You are currently viewing ಮುದಗಲ್ಲ :- ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮನವಿ..

ಮುದಗಲ್ಲ :- ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮನವಿ..

ಮುದಗಲ್ಲ ವರದಿ

ಮುದಗಲ್ಲ :- ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮನವಿ..

ಬೀದಿ ನಾಯಿಗಳ ಹಾವಳಿ ಕಡಿವಾಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಒತ್ತಾಯ..

ಮುದಗಲ್ಲ :- ಬೀದಿ ನಾಯಿಗಳ ಹಾವಳಿಯಿಂದ ಚಿಕ್ಕ ಮಕ್ಕಳು ಹಾಗೂ ಜಾನುವಾರುಗಳನ್ನು ರಕ್ಷಿಸುವ ವಂತೆ ಪುರಸಭೆಯ ಮುಖ್ಯಾಧಿಕಾರಿ ಪ್ರವೀಣ ಕುಮಾರ್ ಬೋಗರ್ ಹಾಗು ನಾಡ ಕಛೇರಿಗೆ ಉಪ ತಹಶೀಲ್ದಾರಾದ ತುಳುಜಾರಾಮ್ ಸಿಂಗ್ ಅವರಿಗೆ ಮನವಿ ಪತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಅಧ್ಯಕ್ಷರಾದ ಎಸ್.ಎ.ನಯೀಮ್ ಹಾಗೂ ಸಿದ್ದರಾಮಯ್ಯ ಸ್ವಾಮಿ, ಶಾಲಿಮಠ ಅವರ ನೇತೃತ್ವದಲ್ಲಿ ಸಲ್ಲಿಸಲಾಯಿತು

ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ಹಿಂದೆಂದೂ ಕಂಡರಿಯದಂತಹ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ, ಹಗಲು ರಾತ್ರಿ ಬೀದಿ ನಾಯಿಗಳು ಗುಂಪು ಗುಂಪಾಗಿ ಪಟ್ಟಣದ ಬೀದಿಗಳಲ್ಲಿ ಓಡಾಡುತ್ತಿದ್ದು ಚಿಕ್ಕ ಮಕ್ಕಳು, ಶಾಲೆಗೆ ಹೋಗುವ ವಿದ್ಯಾರ್ಥಿ ಗಳು, ವೃದ್ದರು, ಮಹಿಳೆಯರು ಮತ್ತು ಜಾನುವಾರುಗಳಾದ ಕುರಿ, ಮೇಕೆಗಳ ಮೇಲೆ ಗುಂಪು ಗುಂಪಾಗಿ ದಾಳಿ ಮಾಡುತ್ತಿದ್ದು ಇದರಿಂದಾಗಿ ಸಾರ್ವಜನಿಕರು ತುಂಬಾ ಭಯದ ವಾತಾವರಣ ದಲ್ಲಿ ವಾಸಿಸುತ್ತಿದ್ದಾರೆ ಇದರ ಬಗ್ಗೆ ಸಾರ್ವಜನಿಕರು ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರು ಬೀದಿ ನಾಯಿಗಳ ಹಾವಳಿ ತಪ್ಪಿಲ್ಲ, ಒಂದೇ ವಾರದಲ್ಲಿ ಎರಡು ಬೇರೆ ಬೇರೆ ವಾರ್ಡ್ಗಳಲ್ಲಿ ಹಾಡು ಹಗಲೇ ಎರಡು ಮೇಕೆ ಗಳ ಮೇಲೆ ಬೀದಿ ನಾಯಿಗಳು ಗುಂಪು ಗುಂಪಾಗಿ ದಾಳಿ ಮಾಡಿ ಕಚ್ಚಿ ಹಾಕಿದ್ದರಿಂದ ಎರಡು ಮೇಕೆಗಳು ತಮ್ಮ ಜೀವವನ್ನು ಕಳೆದುಕೊಂಡಿವೆ ಇದರಿಂದಾಗಿ ಸಾರ್ವಜನಿಕರು ಭಯಭೀತ ರಾಗಿದ್ದಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ

 

ರಾತ್ರಿ ವೇಳೆ 15 ರಿಂದ 20 ಬೀದಿ ನಾಯಿಗಳು ಗುಂಪು ಗುಂಪಾಗಿ ಬೊಗಳುತ್ತಾ ಪಟ್ಟಣದ ಬೀದಿಗಳಲ್ಲಿ ಮತ್ತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿದ್ದು ಬೇರೆ ಬೇರೆ ಊರುಗಳಿಂದ ಪ್ರಯಾಣ ಮಾಡಿ ತಮ್ಮ ಮನೆಗಳಿಗೆ ರಾತ್ರಿ ವೇಳೆ ವಾಪಸ್ ಆಗುತ್ತಿರುವ ಸಾರ್ವಜನಿಕರ ಮೇಲೆ ಸಹ ಬೀದಿ ನಾಯಿಗಳು ಹೊಗಳುತ್ತಾ ದಾಳಿ ನಡೆಸುವ ಹಲವಾರು ಉದಾಹರಣೆಗಳು ಪಟ್ಟಣದಲ್ಲಿ ನಡೆದಿದೆ ಆದರೂ ಪುರಸಭೆಯ ಅಧಿಕಾರಿಗಳು ಮೌನವಹಿಸಿದ್ದು ಇನ್ನುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಆದಕಾರಣ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪುರಸಭೆಯ ಮುಂದೆ ಸಾರ್ವಜನಿಕರೊಂದಿಗೆ ಉಗ್ರ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಅಧ್ಯಕ್ಷರಾದ ಎಸ್.ಎ.ನಯೀಮ್ ಎಚ್ಚರಿಕೆ ನೀಡಿದರು

ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರಾದ ಸಾಬು ಹುಸೇನ್, ಜಮೀರ್ ಪಾಷಾ, ಮೆಹಬೂಬ್ ಕಡ್ಡಿಪುಡಿ, ಸಿದ್ದಯ್ಯ ಸ್ವಾಮಿ ಸಾಲಿಮಠ, ರೆಹಮಾನ ದೂಲಾ, ನಾಗರಾಜ್ ನಾಯಕ, ಜಮಾಲಿ ಸಾಬ್, ಬಾಲಪ್ಪ ಉಪ್ಪಾರ್, ಭೀಮಣ್ಣ ಉಪ್ಪಾರ್, ಇಮಾಮ್ ಹುಸೇನ್, ಅಬ್ದುಲ್ ಮಜೀದ್, ಚನ್ನಪ್ಪ ಉಪ್ಪಾರ್ , ರೇಷ್ಮಾ ಬಿ, ಚಾಂದ್ ಬೇಗಮ್, ಐರೋನ್ ಬಿ, ರಮೇಶ್ ಕೊಳ್ಳಿ, ಉಪಸ್ಥಿತರಿದ್ದರು.

ವರದಿ :-ಮಂಜುನಾಥ ಕುಂಬಾರ 

Prajavikshane

Chandru R Bhanapaur

Leave a Reply

error: Content is protected !!