You are currently viewing ALERT NEWS : “ಕಲಬುರಗಿ | ʼಸಿದ್ರಾಮುಲ್ಲಾಖಾನ್‌ ʼ ಎಂದು ಮೊಬೈಲ್‌ ಸ್ಟೇಟಸ್‌ ಹಾಕಿ, ಸಿ.ಎಂ.ಗೆ  ಅವಮಾನ :  ಗ್ರಾ.ಪಂ. ಪಿಡಿಒ ವಿರುದ್ದ ದೂರು ದಾಖಲು” 

ALERT NEWS : “ಕಲಬುರಗಿ | ʼಸಿದ್ರಾಮುಲ್ಲಾಖಾನ್‌ ʼ ಎಂದು ಮೊಬೈಲ್‌ ಸ್ಟೇಟಸ್‌ ಹಾಕಿ, ಸಿ.ಎಂ.ಗೆ  ಅವಮಾನ :  ಗ್ರಾ.ಪಂ. ಪಿಡಿಒ ವಿರುದ್ದ ದೂರು ದಾಖಲು” 

“ಕಲಬುರಗಿ | ʻಸಿದ್ರಾಮುಲ್ಲಾಖಾನ್‌, ಎಂದು ಮೊಬೈಲ್‌ ನಲ್ಲಿ ಸ್ಟೇಟಸ್‌ ಹಾಕಿ, ಸಿ.ಎಂ. ಸಿದ್ದರಾಮಯ್ಯ ಅವರಿಗೆ ಅವಮಾನ :  ಗ್ರಾ.ಪಂ. ಪಿಡಿಒ ವಿರುದ್ದ ದೂರು ದಾಖಲು” 

 

                                                                  ಪಿಡಿಒ ಪ್ರವೀಣಕುಮಾರ

ಪ್ರಜಾ ವೀಕ್ಷಣೆ ಡೆಸ್ಕ್‌ ನ್ಯೂಸ್‌ : 

ಕಲಬುರಗಿ :  ಕರ್ನಾಟಕ  ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಹೇಳನ ಮಾಡುವ ರೀತಿಯಲ್ಲಿ ಮೊಬೈಲ್ ಸ್ಟೇಟಸ್‌ ಗೆ ಇದೇ  ಆಗಸ್ಟ್ 21ರಂದು ಆರೋಪಿ ಪ್ರವೀಣಕುಮಾ‌ರ್ ತಮ್ಮ ಮೊಬೈಲ್ ನಲ್ಲಿ ಸಿದ್ರಾಮುಲ್ಲಾಖಾನ್ ಎಂಬ ಬರಹದ ಜೊತೆಗೆ ಸಿದ್ದರಾಮಯ್ಯ ಅವರ ತಲೆಗೆ ಮುಸ್ಲಿಮರು ಧರಿಸುವ ಟೊಪ್ಪಿಗೆ ಹಾಕಿರುವಂತೆ ಎಡಿಟ್ ಮಾಡಲಾದ ಚಿತ್ರವನ್ನು ಸ್ಟೇಟಸ್ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಇದನ್ನು ಗಮನಿಸಿದ ಸುಂಟನೂರ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಡಣ್ಣೂರ  ಅವರು ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಗ್ರಾಮದ ಮುಖಂಡ ಮಹಾಲಿಂಗಪ್ಪ ಹರವಾಳ, ಆಳಂದ ತಾಲ್ಲೂಕು ಕುರುಬರ ಸಂಘದ ಯುವ ಘಟಕದ ಅಧ್ಯಕ್ಷ ಬೀರಣ್ಣಾ ಪೂಜಾರಿ ಅವರು ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ. 

 ಈ ಕುರಿತು ಆಳಂದ ತಾಲ್ಲೂಕಿನ ಸುಂಟನೂರ ಗ್ರಾಮ ಪಂಚಾಯಿತಿ ಪಿಡಿಒ ಪ್ರವೀಣಕುಮಾ‌ರ್ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.

 

 

Prajavikshane

Chandru R Bhanapaur

Leave a Reply

error: Content is protected !!