IMPACT STORY : ಕುಕನೂರು ತಹಶೀಲ್ದಾರ್‌ ಕಾರ್ಯಾಲಯದಲ್ಲಿ “ಆಧಾರ್ ಸೇವಾ ಕೇಂದ್ರ” ಆರಂಭ..! : ಪ್ರಜಾ ವೀಕ್ಷಣೆ ವಿಶೇಷ ವರದಿ “ಫಲಶೃತಿ”.!

You are currently viewing IMPACT STORY : ಕುಕನೂರು ತಹಶೀಲ್ದಾರ್‌ ಕಾರ್ಯಾಲಯದಲ್ಲಿ “ಆಧಾರ್ ಸೇವಾ ಕೇಂದ್ರ” ಆರಂಭ..! : ಪ್ರಜಾ ವೀಕ್ಷಣೆ ವಿಶೇಷ ವರದಿ “ಫಲಶೃತಿ”.!

ಪ್ರಜಾ ವೀಕ್ಷಣೆ ವಿಶೇಷ ವರದಿ “ಫಲಶೃತಿ“….!

IMPACT STORY : ಕುಕನೂರು ತಹಶೀಲ್ದಾರ್‌ ಕಾರ್ಯಾಲಯದಲ್ಲಿ “ಆಧಾರ್ ಸೇವಾ ಕೇಂದ್ರ” ಪುನರಾರಂಭ..! 

 

ಕುಕುನೂರು : ಕುಕನೂರು ತಾಲೂಕಿನಾದ್ಯಂತ ಕಳೆದ 2 ತಿಂಗಳಿಂದ ಆಧಾರ್ ಸೇವಾ ಕೇಂದ್ರಗಳು ಸ್ಥಗಿತಗೊಂಡಿತ್ತು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡ ಬಳಿಕ “ಪ್ರಜಾ ವೀಕ್ಷಣೆ ಡಿಜಿಟಲ್‌ ಮಾಧ್ಯಮ”ದಲ್ಲಿ ಈ ವಿಸ್ತೃತ ವರದಿ ಮಾಡಿತ್ತು, 15 ದಿನಗಳ ಒಳಗಾಗಿ ಆಧಾರ್ ಸೇವಾ ಕೇಂದ್ರ ಪುನರಾರಂಭವಾಗಿದೆ ಎಂಬುವುದು ಸಂತಸದ ಸಂಗತಿ.

ಇದೇ ತಿಂಗಳ ಆಗಷ್ಟ್ 7 ರಂದು “ಪ್ರಜಾ ವೀಕ್ಷಣೆ ವಿಶೇಷ ವರದಿ : “SPECIAL STORY : ಕುಕನೂರು ತಾಲೂಕಿನಾದ್ಯಂತ “ಆಧಾರ್ ಸೇವಾ ಕೇಂದ್ರ” ಸ್ಥಗಿತ..! : ಸಾರ್ವಜನಿಕರ ಪರದಾಟ..!!” ಎಂಬ ಶೀರ್ಷಿಕೆಯಡಿಲ್ಲಿ ವಿಶೇಷ ವರದಿಯನ್ನು ಮಾಡಲಾಗಿತ್ತು.

ಕುಕನೂರು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಿನ್ನೆಯಿಂದ ಆಧಾರ್‌ಗೆ ಸಂಬಂಧಿಸಿದ ಎಲ್ಲಾ ರೀತಿಯ ಕಾರ್ಯವೈಖರಿಗಳು ನಡೆಯುತ್ತಿದ್ದು, ಸಾರ್ವಜನಕರು ಆಧಾರ್‌ ಸಂಬಂಧಿತ ಕಾರ್ಯಗಳಿಗೆ ಕೊಪ್ಪಳ,ಯಲಬುರ್ಗಾ ಪಟ್ಟಣಕ್ಕೆ ಹೊಗದೆ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಆಧಾರ್‌ ಸೇವಾ ಕೇಂದ್ರವೂ ಪುನರಾರಂಭಗೊಂಡಿದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಕುಕನೂರು ತಹಶೀಲ್ದಾರ್ ಕಾರ್ಯಾಲಯ

Leave a Reply

error: Content is protected !!