BIG NEWS : ‘ರಾಯರೆಡ್ಡಿಯವರು ಈ ಕ್ಷೇತ್ರದ ಜನರ ಹೃದಯದಲ್ಲಿ ಆಳವಾಗಿ ನೆಲೆಯೂರಿದ್ದಾರೆ’ : ಸಚಿವ ಹೆಚ್‌ ಕೆ ಪಾಟೀಲ್‌!

You are currently viewing BIG NEWS : ‘ರಾಯರೆಡ್ಡಿಯವರು ಈ ಕ್ಷೇತ್ರದ ಜನರ ಹೃದಯದಲ್ಲಿ ಆಳವಾಗಿ ನೆಲೆಯೂರಿದ್ದಾರೆ’ : ಸಚಿವ ಹೆಚ್‌ ಕೆ ಪಾಟೀಲ್‌!

ಪ್ರಜಾ ವೀಕ್ಷಣೆ ಸುದ್ದಿ :-

ads place

BIG NEWS : ‘ರಾಯರೆಡ್ಡಿಯವರು ಈ ಕ್ಷೇತ್ರದ ಜನರ ಹೃದಯದಲ್ಲಿ ಆಳವಾಗಿ ನೆಲೆಯೂರಿದ್ದಾರೆ’ : ಸಚಿವ ಹೆಚ್‌ ಕೆ ಪಾಟೀಲ್‌!

ಮಾಜಿ ಸಚಿವ ದಿ.ಕೆ.ಎಚ್.ಪಾಟೀಲ್ ಅವರ ಪ್ರತಿಮೆ ಮುಂದೆ ಸಚಿವರುಗಳು

ಕುಕನೂರು : ‘ದಿ.ಕೆ.ಎಚ್.ಪಾಟೀಲ್‌ರವರಂತೆ ಶಾಸಕ ಬಸವರಾಜ ರಾಯರೆಡ್ಡಿಯವರು ಈ ಕ್ಷೇತ್ರದ ಜನರ ಹೃದಯದಲ್ಲಿ ಆಳವಾಗಿ ನೆಲೆಯೂರಿದ್ದಾರೆ. ಈ ಭಾಗದ ಶ್ರಯೋಭಿವೃದ್ದಿಗೆ ತುಂಬಾ ಬುದ್ದಿವಂತಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್‌ ಕೆ ಪಾಟೀಲ್‌ ಹೇಳಿದರು.

ads place

ಇಂದು ತಾಲೂಕಿನ ಶೀರೂರು ಗ್ರಾಮದಲ್ಲಿ ಮಾಜಿ ಸಚಿವ ದಿ.ಕೆ.ಎಚ್.ಪಾಟೀಲ್ ಅವರ ಪ್ರತಿಮೆಯ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ದಶಿಸಿ ಮಾತನಾಡಿದ ಅವರು ಹೆಚ್‌ ಕೆ ಪಾಟೀಲ್‌, ‘ರಾಯರೆಡ್ಡಿ ಶಾಸಕನಾಗುವ ಮುಂಚೆ ಇಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು, ಆದರೆ, ಅವರು ವಿಧಾನಸಭೆ ಸದಸ್ಯನಾದ ಬಳಿಕ ಆಗಿದ್ದೆ ಅಭಿವೃದ್ದಿ ಪರ್ವ ಎನ್ನಬಹುದು ಎಂದು ಹೇಳಿದರು.

ಕ್ಲಿಕ್ ಮಾಡಿ ..ಓದಿ…BIG NEWS : ದಿ.ಕೆ.ಎಚ್.ಪಾಟೀಲ್‌ರವರ ಬದುಕು ಹಾಗೂ ರಾಜಕಾರಣ ಯುವ ಪೀಳಿಗೆಗೆ ಸ್ಪೂರ್ತಿ’ : ಸಚಿವ ಡಾ. ಜಿ. ಪರಮೇಶ್ವರ್‌ !

ads place

ಈ ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿಗಳಿಗೆ ಉತ್ತಮ ರಸ್ತೆಗಳು, ಶಾಲೆ, ಆಸ್ಪತ್ರೆ, ಹೀಗೆ ಹತ್ತಲವಾರು ಅಭಿವೃದ್ದಿ ಕೇಲಸಗಳನ್ನು ತಂದು ಕ್ಷೇತ್ರದ ಜನರ ಹೃದಯದಲ್ಲಿ ಆಳವಾಗಿ ಬೇರೂರಿದ್ದಾರೆ. ಅತೀವ ವೇಗವಾಗಿ ಕೇಲಸ ನಿರ್ವಹಿಸುವ ಚತುರ ರಾಜಕಾರಣಿ ಬಸವರಾಜ ರಾಯರೆಡ್ಡಿಯವರೇ. ಸಾಮಾಜಿಕ ಶೈಕ್ಷಣೀಕ ಆರ್ಥಿಕವಾಗಿ ಈ ಭಾಗವೂ ಅಲ್ಪ-ಸ್ವಲ್ಪ ಮುಂದುವರೆದಿದೆ ಎಂದರೆ ಅದಕ್ಕೆ ಮೂಲ ಕಾರಣವೇ ಶಾಸಕ ಬಸವರಾಜ ರಾಯರೆಡ್ಡಿಯವರು ಎಂದರು.

ಕ್ಲಿಕ್ ಮಾಡಿ ..ಓದಿ… BIG NEWS : ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ : ಗೃಹ ಸಚಿವ ಡಾ.ಜಿ ಪರಮೇಶ್ವರ್ !

ಈ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ, ಕರ್ನಾಟಕ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ, ಸಣ್ಣ ನೀರಾವರಿ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು, ಕೊಪ್ಪಳ ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಡಾ. ಚಂದ್ರಶೇಖರ ವಿ. ಪಾಟೀಲ್, ಶರಣಗೌಡ ಅನ್ನದಾನಗೌಡ ಪಾಟೀಲ್ ಬಯ್ಯಾಪೂರ ಹಾಗೂ ಮುನಿರಾಬಾದ್ ತುಂಗಭದ್ರಾ ಯೋಜನೆಯ (ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಸನಸಾಬ ನಬಿಸಾಬ ದೋಟಿಹಾಳ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಭಾವಿ, ಮಾಜಿ ಜಿ.ಪಂ. ಉಪಾಧ್ಯಕ್ಷರಾದ ಯಂಕಣ್ಣ ಯರಾಶಿ ಹಾಗೂ ಹನಮಂತಗೌಡ ಪಾಟೀಲ್, ಕುಕನೂರಿನ ಸತ್ಯನಾರಾಯಣ ಹರಪನಹಳ್ಳಿ, ಮಾಜಿ ಜಿ.ಪಂ. ಸದಸ್ಯರಾದ ಅಶೋಕ ತೋಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಕಾಶಿಂಸಾಬ ದಿ ತಳಕಲ್, ಕುಕನೂರ ಗ್ಯಾರಂಟಿ ಈ ಯೋಜನೆಗಳ ಅನುಷ್ಟಾನ ಸಮಿತಿ ತಾಲೂಕ ಅಧ್ಯಕ್ಷ ಸಂಗಮೇಶ ಗುತ್ತಿ ಭಾಗವಹಿಸಿದ್ದರು.

Leave a Reply

error: Content is protected !!