ಪ್ರಜಾವೀಕ್ಷಣೆ ಸುದ್ದಿ :
BREAKING NEWS : ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ : ಬರೋಬ್ಬರಿ 13 ಜನರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು..!!
ಕುಕನೂರು : ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ಸವರ್ಣೀಯರು ಮತ್ತು ದಲಿತರ ಮಧ್ಯೆ ಗಲಾಟೆ ನಡೆದಿದ್ದು, ಬರೋಬ್ಬರಿ 13 ಜನರ ಮೇಲೆ SC-ST ಕಾಯ್ದೆಯ ಅಡಿಯಲ್ಲಿ (atrocity case) ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮರಕುಂಬಿ ಪ್ರಕರಣ ಮಾಸುವ ಮುನ್ನವೇ ಅಂತಹದ್ದೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ನಡೆದ ದೌರ್ಜನ್ಯ ಪ್ರಕರಣವೂ ಜಿಲ್ಲೆಯಲ್ಲಿ ಮತ್ತೆ ಅದೇ ಜಾತಿಜಾತಿಗಳ ನಡುವೆ ಗಲಾಟೆ ಉಲ್ಲಬಣಿಸುತ್ತಿದೆ.
ಏನಿದು ಘಟನೆ?
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಯರೇಹಂಚಿನಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸರ್ಕಸ್ ಆಟ ನಡೆಯುತ್ತೀರುವಾಗ ಮಾತಿಗೆ ಮಾತು ಬೆಳೆದು ದಲಿತ ಮಹಿಳೆ ಮತ್ತು ಮೇಲ್ವರ್ಗದ ಯುವಕನೊಂದಿಗೆ ಗಲಾಟೆ ಆಗಿದೆ. ಇದೇ ವೇಳೆಯಲ್ಲಿ ಮಹಿಳೆಯ ಸಂಬಂಧಿಕರು ಮದ್ಯೆ ಪ್ರವೇಶಿಸಿದಾಗ ಜಗಳ ತೀವ್ರ ಮಟ್ಟಕ್ಕೆ ಹೋಗಿದೆ. ಈ ಸಂದರ್ಭದಲ್ಲಿ ಮೇಲ್ವರ್ಗದ ಯುವಕರು ದಲಿತ ಯುವಕನಿಗೆ ಹಿಗ್ಗಾಮುಗ್ಗ ಹೊಡೆದ್ದಿದ್ದಾರೆ.
