PV NEWS : ರಾಜ್ಯ ಮಟ್ಟದ ‘ಯೋಗಶ್ರೀ’ ಪ್ರಶಸ್ತಿಗೆ ಗವಿಸಿದ್ದಪ್ಪ ರಾಠೋಡ ಆಯ್ಕೆ!
PV NEWS ಕನ್ನಡ 24×7|
ಕುಕನೂರು, ಅ. 23 : ತಾಲೂಕಿನ ವಟಪರ್ವಿ ತಾಂಡಾದ ಶಿಕ್ಷಕ ಗವಿಸಿದ್ದಪ್ಪ ರಾಠೋಡ ಅವರು ರಾಜ್ಯ ಮಟ್ಟದ ‘ಯೋಗಶ್ರೀ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೊಪ್ಪಳದ ಗವಿಮಠದಲ್ಲಿ ಮಕ್ಕಳಿಗೆ ಪಾಠ ಬೋಧಿಸುತ್ತಾ ಯೋಗ ಮತ್ತು ಧ್ಯಾನದ ಅರಿವು ಮೂಡಿಸಿದ್ದ ಅವರು, ಸದ್ಯ ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ, ಸಾಹಿತ್ಯ ಹಾಗೂ ಯೋಗ ಕ್ಷೇತ್ರಗಳಲ್ಲಿನ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಕ್ಟೋಬರ್ 25ರಂದು ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗೋರ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ತಿಳಿಸಿದ್ದಾರೆ. ಅವರು ಗವಿಸಿದ್ದಪ್ಪ ರಾಠೋಡ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.