You are currently viewing PV NEWS : ಕುಕನೂರು | ಖುದಿರಾಮ್ ಬೋಸ್‌ರ ಹೋರಾಟ ಇಂದಿಗೂ ಸ್ಫೂರ್ತಿ – ಸಿದ್ದಲಿಂಗ ಬಾಗೇವಾಡಿ

PV NEWS : ಕುಕನೂರು | ಖುದಿರಾಮ್ ಬೋಸ್‌ರ ಹೋರಾಟ ಇಂದಿಗೂ ಸ್ಫೂರ್ತಿ – ಸಿದ್ದಲಿಂಗ ಬಾಗೇವಾಡಿ

PV NEWS : ಕುಕನೂರು | ಖುದಿರಾಮ್ ಬೋಸ್‌ರ ಹೋರಾಟ ಇಂದಿಗೂ ಸ್ಫೂರ್ತಿ – ಸಿದ್ದಲಿಂಗ ಬಾಗೇವಾಡಿ

PV NEWS ಕನ್ನಡ 24×7 |

ಕುಕನೂರು, ಆ. 11 : ಭಾರತದ ಸ್ವಾತಂತ್ರ್ಯ ಹೋರಾಟದ ಅಗ್ನಿಯುಗದ ಹರಿಕಾರ, ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರ 118ನೇ ಹುತಾತ್ಮ ದಿನಾಚರಣೆಯನ್ನು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕರ ಬಳಗದ ವತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಭಾರತದ ಜನತೆ ದೌರ್ಜನ್ಯವನ್ನು ಸುಮ್ಮನೆ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಪೂರ್ವ ಭಾರತದಲ್ಲಿ ದಿಟ್ಟತನದಿಂದ ತೋರಿಸಿಕೊಟ್ಟ ಯೋಧ ಖುದಿರಾಮ್ ಬೋಸ್ ಎಂದು ಹೇಳಿದರು. ಅವರ ಧೈರ್ಯ, ದೇಶಪ್ರೇಮ ಹಾಗೂ ಬಲಿದಾನ ಅಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ್ದು, ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧದ ಇಂದಿನ ಹೋರಾಟಗಳಿಗೂ ಪ್ರೇರಣೆಯಾಗಿದೆ ಎಂದರು.

ಬಂಗಾಳದ ಜನತೆ ಖುದಿರಾಮ್ ಬೋಸ್ ಅವರನ್ನು ‘ಅಗ್ನಿಶಿಶು’ ಹಾಗೂ ‘ಧೀರ ಯೋಧ’ ಎಂದು ಕರೆಯುತ್ತಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅವರ ಜೀವನ ಮತ್ತು ಹೋರಾಟ ಯುವಜನತೆಗೆ ಮಾದರಿಯಾಗಿದೆ. ಅವರ ತ್ಯಾಗವನ್ನು ಕೇವಲ ಸ್ಮರಣೆಗೆ ಸೀಮಿತಗೊಳಿಸದೆ, ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಸಮಾಜದಲ್ಲಿ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಅತಿಥಿಯಾಗಿ ಎಐಡಿವೈಒ ಸಂಘಟನೆಯ ಮುಖಂಡ ಶರಣು ಪಾಟೀಲ್ ಮಾತನಾಡಿ, ಖುದಿರಾಮ್ ಬೋಸ್ ಅವರ ಜೀವನ ಮತ್ತು ಹೋರಾಟವನ್ನು ಇಂದಿನ ಯುವಜನತೆ ಅರ್ಥಮಾಡಿಕೊಂಡು, ಅವರ ದೇಶಪ್ರೇಮ, ಧೈರ್ಯ ಹಾಗೂ ತ್ಯಾಗದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇಂತಹ ಮಹಾನ್ ಕ್ರಾಂತಿಕಾರಿಗಳ ಜೀವನ, ಹೋರಾಟ ಮತ್ತು ವಿಚಾರಧಾರೆಗಳನ್ನು ಯುವಜನರಿಗೆ ಪರಿಚಯಿಸುವ ಅಗತ್ಯವಿದೆ. ಆದರೆ ಖುದಿರಾಮ್ ಬೋಸ್ ಅವರಂತಹ ಮಹಾನ್ ವ್ಯಕ್ತಿಗಳ ವಿಚಾರಧಾರೆಗಳನ್ನು ಪಠ್ಯಪುಸ್ತಕಗಳಲ್ಲಿ ಸಮರ್ಪಕವಾಗಿ ಅಳವಡಿಸದೆ ಇರುವುದು ದುರಂತ. ಅವರ ಹೋರಾಟದ ಆಶಯಗಳನ್ನು ಇಂದಿನ ಸಮಾಜದಲ್ಲಿ ಮುಂದುವರಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ಬಳಗದ ಸದಸ್ಯರಾದ ಭೀಮಾಶಂಕರ ಪಾಣೇಗಾಂವ, ಚಂದ್ರು ಭಾನಾಪುರ, ರುದ್ರಪ್ಪ ಭಂಡಾರಿ, ಬಸವರಾಜ ಕೊಡ್ಲಿ, ಮಂಜುನಾಥ ಅಂಗಡಿ, ಬಸವರಾಜ ಉಪ್ಪಿನ್, ರವಿ ಹಿರೇಮನಿ, ಕನಕರಾಯ ಭಜಂತ್ರಿ, ಬಸವರಾಜ ಕೊನಾರಿ, ಮುರಾರಿ ಭಜಂತ್ರಿ, ವಿಶ್ವನಾಥ ಬಿನ್ನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PV NEWS ಕನ್ನಡ 24×7 | ವಿಶೇಷ ವರದಿ

Prajavikshane

Chandru R Bhanapaur

Leave a Reply

error: Content is protected !!