PV NEWS : ಸಮಾಜ ಸೇವೆಗೆ ರಾಜ್ಯಮಟ್ಟದ ಗೌರವ: ಸಾಮಾಜಿಕ ಹೋರಾಟಗಾರ ಸುರೇಶ್ ಬಳೂಟಗಿ ಅವರಿಗೆ ‘ಕರ್ನಾಟಕ ಸಮಾಜ ಸೇವಾ ರತ್ನ’ ಪ್ರಶಸ್ತಿ!

PV NEWS ಕನ್ನಡ 24×7 :
ಕುಕನೂರು, ಜು. 29 (PV NEWS ಕನ್ನಡ 24×7): ಸಮಾಜಮುಖಿ ಸೇವೆ ಹಾಗೂ ಜನಪರ ಚಟುವಟಿಕೆಗಳನ್ನು ಪರಿಗಣಿಸಿ ಸಮಾಜಸೇವಕ, ಬಂಜಾರ ಸಮಾಜದ ಸಾಮಾಜಿಕ ಹೋರಾಟಗಾರ ಸುರೇಶ್ ರಾಮಪ್ಪ ಬಳೂಟಗಿ ಅವರನ್ನು ಪ್ರತಿಷ್ಠಿತ ‘ಕರ್ನಾಟಕ ಸಮಾಜ ಸೇವಾ ರತ್ನ’ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯು ತನ್ನ ನಾಲ್ಕನೇ ರಾಜ್ಯ ಪತ್ರಕರ್ತರ ಸಮ್ಮೇಳನ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ. ಕಾರ್ಯಕ್ರಮವು ಆಗಸ್ಟ್ 8ರಂದು ನೆಲಮಂಗಲದ ಪುಷ್ಪ ಬೈರೇಗೌಡ ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿದೆ.
