ಕೊಪ್ಪಳ : ‘ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (Mysore Urban Development Authority- MUDA(ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ, ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರು ಕೇಳಿ ಬರುತ್ತಿರುವ ಕಾರಣ ಸಿಎಂ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಒತ್ತಾಯ ಮಾಡಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ರಚನೆ ಆದಾಗಿನಿಂದಲೂ ಒಂದಲ್ಲ ಒಂದು ಹಗರಣ ಹಾಗೂ ಭ್ರಷ್ಠಾಚಾರ ಆರೋಪಗಳು ಹೊರಗಡೆ ಬರುತ್ತೀವೆ. ಇದರಿಂದ ಗೊತ್ತಗುತ್ತಿದೆ. ರಾಜ್ಯವನ್ನು ನಡೆಸಲು ಇವರು ಅಸಮರ್ಥರು ಎಂದು ಇದಕ್ಕೆ ಜೀವಂತ ಉದಾಹರಣೆ ಎಂದರೆ ಒಂದು ವಾಲ್ಮಿಕಿ ನಗಮದಲ್ಲಿ ನಡೆದ ನೂರಾರು ಕೋಟಿ ಹಗರಣ, ವರ್ಗಾವಣೆ ಧಂದೆ ಹಾಗೂ ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿರುವ ಹಗರಣದಲ್ಲಂತೂ ಸಿಎಂ ಪತ್ನಿ ಹಾಗೂ ಅವರ ಅಳಿಯ ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಆದ್ದಿರಿಂದ ಈ ಎಲ್ಲದರ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಆಗ್ರಹ ಪಡೆಸುತ್ತೇನೆ’ ಎಂದರು.
ಏನಿದು ಹಗರಣ ? * ಸ್ವತಃ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಜಮೀನಿಗೆ ಪರ್ಯಾಯವಾಗಿ ಮುಡಾ ನೀಡಿರುವ 14 ನಿವೇಶನ ಕೂಡ ವಿವಾದಕ್ಕೆ ಕಾರಣವಾಗಿದೆ. 14 ಸೈಟ್‌ಗಳ ಮಾರುಕಟ್ಟೆ ಮೌಲ್ಯ 8.33 ಕೋಟಿ ರೂ. ಎಂದು ಮೂಲ್ಯವಿದೆ. ಕೇವಲ ಒಂದು ವರ್ಷದಲ್ಲಿ ಇದರ ಮೌಲ್ಯ 62 ಕೋಟಿ ರೂ. ಆಗಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ.
* ಸಿಎಂ ಪತ್ನಿ ಜಮೀನಿಗೆ 62 ಕೋಟಿ ರೂ. ಮೌಲ್ಯವೇ? ಅಫಿಡವಿಟ್‌ನಲ್ಲಿ 14 ನಿವೇಶನಗಳ ಮೌಲ್ಯ 8.35 ಕೋಟಿ ರೂ. ಎಂಬ ಉಲ್ಲೇಖ ಈಗ ಎಕರೆಗೆ 20 ಕೋಟಿ ರೂ. ಕೊಡಿ ಎಂಬ ಬೇಡಿಕೆ ಇದು ಸಾಧ್ಯನಾ?
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್,ಮಾಜಿ ಶಾಸಕ ಬಸವರಾಜ ದಡೇಸಗೂರು, ಬಿಜೆಪಿ ಮುಖಂಡರಾದ ಪ್ರಮೋದ್, ಸೋಮಶೇಖರ್ ಗೌಡ್ರು, ಪ್ರಸಾದ್ ಗಾಳಿ, ಗಣೇಶ್ ಹೊರಟ್ನಾಳ್, ಅಮೀತ್ ಕಂಪ್ಲಿಕರ್ ಉಪಸ್ಥಿತರಿದರು.