ಬೆಂಗಳೂರು : ಕನ್ನಡದ ಕಿರುತೆರೆಯಲ್ಲಿ ಅಚ್ಚ್ ಕನ್ನಡದ ನಿರೂಪಕಿಯಾಗಿ ಖ್ಯಾತ ಪಡೆದಿದ್ದ ನಿರೂಪಕಿ ಅಪರ್ಣಾ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಂತ ನಿರೂಪಕಿ ಅಪರ್ಣಾ ಅವರು ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅವರು ಬೆಂಗಳೂರಿನ ಬನಶಂಕರಿಯಲ್ಲಿನ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.