ಮುದಗಲ್ಲ ವರದಿ..
ಮುದಗಲ್ಲ:- ವಿಜೃಂಭಣೆ ನಡೆದ ಗೋಸಲರಾಯನ ಪೇಟೇಯ ಆಂಜನೇಯ ಜಾತ್ರೆ..
ಮುದಗಲ್ಲ :ವೆಂಕಟರಾಯಪೇಟೆಯ ಶ್ರೀ ಗೋಸಲಾಂಜನೇಯನ ಜಾತ್ರೋತ್ಸವ ಗುರುವಾರ ಅದ್ಧೂರಿಯಾಗಿ ನಡೆಯಿತು.ಜಾತ್ರೆ ನಿಮಿತ್ತ ಪುಷ್ಪಾರ್ಚನೆ ಹಾಗೂ ವಿಶೇಷ ಪೂಜಾ ವಿಧಾನಗಳು ಜರುಗಿದವು

ನಂತರ ಅಲಂಕೃತ ವಾಹನದಲ್ಲಿ ಗೋಸಲಾಂಜನೇಯನ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ 201 ಹೆಚ್ಚು ಕುಂಭಗಳೊಂದಿಗೆ ಮೆರವಣಿಗೆ ಮಾಡಲಾಯಿತು.ಮೆರವಣಿಗೆಯಲ್ಲಿ ಡಿ.ಜೆ ,ಡೊಳ್ಳುಕುಣಿತ ಸೇರಿದಂತೆ ಮಹಿಳೆಯರು ಕಳಶ ಹಿಡಿದು ಮೆರವಣಿಗೆ ಮೆರಗು ತಂದರು.
ನಂತರ ಗೋಸಲಾಂಜನೇಯ ದೇಗುಲಕ್ಕೆ ಕಳಸಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಈಸಂದರ್ಭದಲ್ಲಿ ,ಯಾದವ್ ಸಂಘದ ಅಧ್ಯಕ್ಷರಾದ ಕರಿಯಪ್ಪ ಯಾದವ್, ರಾಮು ಯಾದವ್ ,ಲಕ್ಷ್ಮಣ ,ಹುಲೇಶ, ಕುಪ್ಪಣ್ಣ , ಕೋನ್ಯಾರಪ್ಪ, ಮಂಜು ಟೇಲರ್, ರಮೇಶ, ಬುಡ್ಡಪ್ಪ, ಕೃಷ್ಣ,ಮಂಜುನಾಥ ಬಂಗಾರ ಗುಂಡು, ಕನಕಪ್ಪ, ರಮೇಶ, ಸಂಜೀವ, ನಾಗರಾಜ , ದೇವಪ್ಪ, ಹಾಗೂ ಭಕ್ತರು ಪಾಲ್ಗೊಂಡಿದ್ದರು
ವರದಿ:- ಮಂಜುನಾಥ ಕುಂಬಾರ