ಪ್ರಜಾ ವೀಕ್ಷಣೆ ಸುದ್ದಿ :-
BIG NEWS : ದಿ.ಕೆ.ಎಚ್.ಪಾಟೀಲ್‌ರವರ ಬದುಕು ಹಾಗೂ ರಾಜಕಾರಣ ಯುವ ಪೀಳಿಗೆಗೆ ಸ್ಪೂರ್ತಿ’ : ಸಚಿವ ಡಾ. ಜಿ. ಪರಮೇಶ್ವರ್
ಕುಕನೂರು : ‘ದಿ.ಕೆ.ಎಚ್.ಪಾಟೀಲ್‌ರವರ ಬದುಕು ಹಾಗೂ ಅವರ ರಾಜಕಾರಣ ಯುವ ಪೀಳಿಗೆಗೆ ಸ್ಪೂರ್ತಿ’ ಎಂದು ಗೃಹ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಇಂದು ತಾಲೂಕಿನ ಶೀರೂರು ಗ್ರಾಮದಲ್ಲಿ ಮಾಜಿ ಸಚಿವ ದಿ.ಕೆ.ಎಚ್.ಪಾಟೀಲ್ ಅವರ ಪ್ರತಿಮೆಯ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ದಶಿಸಿ ಮಾತನಾಡಿದ ಅವರು, ‘ದಿ. ಕೆ.ಎಚ್.ಪಾಟೀಲ್ ಸಾಹೇಬ್ರ ಬದುಕು ಸಂಘರ್ಷದಿಂದ ಕೂಡಿತ್ತು, ನಿರಂತರ ಅವರು ರೈತರು,ಬಡವರು, ಕಾರ್ಮಿಕರ ಪರ ಹೋರಾಟಗಳನ್ನು ಮಾಡುತ್ತಿದ್ದರು. ನಮ್ಮಂತ ಎಷ್ಟೋ ರಾಜಕಾರಣಿಗಳಿಗೆ ಮಾರ್ಗದರ್ಶಿಗಳಾಗಿದ್ದರು. ರಾಜಕಾರಣದಲ್ಲಿ ಅವರಿಗೆ ‘ಶಿಸ್ತಿನ ಸಿಪಾಯಿ’ ಎಂದೇ ಕರೆಸಿಕೊಳ್ಳುತ್ತಿದ್ದರು. ಅವರಿಗೆ ಈ ಭಾಗದ ಜನತೆಗೆ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ಹೊಂದಿವರಾಗಿದ್ದಾರೆ. ಪುನರ್ವಸತಿ ಗ್ರಾಮಗಳನ್ನಾಗಿ ಘೋಷಣೆ ಮಾಡುವುದರಲ್ಲಿ ಇವರದ್ದು ಮಹತ್ವದ ಪಾತ್ರವಿದೆ ಎಂದರು.

ಹಿರೇಹಳ್ಳ ಡ್ಯಾಂ ಹಿನ್ನೀರು ಸಂಗ್ರಹಗೊಂಡರೇ ಪ್ರವಾಹದ ಭೀತಿ ಇತ್ತು, ಶಿರೂರು, ಮುತ್ತಾಳ, ವೀರಾಪೂರ ಹಾಗೂ ಮುದ್ಲಾಪೂರ ಈ ನಾಲ್ಕು ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಲು ಸಹಕಾರ ನೀಡಿದ್ದ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಅಭಿನಂದನಾ ಪೂರಕವಾಗಿ ಅವರ ತಂದೆಯವರಾದ ಮಾಜಿ ಸಚಿವ ದಿ.ಕೆ.ಎಚ್.ಪಾಟೀಲ್ ಅವರ ಪ್ರತಿಮೆ ಇಂದು ತಾಲೂಕಿನ ಶಿರೂರು ಪುನರ್ವಸತಿ ಗ್ರಾಮದಲ್ಲಿ ಅನಾವರಣಗೊಂಡಿತು.
