LOCAL NEWS : ಬಂಜಾರ, ಬೋವಿ, ಕೊರಮ-ಕೊರಚ ಸೇರಿ 69 ಉಪ ಜಾತಿಗಳಿಗೆ ಅನ್ಯಾಯ : ಇದೇ 29 ರಂದು ಬೃಹತ್ ಪ್ರತಿಭಟನೆ : ಸುರೇಶ ಬಳೂಟಗಿ
ಕುಕನೂರು : “ಒಳಮೀಸಲಾತಿ ನೀಡುವ ವಿಚಾರದಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಜನಾಂಗದವರಿಗೆ ಮಾಡಿದ ಅನ್ಯಾಯವನ್ನು ಖಂಡಿಸಿ ಎಲ್ಲಾ ಸಮಾಜದವರು ಸೇರಿ ಕುಕನೂರು ಪಟ್ಟಣದಲ್ಲಿ ಆಗಷ್ಟ್ 29ರಂದು (ಶುಕ್ರವಾರ) ಬೆಳಗ್ಗೆ 11 ಘಂಟೆಗೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಗೋರ್ ಸೇನಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ತಿಳಿಸಿದ್ದಾರೆ.
ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡದ ಅವರು, “ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಪ್ರತಿಭಟನೆ ನಡೆಸಿ ಶ್ರೀವೀರಭದ್ರಪ್ಪ ಶಿರೂರು ವೃತ್ತದಲ್ಲಿ ತಹಸೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಕೊಡುತ್ತೇವೆ ಎಂದು ಸುರೇಶ ಬಳೂಟಗಿ ತಿಳಿಸಿದರು.
ಒಳ ಮೀಸಲಾತಿ ವಿಚಾರದಲ್ಲಿ ಕೂಡ 69 ಉಪಜಾತಿಗಳಿಗೆ ಕೇವಲ 5 % ಮೀಸಲಾತಿ ಕಲ್ಪಿಸಿರುವುದು ಬಹುದೊಡ್ಡ ಅನ್ಯಾಯ ಸರ್ಕಾರ ಮಾಡುತ್ತಿದೆ. ಈ ಸಮಸ್ಯೆಯನ್ನು ಸರಕಾರ ಗಮನಿಸಿ ಆದಷ್ಟು ಬೇಗ ಬಗೆಹರಿಸದಿದ್ದರೇ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮುಂಬರುವ ಚುನಾವಣೆಯಲ್ಲಿ ನಮ್ಮ ಸಮಾಜದವರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಬಳಗೇರಿ, ಯಮನೂರಪ್ಪ ಭಾನಾಪುರ, ನಿವೃತ್ತ ಉಪನ್ಯಾಸಕರು ಹೋಬಣ್ಣ ಚವ್ಹಾಣ, ಹನುಮಂತಪ್ಪ ಚವ್ಹಾಣ, ಕುಮಾರ್ ಬಳಗೇರಿ, ವಿಶ್ವನಾಥ್ ಕುಣಕೇರಿ ಮತ್ತಿತರರು ಇದ್ದರು.