Post Views: 111
ಮುದಗಲ್ಲ :- ಪುರಸಭೆ ವತಿಯಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ..

ಮುದಗಲ್ಲ : ಪುರಸಭೆ ವತಿಯಿಂದ ಸವಿತಾ ಮಹರ್ಷಿ ಜಯಂತಿಯನ್ನು ಆಚರಣೆ ಮಾಡಲಾಯಿತು
ಸವಿತಾ ಮಹರ್ಷಿ ಅವರ ಭಾವಚಿತ್ರ ಕ್ಕೆ ಸವಿತಾ ಪುರಸಭೆ ಸಿಬ್ಬಂದಿ ಚನ್ನಮ್ಮ ದಳವಾಯಿ ಹಿರೇಮಠ ಅವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮ್ಯಾನೇಜರ್ ಸುರೇಶ ಅವರು ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿದ್ದ ಕಾರಣ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ :- ಪುರಸಭೆಯ ಕಂದಾಯ ವಿಭಾಗದ ಅಂತೋಣೀ ರಾಜ್ , ಸಿಬ್ಬಂದಿ ವರ್ಗದವರಾದ ಬಸವರಾಜ , ನಿಸಾರ್ ಅಹಮದ್, ಜಿಲಾನಿ,ಸೇರಿದಂತೆ ಪೌರ ಕಾರ್ಮಿಕರ ಉಪಸ್ಥಿತರಿದ್ದರು.
ವರದಿ:-ಮಂಜುನಾಥ ಕುಂಬಾರ..