Breaking : ಕಾಂಗ್ರೆಸ್ ನಾಯಕನ ವಿರುದ್ಧ ಅತ್ಯಾಚರ ಪ್ರಕರಣ ದಾಖಲು..!!

You are currently viewing Breaking : ಕಾಂಗ್ರೆಸ್ ನಾಯಕನ ವಿರುದ್ಧ ಅತ್ಯಾಚರ ಪ್ರಕರಣ ದಾಖಲು..!!

ಬೆಂಗಳೂರು : ರಾಜಧಾನಿಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ತೆಲಂಗಾಣ ಕಾಂಗ್ರೆಸ್ ನಾಯಕ ಕುಂಭಂ ಶಿವಕುಮಾರ್ ರೆಡ್ಡಿ ವಿರುದ್ಧ ಅತ್ಯಾಚರ ಪ್ರಕರಣ ದಾಖಲಾಗಿದ್ದು, ಶಿವಕುಮಾರ್ ರೆಡ್ಡಿ ತೆಲಾಂಗಣ ನಾರಾಯಣ್ ಪೇಟ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾರೆ. ನಗರದ ಪ್ರತಿಷ್ಟಿತ ಖಾಸಗಿ ಹೊಟೇಲ್​ನಲ್ಲಿ ಅತ್ಯಾಚಾರ ಎಸಗಿರುವ ಆರೋಪ ಇವರ ವಿರುದ್ಧ ಕೇಳಿಬಂದಿದೆ. ಶಿವಕುಮಾರ್ ರೆಡ್ಡಿ 2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣ್ ಪೇಟ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಇದನ್ನು ಓದಿ…CHANDRAYAAN-3 UPDATE : ಚಂದ್ರನ ಮೇಲ್ಮೈಯಲ್ಲಿನ ತಾಪಮಾನದ ಮಾಹಿತಿ ನೀಡಿದ ಇಸ್ರೋ..!!

ಈ ಹಿಂದೆ 2020ರಲ್ಲೂ ಕೆ.ಶಿವಕುಮಾರ ರೆಡ್ಡಿ ವಿರುದ್ಧ ಹೈದ್ರಾಬಾದ್‌ ನಗರದ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು. 2020ರಲ್ಲಿ ಶಿವಕುಮಾರ್​​ ರೆಡ್ಡಿ 45 ವರ್ಷದ ಮಹಿಳೆಯೊಬ್ಬರನ್ನು ಭೇಟಿಯಾಗುತ್ತಾರೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ದಿನಗಳು ಕಳೆಯುತ್ತಾ ಶಿವಕುಮಾರ್​​ ರೆಡ್ಡಿ, ಮಹಿಳೆಗೆ ಹತ್ತಿರವಾಗುತ್ತಾ ಹೋಗುತ್ತಾರೆ. ಒಂದು ದಿನ ಶಿವಕುಮಾರ್​ ರೆಡ್ಡಿ ತನ್ನನ್ನು ಮದುವೆಯಾಗುವಂತೆ ಮಹಿಳೆ ಎದರು ಪ್ರಸ್ತಾಪ ಇಟ್ಟಿದ್ದನು ಎಂದು ತಿಳಿದು ಬಂದಿದೆ.

ಆಗ ಆ ಮಹಿಳೆ, ಶಿವಕುಮಾರ್​ ರೆಡ್ಡಿ ಅವರ ಮೊದಲ ಪತ್ನಿ ಬಗ್ಗೆ ವಿಚಾರಿಸಿದಾಗ “ನನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಮತ್ತು ಮೂರು ವರ್ಷಗಳಿಗಿಂತ ಹೆಚ್ಚು ಬದುಕುಳಿಯುವುದಿಲ್ಲ. ಆದ್ದರಿಂದ ಅವಳನ್ನು ನೋಡಿಕೊಳ್ಳಲು ಒಬ್ಬ ಮಹಿಳೆ ಬೇಕು” ಎಂದು ಉತ್ತರಿಸಿದ್ದರು ಎನ್ನಲಾಗಿದೆ.

ಹಿಂದೂ ಸಂಪ್ರದಾಯದಂತೆ ಇವರಿಬ್ಬರು ಮದುವೆಯಾಗಿದ್ದಾರೆ. ಬಳಿಕ ಶಿವಕುಮಾರ್​ ರೆಡ್ಡಿ, ಮಹಿಳೆಯನ್ನು ಪಂಜಗುಟ್ಟದ ಪ್ರತಿಷ್ಟಿತ ಸ್ಟಾರ್ ಹೋಟೆಲ್‌ಗೆ ಕರೆದು, ಅನುಮತಿ ಇಲ್ಲದೆ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಬಳಿಕ ಮಹಿಳೆಯ ನಗ್ನ ಚಿತ್ರಗಳನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದು ನಾನು ಹೇಳಿದಂತೆ ಕೇಳದೆ ಇದ್ದರೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂಸತ್ರಸ್ತೆ ದೂರಿನಲ್ಲಿ ದಾಖಲಿಸಿದ್ದರು.

ಈ ಹಿಂದೆ ಶಿವಕುಮಾರ್​ ರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 417, 420, 376 ಮತ್ತು 506 ಅಡಿಯಲ್ಲಿ ಪಂಜಗುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

Leave a Reply

error: Content is protected !!