LOCAL NEWS : ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪಿಯು ವಸತಿ ಕಾಲೇಜು ಇಂದು ನೂತನ ಕಟ್ಟಡದ ಲೋಕಾರ್ಪಣೆಗೆ ಕ್ಷಣಗಣನೆ
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ, ಮೇ 03 : ಇಲ್ಲಿನ ಕೋಳೂರು-ಕಾಟ್ರಳ್ಳಿ ಗ್ರಾಮದ ಹತ್ತಿರ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪಿಯು ವಸತಿ ಕಾಲೇಜು ಇಂದು ನೂತನ ಕಟ್ಟಡದ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ.

ಶ್ರೀ ಮಠವು ನಾಡಿನ ಮಕ್ಕಳ ಏಳ್ಗೆಗಾಗಿ ಶಿಕ್ಷಣ ಸಂಸ್ಥೆಯಾಗಿದ್ದು, ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಗವಿಮಠವು ಆಶ್ರಯ ತಾಣವಾಗಿದೆ. 1951ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಆರಂಭವಾದ ಗವಿಸಿದ್ದೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯದಲ್ಲಿ ಇಂದು 5000 ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಬೆಳಗಿಸಿಕೊಳ್ಳುತ್ತಿದ್ದಾರೆ.
