ಮುದಗಲ್ಲ:- ತೆಹ್ರಿಕ- ಎ- ಟಿಪ್ಪು ಸುಲ್ತಾನ ಕಮೀಟಿ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ..

ಮುದಗಲ್ಲ:- ತೆಹ್ರಿಕ- ಎ- ಟಿಪ್ಪು ಸುಲ್ತಾನ ಕಮೀಟಿ ವತಿಯಿಂದ
ಟಿಪ್ಪು ಸುಲ್ತಾನ್ ಜಯಂತಿ ಆಚರಣೆ..

 ಮುದಗಲ್ಲ : ತವರಗೇರ ರಸ್ತೆಯ ಮಸ್ಕಿ ಚೌಕ್ ನಲ್ಲಿ  277ನೇ ಟಿಪ್ಪು ಸುಲ್ತಾನ್ ಅವರ ಜಯಂತಿ ಮಂಗಳವಾರ ನಡೆಯಿತು.

ತೆಹ್ರಿಕ- ಎ- ಟಿಪ್ಪು ಸುಲ್ತಾನ ಕಮೀಟಿ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿದರು. ಪರಸ್ಪರ ಸಿಹಿ ಹಂಚಿದರು.

ರಫಿ ಖಾಜಿ ಅವರು ಮಾತನಾಡಿ, ಟಿಪ್ಪು ಸುಲ್ತಾನ್ ಕೇವಲ ಒಂದು ಧರ್ಮಕ್ಕೆ ಸೀಮಿತರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರಿಟಿಷರನ್ನು ನಡುಗಿಸಿದ್ದರು. ಅವರ ವಿಚಾರಗಳನ್ನು ಸಮಾಜದಲ್ಲಿ ಪ್ರಚಾರಪಡಿಸಬೇಕಿದೆ ಎಂದು ಹೇಳಿದರು.

ಇನ್ನೋರ್ವ ದಾವೂದ್ ಅವರು
ಮಾತನಾಡಿ, ಟಿಪ್ಪು ಸುಲ್ತಾನ್ ಜಾತ್ಯತೀತ ವ್ಯಕ್ತಿ, ಸ್ವಾತಂತ್ರ್ಯಕ್ಕೆ ಹೋರಾಡಿ ಮೈಸೂರಿನ ಹುಲಿ ಎಂದು ಖ್ಯಾತಿ ಪಡೆದಿದ್ದಾರೆ. ಅವರನ್ನು ಒಂದು ಧರ್ಮದ ಆಧಾರದ ಮೇಲೆ ನೋಡಿ ತಾರತಮ್ಯ ಮಾಡಬಾರದು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ವ್ಯಕ್ತಿತ್ವ, ಅವರ ತ್ಯಾಗ ಬಲಿದಾನ ವನ್ನು ಸ್ಮರಿಸಬೇಕಿದೆ. ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ವೃತ್ತ ಅಭಿವೃದ್ಧಿಗೊಳಿಸಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ನಂತರ ಸಮೀರ್ ಅವರು ಮಾತನಾಡಿ, ಟಿಪ್ಪು ಸುಲ್ತಾನ್ ತಮ್ಮ ಮಕ್ಕಳನ್ನು ಒತ್ತೆ ಇಟ್ಟು ದೇಶಕ್ಕಾಗಿ ಮಡಿದಿದ್ದಾನೆ. ಆತ ಧೈರ್ಯ, ಸಾಹಸ ಅನೇಕರಿಗೆ ಮಾದರಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿದೆ. ಬ್ರಿಟಿಷರರಿಗೆ ಸಿಂಹ ಸ್ವಪ್ನವಾಗಿದ್ದರು. ಮುಂದಿನ ಜಯಂತಿಯ ವೇಳೆ ರಾಜ್ಯ ಸರಕಾರ ಟಿಪ್ಪು ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.

ಈ ಈ ಸಂದರ್ಭದಲ್ಲಿ ತೆಹ್ರಿಕ- ಎ- ಟಿಪ್ಪು ಸುಲ್ತಾನ ಕಮೀಟಿ ಪಟ್ಟಣದ ಯುವ ಘಟಕದ ಅಧ್ಯಕ್ಷರಾದ ದಾವೂದ್ ದಾವೂದ್ ಇಬ್ರಾಹಿಂ , ಕಾರ್ಯದರ್ಶಿಯಾದ
ಮಕ್ತಮ್, ರಾಯಚೂರು ಜಿಲ್ಲಾ ಉಪಾಧ್ಯಕ್ಷರಾದ ಸಮ್ಮೀರ್ ಆಮ್ಮದ್, ರಫಿ ಖಾಜಿ, ಪಾರೂಕ್ ಬೇಗ್, ಹಮ್ಮದ್, ನಸೀರ್ ಹಮ್ಮ್ ದ್ ಉಪಸ್ಥಿತರಿದ್ದರು

ವರದಿ :- ಮಂಜುನಾಥ ಕುಂಬಾರ

 

Prajavikshane

Chandru R Bhanapaur

Leave a Reply

error: Content is protected !!