You are currently viewing BREAKING : ಕೇಂದ್ರ ಬಜೆಟ್ ಅಧಿವೇಶನ : ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಿದ ಕೇಂದ್ರ ಸರ್ಕಾರ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ!

BREAKING : ಕೇಂದ್ರ ಬಜೆಟ್ ಅಧಿವೇಶನ : ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಿದ ಕೇಂದ್ರ ಸರ್ಕಾರ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ!

BREAKING : ಕೇಂದ್ರ ಬಜೆಟ್ ಅಧಿವೇಶನ : ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಿದ ಕೇಂದ್ರ ಸರ್ಕಾರ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ!

ಪ್ರಜಾ ವೀಕ್ಷಣೆ ಸುದ್ದಿ :

ಕುಕನೂರು : ನಮ್ಮ ರಾಜ್ಯಕ್ಕೆ ಈ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿವೆ. ನಮ್ಮ ರಾಜ್ಯಕ್ಕೆ ಮಲತಾಯಿ ದೊರಣೆ ಮುಂದುವರೆದಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಇಂದು ಪಟ್ಟಣದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಹೆಬ್ಬಾಳ್ಕರ್ ಅವರು ಪತ್ರಕರ್ತರೊಂದಿಗೆ ಮಾತನಾಡಿ, ‘ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ರಾಜ್ಯ ಸರ್ಕಾರಕ್ಕೆ ಕೊಡಬೇಕಾಗಿದ್ದ ತೆರಿಗೆ ಹಣವನ್ನು ಸರಿಯಾಗಿ ಕೊಟ್ಟಿಲ್ಲ. ಬಜೆಟ್‌ನಲ್ಲಿ ನೀರಾವರಿಗೆ ಕೊಡಬೇಕಾಗಿದ್ದ ಕೇಂದ್ರ ಸರ್ಕಾರದ ಪಾಲನ್ನು ನೀಡೇ ಇಲ್ಲ. ರೈತರ ಪರವಾದ ಬಜೆಟ್ ಎಂದು ವಿರೋಧ ಪಕ್ಷದವರು ಹೇಳುತ್ತಾರೆ ಆದ್ರೆ, ಇದ್ಯಾವ ಬಜೆಟ್ ಎಂದು ನನಗೂ ಗೊತ್ತಾಗ್ತಿಲ್ಲ. ಜೊತೆಗೆ ನಮ್ಮ ರಾಜ್ಯದ ಬಿಜೆಪಿ ಹಿರಿಯ ನಾಯಕರೆಲ್ಲರು ಮಂತ್ರಿಮಂಡಲದಲ್ಲಿದ್ದರೂ ಸಹಿತ ಈ ರೀತಿ ಅನ್ಯಾಯವಾಗಿದ್ದು ನಿಜಕ್ಕೂ ವಿಪರ್ಯಾಸ, ಇದು ಆಶಾದಾಯಕವಿಲ್ಲದ ಕೇಂದ್ರ ಬಜೆಟ್ ಇದಾಗಿದೆ ಎಂದು ಹೇಳಿದರು.

Prajavikshane

Chandru R Bhanapaur

Leave a Reply

error: Content is protected !!