You are currently viewing BREAKING NEWS : ಕುಕನೂರು | ನಿಟ್ಟಾಲಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ; ಮಹಿಳೆಗೆ ಗಂಭೀರ ಗಾಯ!

BREAKING NEWS : ಕುಕನೂರು | ನಿಟ್ಟಾಲಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ; ಮಹಿಳೆಗೆ ಗಂಭೀರ ಗಾಯ!

BREAKING NEWS : ಕುಕನೂರು | ನಿಟ್ಟಾಲಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ; ಮಹಿಳೆಗೆ ಗಂಭೀರ ಗಾಯ!

ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಹಿಳೆಗೆ ವೇಗವಾಗಿ ಬಂದ ಕ್ರೂಸರ್ ಟ್ಯಾಕ್ಸ್ ಡಿಕ್ಕಿ; ಜಿಲ್ಲಾಸ್ಪತ್ರೆಗೆ ದಾಖಲು.

PV NEWS ಕನ್ನಡ 24×7 |

ಕುಕನೂರು, ನ.12: ತಾಲೂಕಿನ ನಿಟ್ಟಾಲಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಗುರುವಾರ ರಾತ್ರಿ ಸುಮಾರು 8.30ಕ್ಕೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಿಟ್ಟಾಲಿ ಗ್ರಾಮದ ಬಸಮ್ಮ ಮಹದೇವಪ್ಪ ಹಿರೇಮಠ (45) ಗಾಯಗೊಂಡ ಮಹಿಳೆ. ಇವರು ಕುಕನೂರಿನಿಂದ ಕೊಪ್ಪಳದ ಕಡೆಗೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸಿ ನಿಟ್ಟಾಲಿ ಕ್ರಾಸ್ ಬಳಿ ಇಳಿದು ರಸ್ತೆ ದಾಟುತ್ತಿದ್ದಾಗ, ಕುಕನೂರು ಕಡೆಯಿಂದ ವೇಗವಾಗಿ ಬಂದ ಕ್ರೂಸರ್ ಟ್ಯಾಕ್ಸ್ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ಪರಿಣಾಮ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತಕ್ಕೆ ಕಾರಣವಾದ ವಾಹನವು ಕೊಪ್ಪಳದ ಭಾಗ್ಯನಗರದ ಕ್ರೂಸರ್ ಟ್ಯಾಕ್ಸ್ ಆಗಿದ್ದು, ಅದರ ನೋಂದಣಿ ಸಂಖ್ಯೆ KA-35-B-0638 ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!