ಮೈಸೂರು : ರಾಜ್ಯದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾದ ಮೈಸೂರು ವಿಶ್ವ ವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ವಿಶ್ವವಿದ್ಯಾಯಲ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ವಿಶ್ವವಿದ್ಯಾಯಲವೂ ಪದವಿ ಪರೀಕ್ಷೆಗಳನ್ನು ಒಂದು ವಾರ ಮುಂದೂಡಿ ದಿನಾಂಕ ಘೋಷಣೆ ಮಾಡಿದೆ.
ಈ ಹಿಂದೆ ಜುಲೈ 24ರಂದು ಪದವಿ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಪದವಿ ಕಾಲೇಜುಗಳು ಕೇವಲ 2 ತಿಂಗಳಷ್ಟೇ ನಡೆದಿದ್ದು, ಸರಿಯಾಗಿ ಪಾಠ ಪ್ರವಚನ ನಡೆಸಿಲ್ಲ. ಕನಿಷ್ಠ 15ದಿನಗಳ ಕಾಲ ಪರೀಕ್ಷೆ ಮುಂದೂಡಬೇಕು ಎಂದು ವಿದ್ಯಾರ್ಥಿಗಳು ನಿರಂತರ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ವಿಶ್ವವಿದ್ಯಾಯಲದ ಪರೀಕ್ಷಾ ಮಂಡಳಿ ಪರೀಕ್ಷೆಗಳನ್ನು ಮುಂದೂಡಿದ್ದು, ಆಗಸ್ಟ್ 1ರಿಂದ 30ರವರೆಗೆ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.