You are currently viewing ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರನ್ನಾಗಿ ಆಯೇಷಾ ಖಾನಂ ನೇಮಕ

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರನ್ನಾಗಿ ಆಯೇಷಾ ಖಾನಂ ನೇಮಕ

ಬೆಂಗಳೂರು: ರಾಜ್ಯ ಸರ್ಕಾರದ ಅಧೀನದಲ್ಲಿರುವ ಪ್ರತೀಷ್ಠಿತ ಸಂಸ್ಥೆ ಆದ “ಕರ್ನಾಟಕ ಮಾಧ್ಯಮ ಅಕಾಡೆಮಿ”ಯ ಅಧ್ಯಕ್ಷರನ್ನಾಗಿ ಆಯೇಷಾ ಖಾನಂ ಅವರನ್ನು ನೇಮಕ ಮಾಡಿ ಇಂದು ಸರ್ಕಾರ ಆದೇಶಿಸಿದೆ. ಅದು ಅಲ್ಲದೇ ಸದಸ್ಯರು ಪತ್ರಕರ್ತರನ್ನು ನೇಮಿಸಲಾಗಿದೆ ಅಧಿಕೃತ ಮಾಹಿತಿ ಇದೆ.

ಇಂದು (ಬುಧವಾರ) ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಜೆಸಿಂತ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ (ಬೈಲಾದ ಕಂಡಿಕೆ 5(1) ಮತ್ತು 5(5)ರಲ್ಲಿ ಪುದತ್ತವಾಗಿರುವ ಅಧಿಕಾರದನ್ವ)ಯ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಸದಸ್ಯರನ್ನಾಗಿ ಎಂ.ಎನ್ ಅಹೋಬಳಪತಿ, ಕೆ.ವೆಂಕಟೇಶ್ ಹಾಗೂ ಕೆ ನಿಂಗಜ್ಜ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Prajavikshane

Chandru R Bhanapaur

Leave a Reply

error: Content is protected !!