ಮುದಗಲ್ಲ :- ಕಾಂಗ್ರೆಸ್‌ನಿಂದ ‘ಮತ ಕಳ್ಳತನ ನಿಲ್ಲಿಸಿ’ ಅಭಿಯಾನ ಆರಂಭ..

ಮುದಗಲ್ಲ ವರದಿ..

ಮುದಗಲ್ಲ :- ಕಾಂಗ್ರೆಸ್‌ನಿಂದ ‘ಮತ ಕಳ್ಳತನ ನಿಲ್ಲಿಸಿ’ ಅಭಿಯಾನ ಆರಂಭ..

ಮುದಗಲ್ಲ:- ಇಲ್ಲಿನ ಪುರಸಭೆ ಮುಂಭಾಗದಲ್ಲಿ ‘ಮತ ಕಳ್ಳತನ ನಿಲ್ಲಿಸಿ’ ಎಂಬ ಅಭಿಯಾನದ ಅಂಗವಾಗಿ ಶನಿವಾರ ಸಹಿಸಂಗ್ರಹ ಅಭಿಯಾನ ನಡೆಯಿತು.

ಇದಕ್ಕೂ ಮುನ್ನ ಮಾತನಾಡಿದ , ತಾ.ಪಂ.ಕೆ.ಡಿ.ಪಿ ಸದಸ್ಯ ರಾಘವೇಂದ್ರ ಎನ್ ಕುದುರಿ,‘ಈ ಅಭಿಯಾನ ಕೇವಲ ಪಟ್ಟಣಕ್ಕೆ ಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ಬೂತ್‌ಮಟ್ಟದಲ್ಲೂ ಸಹಿ ಸಂಗ್ರಹಿಸಲಾಗುತ್ತದೆ. ಪ್ರತಿ ಕ್ಷೇತ್ರದಿಂದ ಸಂಗ್ರಹಿಸಿದ ಸಹಿಗಳನ್ನು ಕೆಪಿಸಿಸಿ ಕಳುಹಿಸಬೇಕಿದೆ.

ಮತಕಳ್ಳತನ ಹೇಗೆ ದೇಶದಲ್ಲಿ ನಡೆದಿದೆ ಮತ್ತು ನಡೆಯುತ್ತಿದೆ ಎಂದು ಜನಸಾಮಾನ್ಯರಿಗೆ ತಿಳಿಸುವುದು ಈ ಅಭಿಯಾನದ ಉದ್ದೇಶ’ ಎಂದರು.

ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜಲ್ಲಿ :- ಬಿಜೆ‍ಪಿ ಅವಧಿಯಲ್ಲಿ ಆಗಿರುವ ಮತಕಳ್ಳತನ ಕುರಿತು ಜನರಲ್ಲಿ ಅರಿವು ಮೂಡಿಸಲೆಂದೇ ಈ ಅಭಿಯಾನ ಕೈಗೊಳ್ಳಲಾಗಿದ್ದು, ಜನಸಾಮಾನ್ಯರಿಗೆ ಎಲ್ಲರಿಗೂ ಇದು ಗೊತ್ತಾಗಬೇಕಿದೆ’ ಎಂದು ಹೇಳಿದರು.

ರಾಹುಲ್‌ ಗಾಂಧಿ ಈ ಕುರಿತು ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸದೇ ಮರು ಪ್ರಶ್ನೆಗಳನ್ನು ಹಾಕುತ್ತಿದೆ ಎಂದು ಕಿಡಿಕಾರಿದರು.

‘ಶುದ್ಧವಾದ ಮತದಾರರ ಪಟ್ಟಿ ಇದ್ದಲ್ಲಿ ಶುದ್ಧವಾದ ಚುನಾವಣೆ ಸಾಧ್ಯ’ ಎಂದು ಪ್ರತಿಪಾದಿಸಿದ ಅವರು, ‘ಇಡೀ ಚುನಾವಣಾ ಪ್ರಕ್ರಿಯೆಯೇ ಶುದ್ಧವಾಗಬೇಕು’ ಎಂದರು.

ನಂತರ ಮಾತನಾಡಿದ ಪರಮೇಶಕ ನ್ನಾಪೂರಹಟ್ಟಿ ,
ತಾ.ಪಂ.ಕೆ.ಡಿ.ಪಿ ಸದಸ್ಯ ರಾಹುಲ್‌ ಗಾಂಧಿ ಈ ಕುರಿತು ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸದೇ ಮರು ಪ್ರಶ್ನೆಗಳನ್ನು ಹಾಕುತ್ತಿದೆ ಎಂದು ಕಿಡಿಕಾರಿದರು. ‘ಶುದ್ಧವಾದ ಮತದಾರರ ಪಟ್ಟಿ ಇದ್ದಲ್ಲಿ ಶುದ್ಧವಾದ ಚುನಾವಣೆ ಸಾಧ್ಯ’ ಎಂದು ಪ್ರತಿಪಾದಿಸಿದ ಅವರು, ‘ಇಡೀ ಚುನಾವಣಾ ಪ್ರಕ್ರಿಯೆಯೇ ಶುದ್ಧವಾಗಬೇಕು’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜಲ್ಲಿ ತಾ.ಪಂ.ಕೆ.ಡಿ.ಪಿ ಸದಸ್ಯ ಪರಮೇಶಕ ನ್ನಾಪೂರಹಟ್ಟಿ ,
ಅಲ್ಪಸಂಖ್ಯಾತರ ಘಟಕದ ಮುದಗಲ್ ಬ್ಲಾಕ್ ಅಧ್ಯಕ್ಷರಾಗಿ
ಅಬ್ದುಲ್ ಗಪೂರ್ ಖಾನ್ ,ನಾಗರಾಜ ದಪ್ಪೇದಾರ,ಮಂಜುನಾಥ ಬನ್ನಿಗೋಳಕರ್ , ಇತರರು ಕಾಂಗ್ರೆಸ್ ಪಕ್ಷದ ಮುಖಂಡ ಉಪಸ್ಥಿತರಿದ್ದರು…

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!