LOCAL BREAKING : ಕುಕನೂರಿನಲ್ಲಿ ಭಾರೀ ಮಳೆ : ಅವೈಜ್ಞಾನಿಕ ಹೆದ್ದಾರಿ ಸೇತುವೆ ಕಾಮಗಾರಿಯಿಂದ ಅವಾಂತರ..!!
ಕುಕನೂರು : ತಾಲೂಕಿನಲ್ಲಿ ಎರಡು ದಿನಗಳಿಂದ ಮಳೆರಾಯ ಅಬ್ಬರಿಸಿದ್ದಾನೆ. ತಾಲೂಕಿನಲ್ಲಿರುವ ನೀರಿನ ಮೂಲಗಳು ಬಹುತೇಕ ತುಂಬಿ ಹರಿದಿದ್ದು, ಕುಕನೂರು ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 367ರ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಅಡ್ಡಲಾಗಿ ಪಟ್ಟಣದ ಚರಂಡಿ ನೀರು ಹಾದು ಹೋಗುವ ರಾಜ್‌ಕಾಲುವೆ ಇದೆ. ನಿನ್ನೆ ಭಾರೀ ಪ್ರಮಾಣದ ಮಳೆಯಾಗಿದ್ದು, ಇದರಿಂದ ಪಟ್ಟಣದಲ್ಲಿ ಸುರಿದ ಭಾರೀ ಮಳೆಯೂ ಈ ರಾಜ್‌ಕಾಲುವೆಯಲ್ಲಿ ತುಂಬಿ ಹರಿದು ಬಂದಿದೆ. ಈ ಪರಿಣಾಮ ರಾಷ್ಟ್ರೀಯ ಹೆದ್ದಾರಿ 367ರ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ.
ಅವೈಜ್ಞಾನಿಕ ಹೆದ್ದಾರಿ ಸೇತುವೆ ಕಾಮಗಾರಿ : ಮೆಕ್ಕೇಜೋಳ ಬೆಳೆ ನಾಶ ರೈತರು ಕಂಗಾಲು..!
“‘ಭಾನಾಪೂರ್- ಗದ್ದನಕೇರೆ ಕ್ರಾಸ್‘ ರಾಷ್ಟ್ರೀಯ ಹೆದ್ದಾರಿ 367″ರ ಸೇತುವೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಇಲ್ಲಿ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಾಗುತ್ತದೆ. ಹೀಗೆಯೇ ನಿನ್ನೆ ರಾತ್ರಿ ಭಾರಿ ಮಳೆ ಸುರಿದಿದ್ದು, ಇದರ ಪರಿಣಾಮ ಸೇತುವೆ ಕೆಳಗಡೆ ಒಂದು ಬೊಗಶೇ ಅಷ್ಟು ಮಳೆ ನೀರು ಹರಿದುಹೊಗಿರುವುದಿಲ್ಲ. ಇದು ವಿಪರ್ಯಾಸವೇ ಸರಿ…!!
ಸೇತುವೆ ಕಳೆಗಡೆ ಹೊಗದೆ ಭಾರೀ ಮಳೆ ನೀರು ಇದರ ಅಕ್ಕಪಕ್ಕದ ಜಮೀನಿಗೆ ಹೊಗಿದ್ದು, ಇದರಿಂದ ರೈತರ ಬೆಳೆಯೂ ಜಲಾವೃತವಾಗಿದೆ. ಇದನ್ನು ಇಂದು ಬೆಳಗ್ಗೆ ಕುಕನೂರು ತಹಶೀಲ್ದಾರ್ ಹೆಚ್ ಪ್ರಾಣೇಶ್ ಹಾಗೂ ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಬೀಸಾಬ್ ಕಂದಗಲ್ ವೀಕ್ಷಣೆ ಮಾಡಿ, ಸಂಬಂಧಿಸದ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಇಂಜಿನಿಯರ್ಸ್‌ಗಳಿಗೆ ತರಾಟೆ ತಗೆದುಕೊಂಡರು.
ಈ ಪಟ್ಟಣದ ಮಳೆ ನೀರು ಹಾಗೂ ಚರಂಡಿ ನೀರು ಪಕ್ಕದ ಜಮೀನಿಗೆ ನುಗ್ಗಿ ಬೆಳೆಗಳು ಜಲಾವೃತವಾಗಿವೆ. ಸಾವಿರಾರು ರೂಪಾಯಿಗಳು ಖರ್ಚು ಮಾಡಿ ಬಿತ್ತನೆ ಮಾಡಲಾಗಿದ್ದು, ಈ ರೀತಿ ಅವೈಜ್ಞಾನಿಕ ಹೆದ್ದಾರಿ ಸೇತುವೆ ಕಾಮಗಾರಿಯಿಂದ ಬಡ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ಸ್ಥಳೀಯ ರೈತರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ್, ಉಪಾಧ್ಯಕ್ಷ ಪ್ರಶಾಂತ್ ಆರ್‌ಬೆಳ್ಳಿನ್, ಹಾಗೂ ಪ.ಪಂ. ಸದಸ್ಯರು, ಸ್ಥಳಿಯರ ರೈತರು, ಸಾರ್ವಜನಿಕರಿದ್ದರು.