LOCAL BREAKING : ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಸರ್ಕಾರಿ ಸೇವೆಯಿಂದ ಅಮಾನತು ಮಾಡಲು ಒತ್ತಾಯ..!

You are currently viewing LOCAL BREAKING : ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಸರ್ಕಾರಿ ಸೇವೆಯಿಂದ ಅಮಾನತು ಮಾಡಲು ಒತ್ತಾಯ..!

ಮುದಗಲ್ಲ ವರದಿ..

LOCAL BREAKING : ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಸರ್ಕಾರಿ ಸೇವೆಯಿಂದ ಅಮಾನತು ಮಾಡಲು ಒತ್ತಾಯ..!
ಮುದಗಲ್ : ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೊತ್ತದೊಡ್ಡಿ ಪ್ರಿನ್ಸಿಪಾಲ್‌ರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಮುದಗಲ್ ಕಾರ್ಯನಿರತ ಪ್ರತಕರ್ತರ ಸೋಮುವಾರ ಕಂದಾಯ ನಿರೀಕ್ಷಕ ಶಂಕ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕೊತ್ತದೊಡ್ಡಿ ವಸತಿ ಶಾಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಗಳನ್ನು ಅರಕೇರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರು ವಿಡಿಯೋ, ಫೋಟೊ ಚಿತ್ರೀಕರಣ ಮಾಡುತ್ತಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಪ್ರಿನ್ಸಿಪಾಲ್ ಸುರೇಶ ವರ್ಮಾ ಮಾಹಿತಿ ಮತ್ತು ಚಿತ್ರ ಸಂಗ್ರಹಿಸಿದ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಖಂಡನೀಯವಾಗಿದೆ.ನಿಷ್ಪಕ್ಷಪಾತವಾಗಿ, ನಿಷ್ಟುರವಾದಿಯಾಗಿ ಸೇವೆಗೈಯುವವರಿಗೆ ಅಗೌರವ ತೋರಿದ್ದಾರೆ.

ಇಂತಹ ಬೇಜವಬ್ದಾರಿಯುತ ಅಧಿಕಾರಿಗಳಿಂದ ಪತ್ರಕರ್ತರ ಮೇಲೆ ನಿರಂತರ ಅಪಮಾನಗಳು ನಡೆಯುತ್ತಿವೆ. ಇದರಿಂದ ಪತ್ರಕರ್ತರು ಮಾನಸಿಕವಾಗಿ ನೊಂದಿದ್ದಾರೆ. ಇಡೀ ಮಾಧ್ಯಮ ಕ್ಷೇತ್ರವನ್ನು ಮನಬಂದಂತೆ ಹೀಯಾಳಿಸಿ, ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಾಲನನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರಾದ ರಾಘವೇಂದ್ರ ಗುಮಾಸ್ತೆ,ದೇವಪ್ಪ ರಾಠೋಡ,ಶಶಿಧರ ಕಂಚಿಮಠ,ದೇವಣ್ಣ ಕೋಡಿಹಾಳ,ಶಿವರಾಜ ಸುಂಕದ,ಚಂದ್ರಶೇಖರ್ ಗಂಗಾವತಿ,ಅಮ್ಜದ್ ಕಂದಗಲ್ ಬಸವರಾಜ ಹೂನೂರು,ವಾಹೀದ್ ಖುರೇಷಿ,ಸುರೇಶ್  ವಿಶ್ವಕರ್ಮ ಸೇರಿದಂತೆ ಇತರರು ಇದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!