LOCAL NEWS : ಕಳಪೆ ಬಿತ್ತನೆ ಬೀಜ ಪೂರೈಕೆ : 15 ದಿನ ಕಳೆದರು ಬಾರದ ಮೊಳಕೆ!

You are currently viewing LOCAL NEWS : ಕಳಪೆ ಬಿತ್ತನೆ ಬೀಜ ಪೂರೈಕೆ : 15 ದಿನ ಕಳೆದರು ಬಾರದ ಮೊಳಕೆ!

LOCAL NEWS : ಕಳಪೆ ಬಿತ್ತನೆ ಬೀಜ ಪೂರೈಕೆ : 15 ದಿನ ಕಳೆದರು ಬಾರದ ಮೊಳಕೆ!


ಕೊಪ್ಪಳ : ಕಳಪೆ ಬಿತ್ತನೆ ಬೀಜ ಪೂರೈಕೆಯಿಂದ ಬೀಜ ಬಿತ್ತನೆ ಮಾಡಿ 15 ದಿನಗಳಾದರೂ ಬೀಜ ಮೊಳಕೆ ಹೊಡೆಯದೆ ಇರುವುದರಿಂದ ಕಂಗಾಲಾದ ರೈತ ಆಕ್ರೋಶಗೊಂಡ ಘಟನೆಗೆ ಕೊಪ್ಪಳ ತಾಲೂಕಿನ ಗೊಂಡಬಾಳ ಹಾಗೂ ಇತರೆ ಗ್ರಾಮಗಳು ಸಾಕ್ಷಿಯಾಗಿವೆ.


ಮಳೆಯನ್ನೆ ಆಧರಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತ ಮಳೆಯಾದ ಸಂದರ್ಭದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು 15 ದಿನಗಳು ಕಳೆದರೂ ಸಹ ಬಿತ್ತನೆ ಬೀಜ ಮೊಳಕೆ ಒಡೆಯದೆ ನೂರಾರು ರೈತರು ಕಂಗಲಾಗಿದ್ದಾರೆ.

ನಗರದ ಶಾಂತಿ ಆಗ್ರೋ ಟ್ರೇಡರ್ಸ್ ಬಿತ್ತನೆ ಬೀಜ ಪೂರೈಕೆ ದಾರದಿಂದ ಅಡ್ವಾನ್ಟ (Advanta) ಕಂಪನಿಯ PAC 741 ಸ್ಥಳೀಯ ಮೆಕ್ಕೆಜೋಳ ಬಿತ್ತನೆ ಬೀಜವನ್ನು ರೈತರು ಖರೀದಿಸಿ ಬಿತ್ತನೆ ಮಾಡಿದ್ದು ಬೀಜಗಳು ಮೊಳಕೆ ಒಡೆಯದ ಪರಿಣಾಮ ಅಡ್ವಾನ್ಟ ಕಂಪನಿ ಹಾಗೂ ಶಾಂತಿ ಆಗ್ರೋ ಡಿಸ್ಟ್ರಿಬ್ಯೂಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.


ರೈತರು ಆಕ್ರೋಶಪಡಿಸುತ್ತಿರುವುದು ತಿಳಿಯುತ್ತಿದ್ದಂತೆಯೇ ಅಡ್ವಾನ್ಟ ಕಂಪನಿಯ ವಿಜ್ಞಾನಿಗಳು ಗ್ರಾಮಕ್ಕೆ ಆಗಮಿಸಿ ಮೊಳಕೆ ಬಾರದ ಜಮೀನುಗಳಲ್ಲಿ ಕೂಲಂಕುಶವಾಗಿ ಪರಿಶೀಲನೆ ಮಾಡಿ ವರದಿಯನ್ನು ಸಲ್ಲಿಸುವುದರೊಂದಿಗೆ ಪರಿಹಾರವನ್ನು ನೀಡಿಸುವುದಾಗಿ ರೈತರಿಗೆ ಭರವಸೆ ನೀಡಿದ್ದರಿಂದ ರೈತರು ಗಡುವ ನೀಡಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುತ್ತಾರೆ.

ಇತ್ತೀಚಿಗೆ ಕಳಪೆ ಬಿತ್ತನೆ ಬೀಜ ಪೂರೈಕೆಯ ದೂರುಗಳು ಸಾಮಾನ್ಯವಾಗಿ ಕೇಳಿ ಬರುತ್ತಿದ್ದು ಸರ್ಕಾರ ರೈತರಗಳನ್ನು ಅರಿತುಕೊಂಡು ಕಳಪೆ ಬಿತ್ತನೆ ಬೀಜ ಪೂರೈಕೆದಾರರಿಗೆ ಕಡಿವಾಣ ಹಾಕಲಿ ಎಂಬುದು ರೈತರ ಆಗ್ರಹವಾಗಿದೆ.

Leave a Reply

error: Content is protected !!