LOCAL NEWS : “ಹೊಸಪೇಟೆಯಲ್ಲಿ ಆ.31 ರಿಂದ ಸೆ.28ರ ವರೆಗೆ ಉಚಿತ ನಾಟಕ ಶಿಬಿರ”

You are currently viewing LOCAL NEWS : “ಹೊಸಪೇಟೆಯಲ್ಲಿ ಆ.31 ರಿಂದ ಸೆ.28ರ ವರೆಗೆ ಉಚಿತ ನಾಟಕ ಶಿಬಿರ”

“ಹೊಸಪೇಟೆಯಲ್ಲಿ ಆ.31 ರಿಂದ ಸೆ.28ರ ವರೆಗೆ ಉಚಿತ ನಾಟಕ ಶಿಬಿರ”

 

ಹೊಸಪೇಟೆ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಕಾರದಿಂದ ಹೊಸಪೇಟೆಯ ಬಹುತ್ವ ಪ್ರತಿಷ್ಠಾನ(ರಿ.) ವತಿಯಿಂದ
ಯುವರಂಗ -2025 ಉಚಿತ ನಾಟಕ ತರಬೇತಿ ಶಿಬಿರವನ್ನು ಇದೇ ಆಗಸ್ಟ್ 31 ರಿಂದ ಸೆಪ್ಟೆಂಬರ್28 ರ ವರೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಂತ ಶಿಶುನಾಳ ಶರೀಫ ರಂಗಮಂದಿರ ಭಾವೈಕ್ಯತಾ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಮತ್ತು ಶಿಬಿರದ ನಿರ್ದೇಶಕಿ ಡಾ.ಸಹನಾ ಪಿಂಜಾರ್ ಹಾಗೂ ನೀನಾಸಂ ಪದವೀಧರ, ಶಿಬಿರದ ಸಂಚಾಲಕ ರಿಯಾಜ್ ಸಿಹಿಮೊಗೆ ಅವರು ತಿಳಿಸಿದರು.

ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ನಾಟಕ ತರಬೇತಿಯು ಪ್ರತಿದಿನ ಸಂಜೆ 4 ರಿಂದ ರಾತ್ರಿ 8ರ ವರೆಗೆ ನಡೆಯಲಿದ್ದು, ತರಬೇತಿಗೆ ಮೊದಲು ಬರುವರಿಗೆ ಆಸಕ್ತಿ ಮತ್ತು ಬದ್ಧತೆ ಇರುವರಿಗೆ ಮೊದಲ ಆದ್ಯತೆ ನೀಡಲಾಗುವುದು ಮತ್ತು ಶಿಬಿರಾರ್ಥಿಗಳು 15 ವರ್ಷ ಮೇಲ್ಪಟ್ಟ ವಯೋಮಿತಿ ಹೊಂದಿರಬೇಕು ಎಂದರು.

ಈ ಶಿಬಿರದಲ್ಲಿ ರಂಗಾಟಗಳು, ರಂಗ ಸಂಗೀತ,  ಪಾತ್ರಾಭಿನಯ, ದೈಹಿಕ ವ್ಯಾಯಾಮ, ರಂಗಧ್ವನಿ ಅಭ್ಯಾಸ, ಆಶು ವಿಸ್ತರಣೆ ಮತ್ತು ನಾಟಕ ವೀಕ್ಷಣೆ,  ನಾಟಕ ಕಟ್ಟುವಿಕೆ, ನಾಟಕದ ಓದು ಕಲಿಸಿಕೊಡಲಾಗುವುದು. ಚರ್ಚೆ ಹಾಗೂ ನಾಟಕ ಪ್ರದರ್ಶನ ಜೊತೆಗೆ ಸಾಧಕರೊಂದಿಗೆ ಸಂವಾದವೂ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ನಾಟಕ ಶಾಲೆ ದೆಹಲಿ ಮತ್ತು ನೀನಾಸಂ ಪದವೀಧರರು ತರಬೇತಿ ಪಡೆದ ಅನುಭವ ವುಳ್ಳ ಕಲಾವಿದರು ತರಬೇತಿ ನೀಡುತ್ತಾರೆ. ಸೀಮಿತ ಪ್ರವೇಶಗಳು ಇದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವದು ಎಂದರು.

ಹೆಚ್ಚಿನ ಮಾಹಿತಿಗೆ ಶಿಬಿರದ ಆಯೋಜಕರ ಮೊಬೈಲ್ ಸಂಖ್ಯೆ 9901944706, 9743621655 ಕರೆ ಮಾಡಬಹುದಾಗಿದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು  ಪತ್ರಿಕಾ ಪ್ರಕಟಣೆ ಮೂಲಕ ಅವರು ಕೋರಿದ್ದಾರೆ.

Leave a Reply

error: Content is protected !!