You are currently viewing BIG NEWS : ಕುಕನೂರು | ಅಂಗನವಾಡಿಗಳ ಶಾಲಾ ಪೂರ್ವ ಶಿಕ್ಷಣಕ್ಕೆ ಗದಗ ಜಿಲ್ಲೆಯ ಮೇಲ್ವಿಚಾರಕರ ಮೆಚ್ಚುಗೆ; ಶಿಕ್ಷಣ ಚಟುವಟಿಕೆಗಳಿಗೆ ಶಹಬ್ಬಾಸ್!

BIG NEWS : ಕುಕನೂರು | ಅಂಗನವಾಡಿಗಳ ಶಾಲಾ ಪೂರ್ವ ಶಿಕ್ಷಣಕ್ಕೆ ಗದಗ ಜಿಲ್ಲೆಯ ಮೇಲ್ವಿಚಾರಕರ ಮೆಚ್ಚುಗೆ; ಶಿಕ್ಷಣ ಚಟುವಟಿಕೆಗಳಿಗೆ ಶಹಬ್ಬಾಸ್!

🔴 BIG NEWS : ಕುಕನೂರು | ಅಂಗನವಾಡಿಗಳ ಶಾಲಾ ಪೂರ್ವ ಶಿಕ್ಷಣಕ್ಕೆ ಗದಗ ಜಿಲ್ಲೆಯ ಮೇಲ್ವಿಚಾರಕರ ಮೆಚ್ಚುಗೆ; ಶಿಕ್ಷಣ ಚಟುವಟಿಕೆಗಳಿಗೆ ಶಹಬ್ಬಾಸ್!

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೊಪ್ಪಳ ಜಿಲ್ಲೆಯ ಅಂಗನವಾಡಿಗಳ ಚಟುವಟಿಕೆಗಳು ಮಾದರಿ – ಗದಗ ಜಿಲ್ಲೆಯ ಮೇಲ್ವಿಚಾರಕರ ಮೆಚ್ಚುಗೆ

ಕುಕನೂರು, ನ.17: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮವನ್ನು ವೀಕ್ಷಿಸಿ, ಅದರ ಮಾದರಿಯನ್ನು ಗದಗ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿಯೂ ಅಳವಡಿಸಿಕೊಳ್ಳುವ ಉದ್ದೇಶದಿಂದ ಗದಗ ಜಿಲ್ಲೆಯ 36 ಅಂಗನವಾಡಿ ಮೇಲ್ವಿಚಾರಕರು ಕೊಪ್ಪಳ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಶೈಕ್ಷಣಿಕ ಭೇಟಿ ನೀಡಿದರು.

ನ.16ರಂದು ಜಿಲ್ಲೆಯ ತಳಕಲ್, ಮಂಡಲಗೇರಿ, ಇಟಗಿ, ಬಾನಾಪುರ, ಲಕ್ಷ್ಮಾಪುರ ಹಾಗೂ ಕೋಳೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಮೇಲ್ವಿಚಾರಕರು, ಮಕ್ಕಳಿಗಾಗಿ ಅನುಷ್ಠಾನಗೊಳ್ಳುತ್ತಿರುವ ಶಾಲಾ ಪೂರ್ವ ಶಿಕ್ಷಣದ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿದರು.

ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ನಡೆದ ವೀಕ್ಷಣೆಯಲ್ಲಿ ಮುಕ್ತ ಆಟ, ಪ್ರಾರ್ಥನೆ, ಅಂಗನವಾಡಿ ನಿಯಮಗಳು, ಹೆಸರಿನ ಚೀಟಿ, ಕ್ಯಾಲೆಂಡರ್, ಹವಾಮಾನ ಪರಿಚಯ, ಕಥೆ ಹೇಳುವುದು, ಅಭಿನಯ ಗೀತೆ, ನಾಟ್ಯ ಮತ್ತು ಸಂಗೀತ, ಆಟಗಳು, ಚರ್ಚೆ, ಕ್ರಿಯಾತ್ಮಕ ಚಟುವಟಿಕೆಗಳು ಹಾಗೂ ಪುನರಾವಲೋಕನ ಸೇರಿದಂತೆ ಹಲವು ಕಲಿಕಾ ಚಟುವಟಿಕೆಗಳನ್ನು ಅಂಗನವಾಡಿ ಶಿಕ್ಷಕರು ಮಕ್ಕಳೊಂದಿಗೆ ಪರಿಣಾಮಕಾರಿಯಾಗಿ ನಡೆಸಿಕೊಟ್ಟರು.

ಎಳೆಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಭಾಷಾ ಕೌಶಲ, ಬೌದ್ಧಿಕ ಸಾಮರ್ಥ್ಯ, ಸೃಜನಶೀಲತೆ, ಸಂವಹನ ಕೌಶಲ ಹಾಗೂ ಸಾಮಾಜಿಕ ಮನೋಭಾವ ಬೆಳೆಸಲು ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ. ಆಟ, ಹಾಡು, ನೃತ್ಯ, ಕಥೆ ಮತ್ತು ಚರ್ಚೆಗಳ ಮೂಲಕ ಮಕ್ಕಳು ಸಂತೋಷದಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಮೇಲ್ವಿಚಾರಕರು ಗಮನಿಸಿದರು.

ಅಂಗನವಾಡಿ ಶಿಕ್ಷಕರು ನಿರಂತರವಾಗಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರೆ, ಮಕ್ಕಳು ಉತ್ಸಾಹದಿಂದ ಸ್ಪಂದಿಸಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ಮೇಲ್ವಿಚಾರಕಿಯರು ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ಅನುಸರಿಸುತ್ತಿರುವ ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಿಗೆ ಕಲಿಕೆಯನ್ನು ಸರಳ, ಆಸಕ್ತಿದಾಯಕ ಹಾಗೂ ಪರಿಣಾಮಕಾರಿಯಾಗಿಸುವ ಉತ್ತಮ ಪಠ್ಯಕ್ರಮ ಮತ್ತು ಚಟುವಟಿಕೆಗಳು ಇಲ್ಲಿ ಅಳವಡಿಕೆಯಾಗಿವೆ. ಇದೇ ಮಾದರಿಯನ್ನು ಗದಗ ಜಿಲ್ಲೆಯ ಅಂಗನವಾಡಿಗಳಲ್ಲಿಯೂ ಅನುಷ್ಠಾನಗೊಳಿಸಲು ಆಸಕ್ತಿ ಮತ್ತು ಸಂತೋಷವಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ಶೈಕ್ಷಣಿಕ ಭೇಟಿಯಲ್ಲಿ ಮೇಲ್ವಿಚಾರಕಿ ಜಯಲಕ್ಷ್ಮಿ ಮೆಣಸಿನಕಾಯಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಅಶೋಕ್ ಸಿದ್ದಪ್ಪ ಕುರಿ, ಅಂಗನವಾಡಿ ಶಿಕ್ಷಕರು, ಸಹಾಯಕಿಯರು ಹಾಗೂ ಮಕ್ಕಳು ಭಾಗವಹಿಸಿದ್ದರು.

ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ನಡೆಯುತ್ತಿರುವ ಶಾಲಾ ಪೂರ್ವ ಶಿಕ್ಷಣದ ಉತ್ತಮ ಚಟುವಟಿಕೆಗಳು ಇತರ ಜಿಲ್ಲೆಗಳಿಗೂ ಮಾದರಿಯಾಗುತ್ತಿರುವುದು ಮಕ್ಕಳ ಗುಣಮಟ್ಟದ ಆರಂಭಿಕ ಶಿಕ್ಷಣದ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.

 

“ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣದ ಮೂಲಕ ಮಕ್ಕಳಲ್ಲಿ ಭಾಷಾ ಕೌಶಲ, ಬೌದ್ಧಿಕ ಸಾಮರ್ಥ್ಯ ಹಾಗೂ ಸೃಜನಶೀಲತೆ ಬೆಳೆಸಲು ವಿವಿಧ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಸೇರಿ ವಿವಿಧ ತಾಲೂಕಿನ ಶಿಕ್ಷಣ ಮಾದರಿಯನ್ನು ವೀಕ್ಷಿಸಲು ಗದಗ ಜಿಲ್ಲೆಯ 36 ಮೇಲ್ವಿಚಾರಕರು ಆಗಮಿಸಿರುವುದು ಸಂತಸದ ಸಂಗತಿ. ಮಕ್ಕಳ ಗುಣಮಟ್ಟದ ಆರಂಭಿಕ ಶಿಕ್ಷಣಕ್ಕೆ ನಮ್ಮ ಅಂಗನವಾಡಿಗಳ ಚಟುವಟಿಕೆಗಳು ಮಾದರಿಯಾಗುತ್ತಿರುವುದು ಹೆಮ್ಮೆಯ ವಿಷಯ.”

— ಬೆಟದಪ್ಪ ಮಾಳೇಕೊಪ್ಪ, ಸಿಡಿಪಿಓ, ಯಲಬುರ್ಗಾ-ಕುಕನೂರು.

Prajavikshane

Chandru R Bhanapaur

Leave a Reply

error: Content is protected !!