LOCAL NEWS : ಕಾಯಕ ದಾಸೋಹ ಶಿವಶರಣ ನೂಲಿ ಚಂದಯ್ಯನ 918ನೆಯ ಜಯಂತೋತ್ಸವ ಆಚರಣೆ!

You are currently viewing LOCAL NEWS : ಕಾಯಕ ದಾಸೋಹ ಶಿವಶರಣ ನೂಲಿ ಚಂದಯ್ಯನ 918ನೆಯ ಜಯಂತೋತ್ಸವ ಆಚರಣೆ!
ಕುಕನೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶಿವಶರಣ ನುಲಿ ಚಂದಯ್ಯ ನವರ ಜಯಂತಿಯನ್ನು ಆಚರಿಸಿದರು.

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ಕಾಯಕ ದಾಸೋಹ ಶಿವಶರಣ ನೂಲಿ ಚಂದಯ್ಯನ 918ನೆಯ ಜಯಂತೋತ್ಸವ ಆಚರಣೆ!

ಕುಕನೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶಿವಶರಣ ನುಲಿ ಚಂದಯ್ಯ ನವರ ಜಯಂತಿಯನ್ನು ಆಚರಿಸಿದರು.

ಕುಕನೂರು : ಕುಕನೂರು ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊರಮ ಸಮಾಜ ವತಿಯಿಂದ ಶಿವಶರಣ ನೂಲಿಯ ಚಂದಯ್ಯ ನವರ 918ನೇ ಜಯಂತೋತ್ಸವವನ್ನು ಆಚರಿಸಿದರು.

ಪಟ್ಟಣದ ಗಾಂಧಿನಗರದ ನೂಲಿ ಚಂದಯ್ಯ ದೇವಸ್ಥಾನದ ಜಾತ್ರಾ ಮಹೋತ್ಸವ ಜರುಗಿತು. ಬೆಳಿಗ್ಗೆ ದೇವಸ್ಥಾನದಲ್ಲಿ ನೂಲಿ ಚಂದಯ್ಯ ನವರ ಮೂರ್ತಿಗೆ ವಿವಿಧ ಅಭಿಷೇಕ ನೆರವೇರುತು. ಕೋಳಿಪೇಟೆಯ ದುರ್ಗಾದೇವಿ ದೇವಸ್ಥಾನದಿಂದ ಸಂತಿ ಬಜಾರ, ಸೇರಿದಂತೆ ವಿವಿಧ ರಾಜಭೀದಿಗಳಲ್ಲಿ ನುಲಿಚಂದಯ್ಯನವರ ಭಾವಚಿತ್ರ ಮೆರವಣಿಗೆಯು ಬಾಜಾ ಭಜಂತ್ರಿ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಸಾಗಿತು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನೂಲಿ ಚಂದಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿ ಮಾತನಾಡಿದ, ‘ಗ್ರೇಡ್ 2 ತಸಿಲ್ದಾರ್ ಮುರಳಿದಾರ ಕುಲಕರ್ಣಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರಾದ ಶಿವಶರಣ ನೂಲಿ ಚಂದಯ್ಯ ನವರು ಕಾಯಕ ಮತ್ತು ದಾಸೋಹದ ಮೂಲಕ ಹೆಸರುವಾಸಿಯಾಗಿದ್ದರು, ಅವರ ವಚನ ಹಾಗೂ ಕಾಯಕ ನಿಷ್ಠೆ, ಮಹತ್ವದ್ದಾಗಿತ್ತು. ವಚನ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆಅಪಾರವಾಗಿದೆ . ನುಲಿ ಚಂದಯ್ಯ ನವರ ವಚನ ಹಾಗೂ ಜೀವನದ ಆದರ್ಶವನ್ನು ಪ್ರತಿಯೊಬ್ಬರು ಯುವಕರು ಮೈಗೂಡಿಸಿಕೊಳ್ಳಬೇಕು. ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಜೀವನ ಸಾಗಿಸಿದಾಗ ಜೀವನ ಪಾವನವಾಗುತ್ತದೆ. ಅನುಭವ ಮತ್ತು ಅಪಾರಜ್ಞಾನದಿಂದ ಭಕ್ತಿಯಿಂದ ಶರಣರು ವಚನವನ್ನು ರಚಿಸಿರುತ್ತಾರೆ. ಕೊರಮ ಸಮಾಜದವರು ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಮುಂದೆ ಬರಬೇಕು, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕುಡಿಸಬೇಕು. ಶಿಕ್ಷಣದಿಂದ ಇವೆಲ್ಲವೂ ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದುರ್ಗಪ್ಪ ಭಜಂತ್ರಿ, ಬಸವರಾಜ್ ಕಿತ್ತೂರು, ಶಶಿಕುಮಾರ ಭಜಂತ್ರಿ, ಯಮನೂರಪ್ಪ ಭಜಂತ್ರಿ, ಬಾಳೇಶ್ ಭಜಂತ್ರಿ, ನಾಗರಾಜ ಹೇರೂರು, ಹುಲುಗಪ್ಪ ಭಜಂತ್ರಿ, ಮುಕುಂದ ಭಜಂತ್ರಿ, ನಾಗರಾಜ್ ಡಿ ಭಜಂತ್ರಿ, ಬಸವರಾಜ್ ಭಜಂತ್ರಿ, ಹನುಮಪ್ಪ ಭಜಂತ್ರಿ, ರಾಮಣ್ಣ ಬಜಂತ್ರಿ, ಸಣ್ಣ ಶಿವಪ್ಪ ಭಜಂತ್ರಿ, ದೇವಪ್ಪ ಭಜಂತ್ರಿ, ಸೇರಿದಂತೆ ತಸಿಲ್ದಾರ್ ಕಚೇರಿಯ ಸಿಬ್ಬಂದಿ ವರ್ಗ ಕೊರಮ ಸಮಾಜದ ಗುರಿಯರು ಮುಖಂಡರು ಇತರರು ಉಪಸ್ಥಿತರಿದ್ಧರು.

Leave a Reply

error: Content is protected !!