LOCAL NEWS : ಕುಕನೂರು : ಎಸ್ ಡಿಎಂಸಿಯ ಅಧ್ಯಕ್ಷರಾಗಿ ಯಮನೂರಪ್ಪ ಭಾನಾಪುರ್ ನೇಮಕ!
ನೂತನ ಎಸ್‌ಡಿಎಂಸಿ ಅಧ್ಯಕ್ಷ ಯಮನೂರಪ್ಪ ಆರ್ ಭಾನಾಪೂರ್
ಕುಕನೂರು : ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ರಚನೆ ಮಾಡಲಾಯಿತು.
ಕುಕನೂರು-ಯಲಬುರ್ಗಾ ತಾಲೂಕಿನ ಬಿ ಆರ್ ಪಿ ಮಹೇಶ್ ಅಸೂಟಿ ಹಾಗೂ ಸಿಆರ್‌ಪಿ ಮಂಜುನಾಥಯ್ಯ ಅವರ ನೇತೃತ್ವದಲ್ಲಿ ಮುಖ್ಯೋಪಾಧ್ಯರು ಹಾಗೂ ಶಿಕ್ಷಕರನ್ನ ಒಳಗೊಂಡಂತೆ ಪಾಲಕರ ಸಭೆ ನಡೆಸಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ರಚನೆ ಮಾಡಿದರು.
SDMCಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಯಮನೂರಪ್ಪ ರಾಮಪ್ಪ ಭಾನಾಪುರ್ ಅವರು ನೇಮಕಗೊಂಡರು. ಅದೇ ರೀತಿ ಉಪಾಧ್ಯಕ್ಷರಾಗಿ ಶ್ರೀಮತಿ ಮಾಲಾ ವಿಶ್ವಕರ್ಮ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಯ ಪ್ರಭುರಾಜ್ ಗುರಿಕಾರ, ಸಹ ಶಿಕ್ಷಕ ಶಂಭು, ಗ್ರಾಮ ಪಂಚಾಯತ್ ಸದಸ್ಯ ಯಮನೂರಪ್ಪ ಕಟ್ಟಿಮನಿ, ಊರಿನ ಮುಖಂಡರಾದ ಮೇಘರಾಜ್ ಬಳಗೇರಿ, ಸುರೇಶ್ ಬಾಳೋಟಗಿ, ಹಂಪಣ್ಣ ಕಟ್ಟಿಮನಿ, ಹಿರಿಯ ಪತ್ರಕರ್ತ ಈರಯ್ಯ ಕುರ್ತಕೋಟಿ, ವೆಂಕಟೇಶ್ ರಾಟಿಮನಿ, ಪ್ರಕಾಶ್ ಬಳಗೇರಿ, ತಿರುಪತಿ ಕಟ್ಟಿಮನಿ, ರುದ್ರಯ್ಯ, ಸುರೇಶ್ ಮನ್ನಾಪುರ್, ಸೋಮಪ್ಪ ಕಾರಭಾರಿ, ತಿರುಪತಿ ತಲ್ಲೂರು, ದುರ್ಗಪ್ಪ ಕಟ್ಟಿಮನಿ, ಕಿರಣ್ ಕುಮಾರ್ ರಾಥೋಡ್, ವಿಶ್ವನಾಥ್ ಕುಣಿಕೇರಿ, ವಿಜಯಕುಮಾರ್ ಚೌಹಾನ್, ಸುರೇಶ್ ಬಾನಾಪುರ್, ರಮೇಶ್ ಇಟಗಿ, ರಮೇಶ್ ಚಿಕನೇಕೊಪ್ಪ, ಶ್ರೀಕಾಂತ್ ಕಟ್ಟಿಮನಿ, ಅಂಬರೀಶ್ ಮನ್ನಾಪುರ್ ಉಪಸ್ಥಿತರಿದ್ದರು.