PV NEWS : ವಸತಿ ನಿಲಯಗಳಿಗೆ ಬಾಡಿಗೆ ಕಟ್ಟಡ ಅಗತ್ಯ : ಗೊಂಡಬಾಳ, ಬೂದಗುಂಪಾ ಸರ್ಕಾರಿ ವಸತಿ ನಿಲಯಗಳು ಶಿಥಿಲಾವಸ್ಥೆ | 150 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ!
PV NEWS ಕನ್ನಡ 24×7 :
ಕೊಪ್ಪಳ, ಆ. 13 : ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಪರಿಶಿಷ್ಟ ಜಾತಿಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳನ್ನು ತಾತ್ಕಾಲಿಕವಾಗಿ ನಿರ್ವಹಿಸಲು ಬಾಡಿಗೆ ಕಟ್ಟಡಗಳಿಗಾಗಿ ಖಾಸಗಿ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗೊಂಡಬಾಳ ಹಾಗೂ ಬೂದಗುಂಪಾದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ನೆಲಸಮಗೊಳಿಸಲು ಶಿಫಾರಸು ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಗೆ ಪರ್ಯಾಯವಾಗಿ ಬಾಡಿಗೆ ಕಟ್ಟಡಗಳ ಅವಶ್ಯಕತೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.
150 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ..!
ಗೊಂಡಬಾಳ ಮತ್ತು ಬೂದಗುಂಪಾದಲ್ಲಿಯೇ ಬಾಡಿಗೆಗೆ ನೀಡಲು ಉದ್ದೇಶಿಸಿರುವ ಕಟ್ಟಡಗಳು ಇರಬೇಕು. ಪ್ರತಿ ಕಟ್ಟಡದಲ್ಲಿ 150 ವಿದ್ಯಾರ್ಥಿಗಳು ವಾಸಿಸಲು ಸೂಕ್ತ ಸ್ಥಳಾವಕಾಶ ಇರಬೇಕಾಗಿದೆ.
ಅಲ್ಲದೆ ಕಟ್ಟಡದಲ್ಲಿ ಕನಿಷ್ಠ 10 ಶೌಚಾಲಯಗಳು ಹಾಗೂ 10 ಸ್ನಾನಗೃಹಗಳು ಇರಬೇಕು. ವಿದ್ಯಾರ್ಥಿಗಳ ವಸತಿಗೆ ಅನುಕೂಲವಾಗುವಂತೆ ಕಟ್ಟಡವು ಸುಸಜ್ಜಿತವಾಗಿರಬೇಕೆಂದು ಇಲಾಖೆ ತಿಳಿಸಿದೆ.
ಬಾಡಿಗೆ ಕಟ್ಟಡ ನೀಡಲು ಆಸಕ್ತಿ ಹೊಂದಿರುವ ಖಾಸಗಿ ಕಟ್ಟಡ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಕಚೇರಿ ವೇಳೆಯಲ್ಲಿ ನೇರವಾಗಿ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ ಸಂಪರ್ಕಿಸಬಹುದು.
ಆಸಕ್ತರು ಸಹಾಯಕ ನಿರ್ದೇಶಕರು ಗ್ರೇಡ್–1, ಸಮಾಜ ಕಲ್ಯಾಣ ಇಲಾಖೆ ಕಚೇರಿ, ಹೊಸ ಆರ್‌ಟಿಓ ಕಚೇರಿ ಹತ್ತಿರ, ಡಾ. ಬಿ.ಆರ್. ಅಂಬೇಡ್ಕರ್ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ವಿಳಾಸಕ್ಕೆ ಸಂಪರ್ಕಿಸಬೇಕು.
ಹೆಚ್ಚಿನ ಮಾಹಿತಿಗಾಗಿ 08539–220590 ದೂರವಾಣಿ/ಫ್ಯಾಕ್ಸ್ ಸಂಖ್ಯೆಗೆ ಕರೆ ಮಾಡಬಹುದು. swf_kpl@yahoo.in ಇ-ಮೇಲ್ ಮೂಲಕವೂ ಸಂಪರ್ಕಿಸಬಹುದು.