LOCAL NEWS : ಕಾಂಗ್ರೆಸ್ ಸರ್ಕಾರದಿಂದ ಬಂಜಾರ ಸಮುದಾಯದಕ್ಕೆ ಬಹುದೊಡ್ಡ ಅನ್ಯಾಯ! : ಸುರೇಶ ಬಳೂಟಗಿ

You are currently viewing LOCAL NEWS : ಕಾಂಗ್ರೆಸ್ ಸರ್ಕಾರದಿಂದ ಬಂಜಾರ ಸಮುದಾಯದಕ್ಕೆ ಬಹುದೊಡ್ಡ ಅನ್ಯಾಯ! : ಸುರೇಶ ಬಳೂಟಗಿ

ಪ್ರಜಾ ವೀಕ್ಷಣೆ ಸುದ್ದಿ :-

LOCAL NEWS : ಕಾಂಗ್ರೆಸ್ ಸರ್ಕಾರದಿಂದ ಬಂಜಾರ ಸಮುದಾಯದಕ್ಕೆ ಬಹುದೊಡ್ಡ ಅನ್ಯಾಯ! : ಸುರೇಶ ಬಳೂಟಗಿ

ಕುಕನೂರು : “ಕಾಂಗ್ರೆಸ್ ಸರ್ಕಾರದಿಂದ ಬಂಜಾರ ಸಮುದಾಯದಕ್ಕೆ ಬಹುದೊಡ್ಡ ಅನ್ಯಾಯ ಮಾಡಿದೆ. ಕಾಂಗ್ರೆಸ್ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ ನಾವು ದಲಿತರ ವಿರೋಧಿಗಳು ಅಂತ” ಎಂದು ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆರೋಪಿಸಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡದ ಅವರು, ‘ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಬಂಜಾರ ಸಮಾಜದವರು ಯಾವುದೇ ಒಬ್ಬ ಮಂತ್ರಿ ಕೂಡ ಆಗಿಲ್ಲ, ಈ ಹಿಂದೆ ಮಾಜಿ ಶಾಸಕ ಭೀಮಾ ನಾಯ್ಕ್ ಕೆಎಂಎಫ್ ಅಧ್ಯಕ್ಷರಾಗಿದ್ದರು, ಅದನ್ನು ರಾಜಕೀಯ ಷಡ್ಯಂತರದಿಂದ ಅವರನ್ನು ಪದ್ಯುಚಿತಿಗೊಳಿಸಿ, ಅವರ ಸ್ಥಾನಕ್ಕೆ ಕೊಪ್ಪಳ ಶಾಸಕರಾದಂತ ರಾಘವೇಂದ್ರ ಹಿಟ್ನಾಳ್ ಅವರಿಗೆ ಕೆಎಂಎಫ್ ಅಧ್ಯಕ್ಷರ ಪಟ್ಟ ನೀಡಲಾಯಿತು. ಇದೀಗ ಸಂವಿಧಾನಿಕ ಹುದ್ದೆ ಆದಂತ ಉಪ ಸಭಾಪತಿಯಾಗಿ ರುದ್ರಪ್ಪ ಲಮಾಣಿ ಅವರು ಇದ್ದಾರೆ, ಇವರಿಗೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಕೀಳುಮಟ್ಟದ ಭಾಷೆ ಉಪಯೋಗಿಸಿ ತುಂಬು ಸಭೆಯಲ್ಲಿ ಅವಮಾನ ಮಾಡಿರುತ್ತಾರೆ, ಒಳ ಮೀಸಲಾತಿ ವಿಚಾರದಲ್ಲಿ ಕೂಡ 69 ಉಪಜಾತಿಗಳಿಗೆ ಕೇವಲ 5 % ಮೀಸಲಾತಿ ಕಲ್ಪಿಸಿರುವುದು ಬಹುದೊಡ್ಡ ಅನ್ಯಾಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ವಿಧಾನ ಸಭಾ ಅಧಿವೇಶನದ ವೇಳೆ ಸ್ಪೀಕರ್ ಸ್ಥಾನದಲ್ಲಿದ್ದ ಉಪಾಧ್ಯಕ್ಷರ ರುದ್ರಪ್ಪ ಲಮಾಣಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ನಾಲಾಯಕ್ ಶಾಸಕನ ರಾಜೀನಾಮೆ ಪಡೆಯದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮುಂಬರುವ ಚುನಾವಣೆಯಲ್ಲಿ ನಮ್ಮ ಸಮಾಜದವರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರಕಾಶ್ ಬಳಗೇರಿ, ಯಮನೂರಪ್ಪ ಭಾನಾಪುರ, ನಿವೃತ್ತ ಉಪನ್ಯಾಸಕರು ಹೋಬಣ್ಣ ಚವ್ಹಾಣ, ಹನುಮಂತಪ್ಪ ಚವ್ಹಾಣ, ಕುಮಾರ್ ಬಳಗೇರಿ, ವಿಶ್ವನಾಥ್ ಕುಣಕೇರಿ ಮತ್ತಿತರರು ಇದ್ದರು.

Leave a Reply

error: Content is protected !!