LOCAL NEWS : ಜೀವಂತ ದೇವರ ದರ್ಶನವಾಗುವ ದೇವಾಲಯವೇ ಶಾಲೆ : ಈರಪ್ಪ ಗುಡಿಹಿಂದಿಲ್‌

You are currently viewing LOCAL NEWS : ಜೀವಂತ ದೇವರ ದರ್ಶನವಾಗುವ ದೇವಾಲಯವೇ ಶಾಲೆ : ಈರಪ್ಪ ಗುಡಿಹಿಂದಿಲ್‌

ಪ್ರಜಾ ವೀಕ್ಷಣೆ ಸುದ್ದಿ:-

LOCAL NEWS : ಜೀವಂತ ದೇವರ ದರ್ಶನವಾಗುವ ದೇವಾಲಯವೇ ಶಾಲೆ : ಈರಪ್ಪ ಗುಡಿಹಿಂದಿಲ್‌


ಕುಕನೂರು : ಪ್ರಪಂಚದಲ್ಲಿಯೇ ಜೀವಂತ ದೇವರುಗಳ ದರ್ಶನವಾಗುವ ದೇವಾಲಯ ಶಾಲೆಯೊಂದೇ. ಈ ಶಾಲೆಯಲ್ಲಿಯೇ ಪ್ರತಿಯೊಬ್ಬರು ಶಿಕ್ಷಣ ಮತ್ತು ಸಂಸ್ಕಾರವಂತರಾಗಿ ಹೊರಬಂದು ಜೀವನದಲ್ಲಿ ಯಶಸ್ವಿವ್ಯಕ್ತಿಗಳಾಗುತ್ತಾರೆ ಎಂದು ಶಿಕ್ಷಕ ಈರಪ್ಪ ಗುಡಿಹಿಂದಲ ಹೇಳಿದರು.


ತಾಲೂಕಿನ ಮಂಡಲಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 1998-99ನೆಯ ಹತ್ತನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ವೇಳೆಯಲ್ಲಿ ಶಿಕ್ಷಕ ಈರಪ್ಪ ಗುಡಿಹಿಂದಲಾಸ್ ಮಾತನಾಡಿ, ‘ಶಾಲೆ ಎಂಬ ಕಟ್ಟಡವು ಪ್ರತಿಯೊಬ್ಬರ ಜೀವನದಲ್ಲಿ ಮಹೋನ್ನತ ಸ್ಥಾನ ಹೊಂದಿರುವ ಕಟ್ಟಡವಾಗಿದ್ದು ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಿ ಜೀವನದಲ್ಲಿ ಯಶಸ್ವಿ ಯಾಗುವ ಮಾರ್ಗವನ್ನು ಕಂಡುಕೊಳ್ಳುವಂತೆ ನಿರ್ದೇಶನ ನೀಡುವ ಗುರುಗಳಾಗಿದ್ದಾರೆ.

ಹೆತ್ತವರು ಏನು ಅರಿಯದ 5 1/2 ವರ್ಷದ ಮಗುವನ್ನು ಕರೆದುಕೊಂಡು ಬಂದು ಶಾಲೆಯಲ್ಲಿರುವ ಜೀವಂತ ದೇವರೆನಿಸಿಕೊಳ್ಳುವ ಶಿಕ್ಷಣ ಕೈಯಲ್ಲಿ ಕೊಟ್ಟು ಉತ್ತಮವಾದ ಶಿಕ್ಷಣ, ಸಂಸ್ಕಾರ ಹಾಗೂ ಮಾರ್ಗದರ್ಶನಗಳನ್ನು ನೀಡುವಂತೆ ಮನವಿ ಸಲ್ಲಿಸುತ್ತಾರೆ ನಂತರ ಅವರ ಜೀವನದ ಯಶಸ್ವಿಯ ಅವಿಭಾಜ್ಯ ಅಂಗವೆಂದಂತೆ ಗುರುವಿನ ಸ್ಥಾನದಲ್ಲಿರುವ ಜೀವಂತ ದೇವರು ಏನು ಅರಿಯದ ಮಗುವನ್ನು ಸುಸಂಸ್ಕೃತ ನಾಗರಿಕನನ್ನಾಗಿ ನಿರ್ಮಿಸುವಲ್ಲಿ ಯಶಸ್ವಿಗೊಳ್ಳುತ್ತಾರೆ. ಅಂತಹ ಶಿಕ್ಷಕರಿಗೆ ಈ ದಿನ ವಂದನೆಯನ್ನು ಅರ್ಪಿಸುತ್ತಿರುವ ಶಿಷ್ಯ ಬಳಗದ ಕಾರ್ಯ ಸ್ಮರಣೀಯ ಎಂದು ಹೇಳಿದರು.


ಶಿಕ್ಷಕ ಎಸ್ ಎಸ್ ಹಿರೇಮಠ ಮಾತನಾಡಿ ಶಿಷ್ಯ ವರ್ಗದವರ ಒತ್ತಾಯದ ಮೇರೆಗೆ 30 ವರ್ಷಗಳ ನಂತರ ಈ ಗ್ರಾಮಕ್ಕೆ ಬಂದಿದ್ದು ತವರು ಮನೆಗೆ ಬಂದಂತಹ ಅನುಭವ ನನಗಾಗುತ್ತಿದೆ, ಶಿಕ್ಷಕರಿಗೆ ಶಿಷ್ಯ ಬಳಗದ ಪ್ರೀತಿ ವಿಶ್ವಾಸವೇ ನಿಜವಾದ ಆಸ್ತಿಗಳಾಗಿದ್ದು ವಿವಿಧ ರಂಗಗಳಲ್ಲಿ ಪ್ರಶಸ್ತಿ ಸಾಧಿಸಿದ ಶಿಕ್ಷಕವನ್ನು ನೋಡುವಂತಹ ಸಂದರ್ಭವನ್ನು ಪಡೆದುಕೊಂಡ ನಾವೇ ಧನ್ಯರು ಎಂದು ಭಾವಿಕರಾಗಿ ಹೇಳಿದರು.

ದೈಹಿಕ ಶಿಕ್ಷಕ ಪ್ರಶಾಂತ್ ಕುಮಾರ್ ಜೋಶಿ ಮಾತನಾಡಿ ನಾನು ಶಿಕ್ಷಕನಾಗಿ ವೃತ್ತಿ ಪ್ರಾರಂಭಿಸಿದ್ದು ನಂತರ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಿ ಸಾಕಷ್ಟು ಬಾರಿ ಮುಂಬಡ್ತಿ ಅವಕಾಶಗಳು ಬಂದರೂ ಸಹ ನಿರಾಕರಿಸಿದ್ದು ನನ್ನ ಕೊನೆಯ ದಿನದ ಸೇವೆಯವರೆಗೂ ಮಕ್ಕಳ ಮಧ್ಯದಲ್ಲಿಯೇ ಸೇವೆ ಸಲ್ಲಿಸಬೇಕೆಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರಲ್ಲವೇ ಶಾಲೆಯಲ್ಲಿ ಕ್ರೀಡಾ ವಿಭಾಗದಲ್ಲಿ ಯಶಸ್ಸು ಸಾಧಿಸುವ ವಿದ್ಯಾರ್ಥಿಗಳಿಗಾಗಿ ಹತ್ತು ಸಾವಿರ ರೂಪಾಯಿಗಳ ದತ್ತಿ ನಿಧಿಯನ್ನು ನೀಡುವುದಾಗಿ ಹೇಳಿದರು.

ಜಂಗಮ ಸಮಾಜದ ಕುಕನೂರು ತಾಲೂಕ ಕಾರ್ಯದರ್ಶಿ ಹರೀಶ್ವರಯ್ಯ ಮಾತನಾಡಿ ನಮ್ಮ ತಂದೆ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು ಅವರು ಇಂದು ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಬರದೇ ಇದ್ದ ಕಾರಣದಿಂದ ಅವರ ಪರವಾಗಿ ವೇದಿಕೆ ಮೇಲೆ ನನ್ನನ್ನು ಕರೆದು ಸನ್ಮಾನಿಸಿದ್ದು ನನ್ನ ತಂದೆಯ ಗುರುವಿನ ಸೇವೆಗೆ ನನಗೆ ಸಂದ ಗೌರವವಾಗಿದ್ದು ಇಂತಹ ಸಂದರ್ಭ ಕೇವಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದವರಿಗೆ ಮಾತ್ರ ದೊರೆಯಲು ಸಾಧ್ಯ ಎಂದರು.
ಹಳೆಯ ವಿದ್ಯಾರ್ಥಿಗಳೆಲ್ಲ ಶಿಕ್ಷಕರ ಪಾದ ಪೂಜೆ ಮಾಡಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಸೋಮಪ್ಪ ಎಸ್ ಶಾನಭೋಗ ವಹಿಸಿಕೊಂಡಿದ್ದು ಹಳೆಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಶಾಲೆಯ ಶಿಕ್ಷಕರು, ಹಳೆಯ ಹಾಗೂ ಪ್ರಶಸ್ತಿ ಸಾಲಿನ ವಿದ್ಯಾರ್ಥಿಗಳು, ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!