BIG NEWS : ಲೋಕಾಯುಕ್ತ ದಾಳಿ; ಮಾಜಿ ಗುತ್ತಿಗೆ ನೌಕರನ ಕೋಟಿಗಟ್ಟಲೆ ಆಸ್ತಿ ಪತ್ತೆ…!
ಕೊಪ್ಪಳ : ಜಿಲ್ಲಾ ಕೇಂದ್ರದಲ್ಲಿ ಕೆ ಆರ್ ಐ ಡಿ ಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ) ಇಲಾಖೆಯಲ್ಲಿ ಕೆಲವು ವರ್ಷ ಹೊರಗುತ್ತಿಗೆ ನೌಕರನಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ಕಳಕಪ್ಪ ನಿಡುಗುಂದಿ ಮನೆ ಮೇಲೆ ಲೋಕಾಯುಕ್ತ ದಾಳಿ ಜರುಗಿದ್ದು ಕೊಟ್ಯಾನುಗಟ್ಟಲೆ ಆಸ್ತಿಯ ದಾಖಲೆಗಳು ಲೋಕಾಯುಕ್ತರ ವಶವಾಗಿವೆ.
ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಕಳಕಪ್ಪ ನಿಡಗುಂದಿ ಅವರ ಮನೆ ಮೇಲೆ ದಾಳಿ ನಡೆಸಿದ್ದು ಭ್ರಷ್ಟಾಚಾರದಿಂದ ಗಳಿಸಿದ ಅಪಾರ ಆಸ್ತಿಯ ದಾಖಲೆಗಳು ಲೋಕಾಯುಕ್ತ ಪತ್ತೆ ಹಚ್ಚಲಾಗಿದೆ. ಮೂಲತಹ ಜಿಲ್ಲೆಯ ಯಲಬುರ್ಗಾ ತಾಲೂಕು ಬಂಡಿಹಾಳ ಕಳಕಪ್ಪ ನಿಡಗುಂದಿ ಆರು ತಿಂಗಳ ಹಿಂದೆ ಕಳಕಪ್ಪ ಕೆಲಸದಿಂದ ವಜಾ ಆಗಿದ್ದಾನೆ.
ಕೊಪ್ಪಳ ನಗರ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಭಾಗ್ಯನಗರ ವ್ಯಾಪ್ತಿಯ (ಕಿನ್ನಾಳ ರಸ್ತೆ ಎಡಕ್ಕೆ) ಪ್ರಗತಿ ನಗರ ಪಕ್ಕದ ವಿವಿಧ ಬಡಾವಣೆಯಲ್ಲಿ ಇರುವ ಕಳಕಪ್ಪನ ಆಸ್ತಿ ಪತ್ತೆಯಾಗಿದೆ. ಕೇವಲ ಹೊರಗುತ್ತಿಗೆ ಮೂಲಕ ಅದರಲ್ಲೂ ಕಚೇರಿ ಸಹಾಯಕನಾಗಿದ್ದ ಕಳಕಪ್ಪ ನಿಡಗುಂದಿ ಎಷ್ಟು ಆಸ್ತಿ ಮಾಡಿರಬಹುದು ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಸಹ ಆಶ್ಚರ್ಯ ಚಕಿತರಾಗಿರುತ್ತಾರೆ.
ಒಂದಲ್ಲ ಎರಡಲ್ಲ ಬರೋಬ್ಬರಿ 24 ಮನೆಗಳು, 30ಕ್ಕೂ ಹೆಚ್ಚು ನಿವೇಶನಗಳು, 40 ಎಕರೆ ಜಮೀನಿನ ಖರೀದಿ ಪತ್ರಗಳು, 350 ಗ್ರಾಂ ಬಂಗಾರ, ಒಂದೂವರೆ ಕೆಜಿ ಬೆಳ್ಳಿ, 2 ಬೈಕ್,2 ಕಾರ್ ಇದು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿರುವ ಕಳಕಪ್ಪನ ಆಸ್ತಿ ಗಳಿಕೆಯಾಗಿದೆ.
ಇದರಲ್ಲಿ ಕಳಕಪ್ಪ ಮತ್ತು ಅವರ ಪತ್ನಿ ಹೆಸರಲ್ಲಿ 6 ಮನೆ 4 ಪ್ಲಾಟ್, 40 ಎಕರೆ ಜಮೀನು ಪತ್ತೆಯಾಗಿದೆ. ಕಳಕಪ್ಪನ ಪತ್ನಿ ತಮ್ಮನ ಹೆಸರಲ್ಲಿ 8 ಮನೆ, 2 ಪ್ಲಾಟ್ ಪತ್ತೆಯಾಗಿವೆ. ಕಳಕಪ್ಪನ ತಮ್ಮನ ಹೆಸರಲ್ಲಿ 10 ಮನೆಗಳು ಪತ್ತೆಯಾಗಿವೆ.
ಕಳೆದ 10 ವರ್ಷಗಳಿಂದ ಕೊಪ್ಪಳ KRIDL ಭ್ರಷ್ಟಾಚಾರಕ್ಕೆ ಬೋಗಸ್ ಬಿಲ್ ಗೆ ಫೇಮಸ್ ಆಗಿತ್ತು. ಇಲ್ಲಿಗೆ ಯಾವುದೇ ಅಧಿಕಾರಿ ಬರಲಿ ಯಾವ ರಾಜಕಾರಣಿ ಸರಕಾರದ ಭಯ ಅವರಿಗೆ ಇರಲಿಲ್ಲ. ಏಕೆಂದರೆ ಯಾರು ಅವರಿಗೆ ಏನೂ ಪ್ರಶ್ನೆ ಮಾಡುತ್ತಿರಲಿಲ್ಲ. ಅಂತಹ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡ ಕಳಕಪ್ಪ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಸರಿಸುಮಾರು 100 ಕೋಟಿ ರೂಪಾಯಿ ಬೋಗಸ್ ಬಿಲ್ ಎತ್ತುವಳಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆ ಇಲಾಖೆ ತನಿಖೆ ನಡೆಸಿದ್ದು ಸ್ವತಃ ಕೆ ಆರ್ ಐ ಡಿ ಎಲ್ ಅಧಿಕಾರಿಗಳು ಆಗಿನ ಇ.ಇ ಅಧಿಕಾರಿಯದ ಝೆಡ್.ಎಂ ಚಿಂಚೋಳಿಕರ್, ಹೊರಗುತ್ತಿಗೆ ನೌಕರ ಕಳಕಪ್ಪ ನಿಡುಗುಂದಿ ಹಾಗೂ ಮತ್ತೊಬ್ಬ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತರಿಗೆ ದೂರು ಬಂದ ಕಾರಣ ತನಿಖೆ ನಡೆದಿದೆ.
ಈ ಭ್ರಷ್ಟಾಚಾರ ಪ್ರಕರಣದ ಕಿಂಗ್ ಪಿನ್ ಎಂದು ಹೇಳಲಾಗಿದೆ ಕಳಕಪ್ಪ ನಿಡಗುಂದಿ ಅವರ ಮನೆಯಿಂದಲೇ ತನಿಖೆ ಪ್ರಾರಂಭ ಮಾಡಲಾಗಿದೆ. ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ ಹೊರಗುತ್ತಿಗೆ ನೌಕರರ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ರಗಳು ದೊರಕಿರುವುದು ಸ್ವತಹ ಲೋಕಾಯುಕ್ತ ಅಧಿಕಾರಿಗಳೇ ಅಚ್ಚರಿ ಪಡುವಂತಾಗಿದೆ.
“ಸುಮಾರು 72 ಕೋಟಿ ರೂಪಾಯಿ ಸರ್ಕಾರಿ ಹಣ ದುರ್ಬಳಕೆ ಆಗಿರುವ ಪ್ರಕರಣ ಇದಾಗಿದ್ದು. ಕುಡಿಯುವ ನೀರು, ಶಾಲೆ, ರಸ್ತೆ ಕಾಮಗಾರಿ, ಚರಂಡಿ ನಿರ್ಮಾಣ ಕಾಮಗಾರಿಗಳಲ್ಲಿ ಅಕ್ರಮ ಹಳೆ ಆಗಿದೆ ಎಂದು ದೂರು ಕೇಳಿಬಂದಿದ್ದು, ಲೋಕಾಯುಕ್ತ ತನಿಖೆಗಳಿಗೆ ಸುಮಾರು 108 ಕಾಮಗಾರಿಯಲ್ಲಿ ಸರ್ಕಾರದ ಹಣ ದುರುಪಯೋಗ ಆಗಿರುವುದು ಕಂಡು ಬಂದಿದೆ.
ಇಲಾಖೆಯ ವ್ಯಾಟ್ ಅಕೌಂಟ್ ನಿಂದ ಸರ್ಕಾರದ ಅನುಮತಿ ಇಲ್ಲದೆ ಹಣ ಡ್ರಾ ಮಾಡಲಾಗಿದ್ದು. ಕಾಮಗಾರಿ ನಿರ್ವಹಿಸದೆ ಹಾಗೂ ಅರ್ಧಂಬರ್ಧ ಕಾಮಗಾರಿ ಮಾಡಿ ಪೂರ್ತಿ ಬಿಲ್ ಪಾವತಿ, ಬೇರೆ ಇಲಾಖೆಯ ಕಾಮಗಾರಿಗಳು ಹಾಗೂ ಏಜೆನ್ಸಿಗಳಿಂದ ನಡೆದ ಕಾಮಗಾರಿಗಳ ಬಿಲ್ ಎತ್ತೋಳಿ ಮಾಡಿದ್ದು ತನಿಖೆ ವೇಳೆ ಕಂಡು ಬಂದಿರುತ್ತದೆ.
ಇದರ ಪರಿಣಾಮ ಎಲ್ಲಿಗೆ ಹೋಯ್ತು ಅಂದ್ರೆ ಜಿಲ್ಲೆಯ ವಿವಿಧ ಇಲಾಖೆಯ ಒಟ್ಟು 108 ಕಾಮಗಾರಿಗಳಿಗೆ ಯಾವುದೇ ಕ್ರಿಯಾ ಯೋಜನೆ ತಯಾರಿಸದೆ, ಕೆಲ ಕ್ರಿಯಾ ಯೋಜನೆಗಳಿಗೆ ಜಿಲ್ಲಾ ಪಂಚಾಯತ ಸಿಇಒ ರವರ ಸಹಿಯನ್ನೇ ನಕಲು ಮಾಡಿ, ಕೆಲ ಕಾಮಗಾರಿ ಅರ್ಧ ಮಾಡಿ, ಕೆಲ ಕಾಮಗಾರಿ ಮಾಡದೆ ಬಿಲ್ ಎತ್ತುವುದು ಹೀಗೆ ಮಾಡಿಯೇ ಸರಕಾರದ 72 ಕೋಟಿ ರೂಪಾಯಿ ಡ್ರಾ ಮಾಡಿದ್ದಾರೆ.