ಮುದಗಲ್ಲ :-ಗ್ರಾಹಕರ ಸೋಗಿನಲ್ಲಿ ಬಂದು ಗಮನ ಬೇರೆಡೆ ಸೆಳೆದು ನಗ ನಾಣ್ಯ ಕದಿಯುವ ಗ್ಯಾಂಗ್‌ ಗಳ ಬಗ್ಗೆ ಮಾಲಕರು ಸದಾ ಜಾಗರೂಕರಾಗಿರಬೇಕು:- ವೆಂಕಟೇಶ ಮಾಡಗೇರಿ..

ಮುದಗಲ್ಲ ವರದಿ..

ಮುದಗಲ್ಲ :-ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜ್ಯುವೆಲ್ಲರಿ ಮಾಲೀಕರೊಂದಿಗೆ ಸಭೆ…

ಮುದಗಲ್ಲ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಸ್ಥಳೀಯ ಜ್ಯುವೆಲ್ಲರಿ ಮಾಲೀಕರೊಂದಿಗೆ ತುರ್ತು ಸುರಕ್ಷತಾ ಸಭೆಗಳನ್ನು ನಡೆಸುತ್ತಿದೆ ಮುದಗಲ್ಲ ಪಿಎಸ್ಐ ವೆಂಕಟೇಶ ಮಾಡಗೇರಿ ಅವರು ವಿಶೇಷ ಸಭೆ ನಡೆಸಿ ಮಾತನಾಡಿ ದ್ದರು ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬಂಗಾರದ ಅಂಗಡಿಗಳೇ ಕಳ್ಳರ ಮುಖ್ಯ ಗುರಿಯಾಗು ತ್ತಿರುವುದರಿಂದ, ಸುರಕ್ಷತೆಯನ್ನು ಹೆಚ್ಚಿಸಲು ಇಲಾಖೆಯ ಕಡ್ಡಾಯ ಮಾರ್ಗಸೂಚಿಗಳನ್ನು ದಯವಿಟ್ಟು ಪಾಲನೆ ಮಾಡಿ 360-ಡಿಗ್ರಿ ಸಿಸಿಟಿವಿ (CCTV) ಅಳವಡಿಕೆ ಕಡ್ಡಾಯಸಂಪೂರ್ಣ ಕವರೇಜ್: ಬಂಗಾರದ ಅಂಗಡಿಯ ಒಳಭಾಗ ಮಾತ್ರವಲ್ಲದೆ, ಹೊರಭಾಗ ಮತ್ತು ಅಂಗಡಿಗೆ ಹೊಂದಿಕೊಂಡಿರುವ ಪಕ್ಕದ ರಸ್ತೆಗಳು ಸ್ಪಷ್ಟವಾಗಿ ಕಾಣಿಸುವಂತೆ 360-ಡಿಗ್ರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಉತ್ತಮ ಗುಣಮಟ್ಟ (HD): ಅಪರಿಚಿತರ ಅಥವಾ ಗ್ರಾಹಕರ ಮುಖ ಮತ್ತು ಚಲನವಲನಗಳು ಸ್ಪಷ್ಟವಾಗಿ ಗುರುತಿಸುವಂತಹ ಹೈ-ಡೆಫಿನೇಷನ್ (HD) ಕ್ಯಾಮೆರಾಗಳನ್ನೇ ಬಳಸಬೇಕು,

ಅದರಲ್ಲೂ ಕೆಲವು ಮಾಲೀಕರು ರಾತ್ರಿ ಅಂಗಡಿ ಮುಚ್ಚುವಾಗ ಸಿಸಿಟಿವಿ ಆಫ್ ಮಾಡುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಕ್ಯಾಮೆರಾಗಳು ದಿನದ 24 ಗಂಟೆಯೂ ಕಡ್ಡಾಯವಾಗಿ ಚಾಲನೆ ಯಲ್ಲಿರಬೇಕು ಎಂದುರು ಬ್ಯಾಕಪ್ ಸಂಗ್ರಹ ಕನಿಷ್ಠ 30 ದಿನಗಳವರೆಗಿನ ಸಿಸಿಟಿವಿ ದೃಶ್ಯಾವಳಿಗಳ (Footage) ಬ್ಯಾಕಪ್ ಸುರಕ್ಷಿತವಾಗಿ ಸಂಗ್ರಹವಾಗಿರಬೇಕು

ಅಲಾರಾಂ ಮತ್ತು ಸೈರನ್: ತುರ್ತು ಸಂದರ್ಭಗಳಲ್ಲಿ ಅಥವಾ ಯಾರಾದರೂ ಬಲವಂತವಾಗಿ ನುಗ್ಗಲು ಯತ್ನಿಸಿದರೆ ತಕ್ಷಣವೇ ಧ್ವನಿ ಮಾಡುವ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ಸಂದೇಶ ರವಾನಿಸುವ ಕಾರ್ಯ ಕ್ಷಮತೆಯುಳ್ಳ ಅಲಾರಾಂ ಹಾಗೂ ಸೈರನ್‌ಗಳನ್ನುಅಳವಡಿಸಬೇಕು.ಸಂದೇಹಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರ: ಗ್ರಾಹಕರ ಸೋಗಿನಲ್ಲಿ ಬಂದು ಗಮನ ಬೇರೆಡೆ ಸೆಳೆದು ನಗನಾಣ್ಯ ಕದಿಯುವ ಗ್ಯಾಂಗ್‌ಗಳ ಬಗ್ಗೆ ಮಾಲಕರು ಸದಾ ಜಾಗರೂಕರಾಗಿರಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ 112 ಹೆಲ್ಪ್‌ಲೈನ್‌ಗೆ ಕರೆ ಮಾಡಬೇಕು ಎಂದು ಸುರಕ್ಷತೆಯನ್ನು ಹೆಚ್ಚಿಸಲು ಇಲಾಖೆಯ ಕಡ್ಡಾಯ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು

ಈ ಸಂದರ್ಭದಲ್ಲಿ ಸ್ಥಳೀಯ ಜ್ಯುವೆಲ್ಲರಿ ಮಾಲಕರಾದ ಭವರ್‌ಲಾಲ್ ಜಿ ವರ್ಮಾ,ಶ್ರೀಧರ ಪತ್ತಾರ ಸುನಿಲ್ ಕನಸಾವಿ,ಪತ್ತಾರ , ವಿಜಯ ಸೇಟ್, ಮಾನಪ್ಪ  ಪತ್ತಾರ ಮಣಿಕಂಠ ,ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!