ಮಹಿಳೆಯರಿಗೆ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಬೇಸರದ ಸಂಗತಿ” ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಈ ವೇಳೆಯಲ್ಲಿ ಉಪಾಧ್ಯಕ್ಷೆ ಮಂಜುಳಾ ಕಲ್ಮೇನಿ, ಸದಸ್ಯ ಗಗನ್ ನೋಟಗಾರ, ಪಟ್ಟಣ ಪಂಚಾಯತ್ ಇಂಜಿನಿಯರ್ ಹಾಗೂ ಸಿಬ್ಬಂದಿ ವರ್ಗ ಹಾಗೂ ಪ್ರಮುಖ ಹಿರಿಯರು ಹಿರೇ ಜಂಬಣ್ಣ ರುದ್ರಾಕ್ಷಿ ಹನುಮಂತಪ್ಪ ಗಡ್ಡದವರ್, ಪೆದ್ದಯ್ಯ ವಿಭೂತಿ, ಹನುಮಂತಪ್ಪ ಮದನದವರ್, ಹುಸೇನಪ್ಪ ಕಲ್ಯಾಣದವರ್, ಹುಸೇನಪ್ಪ ಗಡ್ಡದ್, ಆನಂದ ಗಡ್ಡದವರ್, ಕೃಷ್ಣ ವಿಭೂತಿ, ರಮೇಶ್ ಮಾದೇನದವರ್, ಬಂಗಾರಿ ಮಾದನ್, ಗಣೇಶ್, ಶಿವರಾಜ್ ಉಪಸ್ಥಿತರಿದ್ದರು.

Leave a Reply

error: Content is protected !!