LOCAL NEWS : ಇಂದು ಕಾ.ನಿ.ಪ. ಧ್ವನಿ ತಾಲೂಕ ಘಟಕದಿಂದ “ಪತ್ರಿಕಾ ದಿನಾಚರಣೆ” ಕಾರ್ಯಕ್ರಮ..!!
ಕುಕನೂರು : ತಾಲೂಕಿನ ತಿಪ್ಪರಸನಾಳ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಬಾಲಕಿಯರ ವಸತಿ ಕಾಲೇಜು ಕುಕನೂರನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ತಾಲೂಕು ಘಟಕದಿಂದ ಇಂದು ಕನ್ನಡ “ಪತ್ರಿಕಾ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಸೋಮಶೇಖರ್ ಗೌಡ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಲಬುರ್ಗಾ-ಕುಕನೂರು ಇವರು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೆಚ್ ಪ್ರಾಣೇಶ್ ತಹಶೀಲ್ದಾರರು ಕುಕನೂರು, ಅಜ್ಮರ್ ಅಲಿ, ಜಿಲ್ಲಾಧಿಕಾರಿಗಳು ಅಲ್ಪಸಂಖ್ಯಾತರ ಇಲಾಖೆ ಕೊಪ್ಪಳ, ಸಂತೋಷ್ ಬಿರಾದಾರ್ ಪಾಟೀಲ್ ಕಾರ್ಯನಿರ್ವಹಣ ಅಧಿಕಾರಿಗಳು ತಾಲೂಕು ಪಂಚಾಯತ್ ಯಲಬುರ್ಗಾ ಕುಕನೂರು, ಗುರುರಾಜ್ ಟಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪೊಲೀಸ್ ಠಾಣೆ ಕುಕನೂರು ಇವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ಕುಮಾರ್ ಮಠದ್ ಜಿಲ್ಲಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಕೊಪ್ಪಳ, ಘನ ಉಪಸ್ಥಿತಿ ಕೃಷ್ಣಮೂರ್ತಿ ಗದಾರಿ ಪ್ರಾಂಶುಪಾಲರು ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಪದವಿ ಪೂರ್ವ ಬಾಲಕಿಯರ ವಸತಿ ಕಾಲೇಜು, ಇವರು ವಹಿಸಲಿದ್ದಾರೆ.
ads place
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಂಡಿದ್ದು, “ಪತ್ರಿಕೋದ್ಯಮದಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ಅವಕಾಶಗಳು” ಈ ವಿಷಯದ ಕುರಿತು ಡಾ. ನರಸಿಂಹ ಗುಂಜಹಳ್ಳಿ, ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಕಾ.ನಿ.ಪ. ದ್ವನಿ ಸಂಘದ ತಾಲೂಕ ಅಧ್ಯಕ್ಷ ಚಂದ್ರು ಆರ್ ಭಾನಾಪುರ್ ತಿಳಿಸಿದರು.
-:ಪತ್ರಿಕಾ ದಿನಾಚರಣೆಯ ಸಂಕ್ಷೀಪ್ತ ಹಿನ್ನಲೆ:-
ಕನ್ನಡದ ಮೊದಲ ಪತ್ರಿಕೆ “ಮಂಗಳೂರು ಸಮಾಚಾರ” ಪತ್ರಿಕೆವೂ 1843ರ ಜುಲೈ 1 ರಂದು ಆರಂಭವಾಗಿದ್ದು, ಈ ಪತ್ರಿಕೆಯನ್ನು ಜರ್ಮನ್ ಮಿಶನರಿ ರೇವರೆಂಡ ಹರ್ಮನ್ ಫೇಡ್ರಿಕ್ ಮೊಗ್ಲಿಂಗ್ ಅವರು ಮಂಗಳೂರಿನಲ್ಲಿ ಆರಂಭಿಸಿದರು.
ads place
ಈ ಪತ್ರಿಕೆಯನ್ನು ಬಾಸೆಲ್ ಮಿಷನ್ ಪ್ರೆಸ್ ನಲ್ಲಿ ಮುದ್ರಿಸಲಾಯಿತು. ಇದರ ಸವಿ ನೆನಪಿಗಾಗಿ “ಕನ್ನಡ ಪತ್ರಿಕಾ ದಿನಾಚರಣೆ” ಎಂದು ಆಚರಿಸಲಾಗುತ್ತಿದೆ.