LOCAL BREAKING : ಇಂದಿರಾ ಕ್ಯಾಂಟೀನ್ ಬಾಗಿಲು ಗ್ಲಾಸ್ ಹೊಡೆದು ದಿನಸಿ ಸಾಮಗ್ರಿ ಕಳವು..!!
ಮುದಗಲ್ಲ:- ಲಿಂಗಸೂರು ತಾಲೂಕಿನ ಐತಿಹಾಸಿಕ ಮುದಗಲ್ಲ ಪಟ್ಟಣದ ಮುಖ್ಯ ಕೇಂದ್ರ ಬಿಂದುವಾದ ಪಶು ವೈದ್ಯಕಿಯ ಆಸ್ಪತ್ರೆ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ಬಾಗಿಲು ಗ್ಲಾಸ್ ಹೊಡೆದು ದಿನಸಿ ಸಾಮಗ್ರಿ ಕಳವು ಮಾಡಿದ್ದಾರೆ ಸಾಮಗ್ರಿ ಕಳವು ಮಾಡಿದ ಘಟನೆ ಜರುಗಿದೆ.
ರಾತ್ರಿ ಸಮಯದಲ್ಲಿ ಲಿಂಗಸೂರ ಹೋಗುವ ಮುಖ್ಯರಸ್ತೆ ಸಮೀಪದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಬಾಗಿಲಿನ ಗ್ಲಾಸ್ ಹೊಡೆದು ಒಳಗೆ ನುಗ್ಗಿ ಅಕ್ಕಿ ಪಾಕೆಟ್ ಹಾಗೂ ಊಟದ ತಾಟ್ ಗಳುನ್ನು ತೆಗೆದುಕೊಂಡು ಹೋಗಿದ್ದಾರೆ ಹಾಗೂ ಕಾರದ ಪಾಕೇಟ್ ಮತ್ತಿತರ ಸಾಮಗ್ರಿ ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ಪ್ರವೀಣ್ ಕುಮಾರ್ ಹಾಗೂ ಚಂದ್ರಶೇಖರ್ ಅವರು ಮಾಹಿತಿ ನೀಡಿದರು. ಸ್ಥಳೀಯ ಪೊಲೀಸ್ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ಘಟನೆ ಬಗ್ಗೆ ಮಾಹಿತಿ ಪಡೆದರು.