You are currently viewing PV NEWS : ಕುಕನೂರು | ಸಾರ್ವಜನಿಕ ಸ್ಥಳದಲ್ಲೇ ಇಸ್ಪೀಟ್ ಜೂಜಾಟ; ಪೊಲೀಸರ ಖಡಕ್ ಆ್ಯಕ್ಷನ್! : 7 ಮಂದಿಯ ವಿರುದ್ಧ ಪ್ರಕರಣ ದಾಖಲು!

PV NEWS : ಕುಕನೂರು | ಸಾರ್ವಜನಿಕ ಸ್ಥಳದಲ್ಲೇ ಇಸ್ಪೀಟ್ ಜೂಜಾಟ; ಪೊಲೀಸರ ಖಡಕ್ ಆ್ಯಕ್ಷನ್! : 7 ಮಂದಿಯ ವಿರುದ್ಧ ಪ್ರಕರಣ ದಾಖಲು!

PV NEWS : ಕುಕನೂರು | ಸಾರ್ವಜನಿಕ ಸ್ಥಳದಲ್ಲೇ ಇಸ್ಪೀಟ್ ಜೂಜಾಟ; ಪೊಲೀಸರ ಖಡಕ್ ಆ್ಯಕ್ಷನ್! : 7 ಮಂದಿಯ ವಿರುದ್ಧ ಪ್ರಕರಣ ದಾಖಲು!

₹19,700 ನಗದು, 52 ಇಸ್ಪೀಟ್ ಎಲೆಗಳು ಜಪ್ತಿ; 7 ಮಂದಿಯ ವಿರುದ್ಧ ಪ್ರಕರಣ ದಾಖಲು!

PV NEWS ಕನ್ನಡ 24×7 |

ಕುಕನೂರು, ಆ.11: ಪಟ್ಟಣದ ಸಂಗಳ್ಳಿ ರಾಯಣ್ಣ ಸರ್ಕಲ್‌ ಸಮೀಪದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಹಣ ಪಣಕ್ಕಿಟ್ಟು ಅಂದರ್–ಬಾಹರ್ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಏಳು ಮಂದಿಯ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.10ರಂದು ರಾತ್ರಿ ಸುಮಾರು 9.15ರ ವೇಳೆಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪಿಎಸ್‌ಐ ಎಸ್.ಪಿ. ನಾಯ್ಕ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ. ಈ ವೇಳೆ ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ದಾಳಿಯ ಸಂದರ್ಭದಲ್ಲಿ ₹19,700 ನಗದು, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟಕ್ಕೆ ಬಳಸಲಾಗಿದ್ದ ಒಂದು ಟವಲ್ ಸೇರಿದಂತೆ ಕೃತ್ಯಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 91/2026ರಂತೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಆರೋಪಿತರ ವಿರುದ್ಧ **BNSS-2023ರ ಕಲಂ 35(3)**ರಡಿ ನೋಟಿಸ್ ಜಾರಿ ಮಾಡಿ, ಕಾನೂನು ಪ್ರಕ್ರಿಯೆಯಂತೆ ಬಿಡುಗಡೆ ಮಾಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಜೂಜಾಟ ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಗಮನ ಸೆಳೆದಿದೆ.

Prajavikshane

Chandru R Bhanapaur

Leave a Reply

error: Content is protected !!