ಪ್ರಜಾವೀಕ್ಷಣೆಯ ಸೂಕ್ಷ್ಮ ನೋಟ :
BREAKING : ಕುಕನೂರು : ಹದಗೆಟ್ಟ ಗ್ರಾಮೀಣ ರಸ್ತೆ : ಸುಗಮ ಸಂಚಾರಕ್ಕೆ ಸಂಚಕಾರ..!

ಕುಕನೂರು : ಪಟ್ಟಣದ ಬಳಗೇರಿ-ಕುಕನೂರು ಮುಖ್ಯ ರಸ್ತೆಯ ಸಂಪೂರ್ಣ ಹದಗೆಟ್ಟಿದೆ, ರಸ್ತೆಯುದ್ದಕ್ಕೂ ತಗ್ಗು-ಗುಂಡಿ ಗಳು ಬಿದ್ದದರಿಂದ ಈ ಮಾರ್ಗದಲ್ಲಿ ಜನತೆ ನಿತ್ಯ ಸಮಸ್ಯೆ ಎದುರಿಸುತ್ತಿದ್ದು, ಗುದ್ನೇಪ್ಪನ ಮಠ ಜವಾಹರ್ ನವೋದಯ ಶಾಲೆಯ ಮುಂಭಾಗದ ಬಳಗೇರಿ-ಕುಕನೂರು ಮುಖ್ಯ ರಸ್ತೆಯಂತೂ ಸುಮಾರು 1 ರಿಂದ 2 ಅಡಿಯಷ್ಟು ಗುಂಡಿಗಳು ಬಿದ್ದು ಸುಗಮ ಸಂಚಾರಕ್ಕೆ ಸಂಚಕಾರ ಬಂದಿದೆ ಎನ್ನಬಹುದು.

ಕುಕನೂರು ತಾಲೂಕಿನ ಬಳಗೇರಿ,ಯಡಿಯಾಪೂರ, ಶಿರೂರು, ಮಂಗಳೂರು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಹದಗಟ್ಟಿದ್ದು, ಇದಕ್ಕೆ ಪ್ರಮುಖ ಕಾರಣ ಈ ಭಾಗದಲ್ಲಿ ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮವಾಗಿ ಹಳ್ಳಗಳಿಂದ ಮರಳನ್ನು ಅಗೆದು, ದೊಡ್ಡ ಪ್ರಮಾಣದಲ್ಲಿ ಸಾಗಿಸುವ ಅಕ್ರಮ ಮರಳು ದಂಧೆಯು ಯಾವುದೇ ಕಡಿವಾಣವಿಲ್ಲದೆ ನಡೆಯುತ್ತಿರುವುದು ಹಾಗಾಗಿ ಹಗಲು ರಾತ್ರಿ ಬೃಹತ್ ಟಿಪ್ಪರ್ ಲಾರಿಗಳು ಹಳ್ಳಿ ರಸ್ತೆಗಳಲ್ಲಿ ಸಂಚರಿಸುತ್ತವೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ. ಮುಖ್ಯ ರಸ್ತೆಗೆ ಕೂಡುವ ಬಳಗೇರಿ, ಶಿರೂರು ಗ್ರಾಮದ ರಸ್ತೆ ಹಾಳಾಗಿದ್ದು, ವಾಹನ ಸವಾರರು ಸೇರಿದಂತೆ ಜನಸಾಮಾನ್ಯರ ಸಂಚಾರಕ್ಕೆ ಸಂಚಾಕಾರ ಉಂಟಾಗಿದಂತು ವಿಪರ್ಯಾಸ ಸರಿ. ಕುಕನೂರು ತಾಲೂಕಿನ ರಸ್ತೆಗಳ ರೀಯಾಲಿಟಿ ಚೇಕ್ ಮಾಡಿದರೆ ಸತ್ಯ ಏನು? ಎಂಬುವುದು ಗೋತ್ತಾಗಲಿದೆ.
ಇತ್ತ ಶಾಸಕ ಬಸವರಾಜ ರಾಯರೆಡ್ಡಿ ಅವರು ಸಭೆ-ಸಮಾರಂಭಗಳಲ್ಲಿ ರಾಜ್ಯದಲ್ಲೇ “ಉತ್ತಮ ಗುಣಮಟ್ಟದ ರಸ್ತೆಗಳಿವೆ” ಎಂದು ಮಾತನಾಡುತ್ತಾರೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ, ರಸ್ತೆಗಳ ಸುಧಾರಣೆ ವಿಚಾರದಲ್ಲಿ ತದ್ವೀರುದ್ಧವಾಗಿದೆ ಎಂದು ಹೇಳಬಹುದು.
ವರದಿ :- ಚಂದ್ರು ಆರ್ ಭಾನಾಪೂರ್