Local Express : ಕುಕನೂರ ಪಟ್ಟಣಾದ್ಯಾಂತ ಕಣ್ಣು ಬೇನೆ ವಿಪರೀತ ಹರಡುವಿಕೆ..!!

You are currently viewing Local Express : ಕುಕನೂರ ಪಟ್ಟಣಾದ್ಯಾಂತ ಕಣ್ಣು ಬೇನೆ ವಿಪರೀತ ಹರಡುವಿಕೆ..!!


ಕುಕನೂರು : ಬದಲಾದ ಹವಮಾನದಿಂದಾಗಿ ಪಟ್ಟಣದಲ್ಲಿ ಕಣ್ಣು ಬೇನೆ ಸೊಂಕು ಕಾಣಿಸಿಕೊಂಡಿದ್ದು, ದಿನದಿಂದ ದಿನಕ್ಕೆ ಕಣ್ಣು ಬೇನೆ ಪ್ರಕರಣಗಳು ಹೆಚ್ಚಾಗುತ್ತಾ ಹೋಗುತ್ತಿವೆ. ಇದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾಮನ್ಯ ಜನ ತೊಂದರೆ ಅನುಭವಿಸುವಂತಾಗಿದೆ.

ಮಕ್ಕಳಲ್ಲಿಯೇ ಅತಿ ಹೆಚ್ಚು ಕಣ್ಣು ಬೇನೆ ಕಾಣಿಸಿಕೊಳ್ಳುತ್ತಿರುವುದರಿಂದ ಪಟ್ಟಣದ ಕೆಲ ಶಾಲಾ ಕಾಲೇಜುಗಳಲ್ಲಿ ಅಂಹತ ವಿದ್ಯಾರ್ಥಿಗಳಿಗೆ ರಜೆಯನ್ನು ನೀಡಲಾಗಿದೆ. ಮತ್ತು ಕಣ್ಣು ನೋವು ಎಂದು ಹೇಳುವ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂದು ಕೆಲ ಶಾಲೆಯ ಮುಖ್ಯಸ್ಥರು ಪಾಲಕರಿಗೆ ಪೋನ್ ಮುಖಾಂತರ ತಿಳಿಸಿರುತ್ತಾರೆ.

ಕೆಳದ ಒಂದು ವಾರದಿಂದ ತಾಲೂಕಿನ ಹಲವು ಗ್ರಾಮಗಳಲ್ಲಿ ಕಣ್ಣ ಬೇನೆ ಕಾಣಿಸಿಕೊಂಡಿದೆ. ಕುಟುಂಬದಲ್ಲಿ ಒಬ್ಬರಿಗೆ ಬಂದರೆ ಕೆಲ ದಿನಗಳಲ್ಲಿಯೇ ಕುಟುಂಬದ ಇತರೆ ಸದಸ್ಯರಿಗೂ ಸಾಮಾನ್ಯವಾಗಿ ಕಂಡು ಬರುತ್ತದೆ. ಇದರಿಂದಾಗಿ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೋವು ಕಾಣಿಸಿಕೊಂಡು, ಕಣ್ಣು ಬಾವಿನೊಂದಿಗೆ ನಿರಂತರವಾಗಿ ಕಣ್ಣಿನೀರು ಸುರಿಯುವುದು ಇವೆಲ್ಲ ಇದರ ಲಕ್ಷಣಗಳಾಗಿವೆ. ಮೊದಲಿಗೆ ಒಂದು ಕಣ್ಣಿಗೆ ಕಾಣಿಸಿಕೊಂಡು ನಂತರ ಮೊತ್ತೋಂದು ಕಣ್ಣಿಗೂ ಬಾದಿಸುತ್ತದೆ. ಇದು ಸುಮಾರು ಐದ ರಿಂದ ಆರು ದಿನಗಳವರೆಗೆ ಈ ಸಮಸ್ಯೆ ಇದ್ದೆ ಇರುತ್ತದೆ.

ಕಣ್ಣು ನೋಡೊದಿಂದ್ರ ಕಣ್ಣು ಬೇನೆ ಬರೋದಿಲ್ಲ :- ಕಣ್ಣು ಬೇನೆಗೊಳಗಾದವರ ಕಣ್ಣನ್ನು ನೋಡಿದರೆ ಬೇರೆಯವರಿಗೆ ಹರಡುತ್ತದೆ ಎಂಬ ಕಲ್ಪನೆ ಜನರಲ್ಲಿದ್ದು, ಕಣ್ಣ ಬೇನೆ ಬಂದವರನ್ನು ನೋಡಿದ ತಕ್ಷಣ ಅವರಡೆಗೆ ನೋಡದೆ ಬೇರೆ ಕಡೆ ಮುಖ ಮಾಡಿ ಮತನಾಡುವರೇ ಹೆಚ್ಚು ಆದರೆ, ಕಣ್ಣ ಬೇನೆ ಬಂದವರನ್ನು ನೋಡುವುದರಿಂದ ಇನ್ನೊಬ್ಬರಿಗೆ ಬರುವುದಿಲ್ಲ. ಬದಲಾಗಿ ತೊಂದರೆಗೆ ಒಳಗಾದವರು ಬಳಸುವ ಬಟ್ಟೆಗಳನ್ನು ಬಳಸುವುದರಿಂದ ಇದು ಹರಡುತ್ತದೆ ಎಂದು ಹೇಳಲಾಗುತ್ತಿದ್ದೆ. ಆದರೆ ಕಣ್ಣ ಕೆಂಪಾಗಿದೆ ಎಂದು ವೈದ್ಯರ ಸಲಹೆ ಇಲ್ಲದೆ ಮನೆಯಲ್ಲಿಯೇ ಔಷದಿಗಳನ್ನು ಹಾಕಿಕೊಳ್ಳುವುದು ಸರಿಯಲ್ಲ ಎನ್ನುತ್ತಾರೆ ವೈದ್ಯರು.

*ವೈದ್ಯರ ಸಲಹೆಗಳು*

• ಕಣ್ಣು ಉಜ್ಜಿಕೊಂಡ ನಂತರ ಕೈ ತೊಳೆಯಬೇಕು.
• ಬಳಸಿದ ಬಟ್ಟೆಗಳನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು.
• ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಔಷಧಿಯನ್ನು ಬಳಸಬಾರದು.

ವರದಿ : ಶರಣಯ್ಯ, ಕುಕನೂರು

Leave a Reply

error: Content is protected !!