You are currently viewing PV NEWS : ಕುಷ್ಟಗಿ | ಕಡೇಕೊಪ್ಪದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ!

PV NEWS : ಕುಷ್ಟಗಿ | ಕಡೇಕೊಪ್ಪದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ!

PV NEWS : ಕುಷ್ಟಗಿ | ಕಡೇಕೊಪ್ಪದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ!

ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಬೆಳೆಸಲು ಕರೆ: ದೊಡ್ಡನಗೌಡ ಪಾಟೀಲ

PV NEWS ಕನ್ನಡ 24×7|

ಕುಷ್ಟಗಿ, ಅ.23 : ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಪಂಚಮಸಾಲಿ ಸಮುದಾಯದ ಗುರು-ಹಿರಿಯರ ನೇತೃತ್ವದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಿ, ವೃತ್ತಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಸಮಾಜದ ಹಿರಿಯರಾದ ದೊಡ್ಡನಗೌಡ ಪಾಟೀಲ ಮಾತನಾಡಿ, ಕಿತ್ತೂರು ಚೆನ್ನಮ್ಮ ಅವರಿಗೆ ಗೌರವ ಸಲ್ಲಿಸುವುದು ಕೇವಲ ಜಯಂತಿ ಆಚರಣೆಗೆ ಸೀಮಿತವಾಗಬಾರದು. ಪ್ರತಿಯೊಬ್ಬ ಹೆಣ್ಣುಮಗಳಲ್ಲೂ ಆತ್ಮವಿಶ್ವಾಸ ಬೆಳೆಸಬೇಕು. ಮಹಿಳೆಯರಿಗೆ ಶಿಕ್ಷಣ, ಸ್ವಾವಲಂಬನೆ ಹಾಗೂ ಹಕ್ಕುಗಳ ಕುರಿತು ಅರಿವು ಮೂಡಿಸಬೇಕು. ಅನ್ಯಾಯದ ವಿರುದ್ಧ ಕಾನೂನುಬದ್ಧವಾಗಿ ಹೋರಾಡುವ ಧೈರ್ಯ ಮತ್ತು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಚೆನ್ನಮ್ಮನ ಧೈರ್ಯ, ಸಾಹಸ ಹಾಗೂ ಹೋರಾಟದ ಮನೋಭಾವವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಗೌಡ ಪಾಟೀಲ, ವೀರೇಶಯ್ಯ ನಿಡಗುಂದಿಮಠ, ವಿರೂಪಾಕ್ಷಿ ನಂದಿಹಾಳ, ಮಹಾಂತೇಶ ಗಡಾದ, ಸುನೀಲಗೌಡ ಪಾಟೀಲ, ನಿಂಗಪ್ಪ ಜಿಗೇರಿ, ಮಹೇಶ ಜಿಗೇರಿ, ಉಮೇಶ ಹನಮಸಾಗರ, ಅಶೋಕ ಬಿಂಜವಾಡಿಗಿ, ಚನ್ನಸಂಗನಗೌಡ ಪಾಟೀಲ, ನಾಗರಾಜ ಬಡಿಗೇರ, ಮಲ್ಲಪ್ಪ ಗೋತಗಿ, ಪಂಪನಗೌಡ ಪಾಟೀಲ, ಕುಮಾರಗೌಡ ಪಾಟೀಲ ಹಾಗೂ ಮಹಾಂತಯ್ಯ ನಿಡಗುಂದಿಮಠ ಸೇರಿದಂತೆ ಸಮುದಾಯದ ಗುರು-ಹಿರಿಯರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!