ಪ್ರಜಾ ವೀಕ್ಷಣೆ ಸುದ್ದಿ :
LOCAL BREAKING : ಕ್ಷೇತ್ರದಲ್ಲಿ “ಶಿಕ್ಷಣ ಕ್ರಾಂತಿ” ಮಾಡಿದ ರಾಯರೆಡ್ಡಿ : ಯಂಕಣ್ಣ ಯರಾಶಿ
ಕುಕನೂರು : ‘ಶಾಸಕ ಬಸವರಾಜ ರಾಯರೆಡ್ಡಿಅವರು ತಮ್ಮ ಎರಡು ವರ್ಷದ ಅವಧಿಯಲ್ಲಿ ಶಿಕ್ಷಣ ಕ್ರಾಂತಿಯೇ ಮಾಡಿದ್ದಾರೆ’ ಎಂದು ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯಂಕಣ್ಣ ಯರಾಶಿ ಅಭಿಪ್ರಾಯ ಪಟ್ಟರು.
ಇಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿಗಳ ಉದ್ಘಾಟನೆಯನ್ನು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರು ನೇರವರಿಸಿ, ಬೇರೆ ಕೇಲಸ ನಿಮಿತ್ಯ ರಾಯರೆಡ್ಡಿಯವರು ವೇದಿಕೆ ಕಾರ್ಯಕ್ರಮವನ್ನು ಮಾಡದೆ ನಿರ್ಗಮಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯಂಕಣ್ಣ ಯರಾಶಿ, ‘ದೇಶದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರವು ಶಿಕ್ಷಣ, ಆರೋಗ್ಯ, ರಸ್ತೆಗಳು ಜೊತೆಗೆ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ರೀತಿ ರಾಜಿ ಇಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಇಂತಹ ಕ್ರಿಯಾಶೀಲ ಶಾಸಕರನ್ನು ಪಡೆದಿದ್ದು ನಾವೇ ಧನ್ಯರು ಎಂದು ಹೇಳಿದರು.
ಅತ್ಯಂತ ಪ್ರಮುಖವಾಗಿ ಶಿಕ್ಷಣ ಕ್ಷೇತ್ರದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರವು ರಾಜ್ಯದಲ್ಲಿ ಯಾರು ಕೂಡ ಊಹಿಸಲಾಗದ ಯಾರೂ ಮಾಡದಿರು ಕೇಲಸವನ್ನು ಮಾಡಿದ್ದು, ಕ್ಷೇತ್ರದ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಕಾಲೇಜುಗಳು, ಪ್ರಾಥಮಿಕ ಶಾಲೆಗಳು ಪ್ರೌಢ ಶಾಲೆಗಳು ಹೀಗೆ ಹಲವು ವಿಭಾಗದಲ್ಲಿ ಅತ್ಯಂತ ಪ್ರಗತಿಯನ್ನು ಹೊಂದಿದ್ದು, ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಪ್ರಾಥಮಿಕ ಚಿಕಿತ್ಸಾಲಯಗಳು, ಸುಸಜ್ಜಿತ ಮೂಲಭೂತ ಸೌಕರ್ಯವುಳ್ಳಂತ ತಾಲೂಕು ಆಸ್ಪತ್ರೆಗಳನ್ನ ತಂದಿರುವಂತ ಗರಿಮೆ ಇವರದ್ದಾಗಿದೆ. ರಾಜ್ಯದಲ್ಲಿಯೇ ಎಲ್ಲೋ ಕೇಳಿರದ ರಸ್ತೆ ಸುಧಾರಣೆಯಲ್ಲಿ ಸಾಕಷ್ಟು ಬದಲಾವಣೆಗಳು ತಂದು ಅಭಿವೃದ್ಧಿ ಕಡೆಗೆ ವಿಧಾನ ವಿಧಾನಸಭಾ ಕ್ಷೇತ್ರವನ್ನು ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
