PV NEWS : ಕರ್ನಾಟಕದ 18 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿ ಪೊಲೀಸ್ ಪದಕ!
PV NEWS ಕನ್ನಡ 24×7
ಬೆಂಗಳೂರು, ಆ.14 : ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು 2026ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರಪತಿ ಪೊಲೀಸ್ ಪದಕಗಳನ್ನು ಘೋಷಿಸಿದೆ. ಕರ್ನಾಟಕ ಪೊಲೀಸ್ ಇಲಾಖೆಯ ಒಟ್ಟು 18 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಬಾರಿ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.
ಕರ್ತವ್ಯ ನಿಷ್ಠೆ, ಶಿಸ್ತು, ಉತ್ತಮ ಸೇವೆ ಹಾಗೂ ಇಲಾಖೆಗೆ ಸಲ್ಲಿಸಿದ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಒಬ್ಬರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ 17 ಮಂದಿ ಅಧಿಕಾರಿ–ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ನೀಡಲಾಗಿದೆ.
ಸಿಸಿಬಿ ಎಸಿಪಿಗೆ ವಿಶಿಷ್ಟ ಸೇವಾ ಪದಕ
ಬೆಂಗಳೂರು ನಗರ ಸಿಸಿಬಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಹೆಚ್.ಎನ್. ಧರ್ಮೇಂದ್ರ ಅವರಿಗೆ ಅತ್ಯುನ್ನತ ‘ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ’ ಲಭಿಸಿದೆ.
17 ಮಂದಿಗೆ ಶ್ಲಾಘನೀಯ ಸೇವಾ ಪದಕ
ಉತ್ತಮ ಸೇವೆಗಾಗಿ ಕೆಳಗಿನ 17 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಘೋಷಿಸಲಾಗಿದೆ:
1. ಸಾರಾ ಫಾತೀಮಾ – ಪೊಲೀಸ್ ವರಿಷ್ಠಾಧಿಕಾರಿ (SP), ರೈಲ್ವೇಸ್, ಬೆಂಗಳೂರು
2. ಥಾಮಸ್ ಮ್ಯಾಥ್ಯೂ – ಕಮಾಂಡೆಂಟ್, ಕೆಎಸ್‌ಆರ್‌ಪಿ
3. ಮಹಾದೇವ್ – ಎಸಿಪಿ, ಆಗ್ನೇಯ ಸಂಚಾರ ಉಪವಿಭಾಗ, ಬೆಂಗಳೂರು
4. ಪ್ರಮಾನಂದ್ ಘೋಡ್ಗೆ – ಡಿವೈಎಸ್ಪಿ, ಡಿಎಆರ್, ರಾಯಚೂರು
5. ಕೆ. ಷಣ್ಮುಗ ವರ್ಮಾ – ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ, ಮೈಸೂರು
6. ಭಾವುದ್ದೀನ್ ರುಕ್ಮುದ್ದೀನ್ – ಪೊಲೀಸ್ ಇನ್ಸ್‌ಪೆಕ್ಟರ್, ಮಾಳಮಾರುತಿ ಠಾಣೆ
7. ಗುರುಪ್ರಸಾದ್ ಗೋಪಾಲ್ ನಾಯಕ್ – ಪೊಲೀಸ್ ಇನ್ಸ್‌ಪೆಕ್ಟರ್, ಸಿಐಡಿ
8. ನಯೀಂ – ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, ಲೋಕಭವನ
9. ಶ್ರೀನಿವಾಸ – ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI), ಕೆ.ಪಿ. ಅಗ್ರಹಾರ ಠಾಣೆ
10. ಜ್ಞಾನದೇವ್ ನವಲ ತರಾಸೆ – ವಿಶೇಷ ಎಆರ್‌ಎಸ್‌ಐ, ಕೆಎಸ್‌ಆರ್‌ಪಿ
11. ಮಹದೇವಸ್ವಾಮಿ – ಹೆಡ್ ಕಾನ್ಸ್‌ಟೇಬಲ್, ವಿಧಾನಸೌಧ ಭದ್ರತಾ ವಿಭಾಗ
12. ಮಾರಿಯಾ ಜೋಸೆಫ್ ದಿನೇಶ್ ಕುಮಾರ್ – ಹೆಡ್ ಕಾನ್ಸ್‌ಟೇಬಲ್, ಡಿಸಿಆರ್‌ಇ, ಕೆಜಿಎಫ್
13. ಚಂದ್ರಶೇಖರ ಚಿಕ್ಕಣ್ಣನವರ್ – ಹೆಡ್ ಕಾನ್ಸ್‌ಟೇಬಲ್, ಕೆಎಸ್‌ಆರ್‌ಪಿ
14. ಅಬ್ದುಲ್ ಕಮಾಲ್ – ಹೆಡ್ ಕಾನ್ಸ್‌ಟೇಬಲ್, ತರೀಕೆರೆ
15. ನಾಗೇಶ್ ಮಚ್ಚಯ್ಯ – ಹೆಡ್ ಕಾನ್ಸ್‌ಟೇಬಲ್, ಸಿಐಡಿ
16. ಮನೋಹರ್ – ಪೊಲೀಸ್ ಕಾನ್ಸ್‌ಟೇಬಲ್
17. ಅಬ್ದುಲ್ ರಬ್ಬಾನಿ – ಎಪಿಸಿ, ಡಿಪಿಒ
ರಾಜ್ಯ ಪೊಲೀಸ್ ಪಡೆಯಲ್ಲಿ ನಿಸ್ವಾರ್ಥ ಸೇವೆ, ಕರ್ತವ್ಯ ನಿಷ್ಠೆ ಹಾಗೂ ಶ್ಲಾಘನೀಯ ಕಾರ್ಯದ ಮೂಲಕ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.