You are currently viewing ಮುದಗಲ್ಲ :-ಜೂನ್ 22 ರಂದು ತಂಗಡಗಿ ಯಲ್ಲಿ ಬಸವ ಪ್ರಿಯ ಅಪ್ಪಣ್ಣ ಮಹಾಸ್ವಾಮಿಗಳ 18 ನೇ ಪುಣ್ಯ ಸ್ಮರಣೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ…
filter: 0; fileterIntensity: 0.0; filterMask: 0; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 41;

ಮುದಗಲ್ಲ :-ಜೂನ್ 22 ರಂದು ತಂಗಡಗಿ ಯಲ್ಲಿ ಬಸವ ಪ್ರಿಯ ಅಪ್ಪಣ್ಣ ಮಹಾಸ್ವಾಮಿಗಳ 18 ನೇ ಪುಣ್ಯ ಸ್ಮರಣೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ…

ಮುದಗಲ್ಲ ವರದಿ…

ಮುದಗಲ್ಲ :-ಜೂನ್ 22 ರಂದು ತಂಗಡಗಿ ಯಲ್ಲಿ ಬಸವ ಪ್ರಿಯ ಅಪ್ಪಣ್ಣ ಮಹಾಸ್ವಾಮಿಗಳ 18 ನೇ ಪುಣ್ಯ ಸ್ಮರಣೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ…

ಮುದಗಲ್ಲ :- ಶ್ರೀ ಬಸವ ಪ್ರಿಯ ಅಪ್ಪಣ್ಣ ಮಹಾಸ್ವಾಮಿಗಳ 18 ನೇ ಪುಣ್ಯಸ್ಮರಣೋತ್ಸವವು ಜೂನ್ 22, 2026ರ ಸೋಮವಾರದಂದು ಅತ್ಯಂತ ಭಕ್ತಿಪೂರ್ವಕವಾಗಿ ಜರುಗಲಿದೆ..

ತಂಗಡಗಿ ಗ್ರಾಮದ ಹಡಪದ ಅಪ್ಪಣ್ಣ ದೇವರ ಸಂಸ್ಥಾನ ಮಠದ ಪ್ರಥಮ ಜಗದ್ಗುರು ಬಸವಪ್ರೀಯ ಅಪ್ಪಣ್ಣ ಸ್ವಾಮೀಜಿ 18ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠ(ರಿ), ಸುಕ್ಷೇತ್ರ ತಂಗಡಗಿ ಹಾಗೂ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ (ರಿ), ಬೆಂಗಳೂರು ಸಂಯುಕ್ತಾಶ್ರಯದಲ್ಲಿ ರಾಜ್ಯದ ಹಿಂದುಳಿದ, ದಲಿತ, ಮಠಾಧೀಶ ಒಕ್ಕೂಟದ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಹಡಪದ ಸಮಾಜದ ಪ್ರಥಮ ಜಗದ್ಗುರು ಗಳಾದ ಶ್ರೀ ಅಂಗೈಕ್ಯ ಬಸವಪ್ರಿಯ ಅಪ್ಪಣ್ಣ ಮಹಾಸ್ವಾಮಿಗಳ 18ನೇಯ ಪುಣ್ಯಸ್ಮರಣೋತ್ಸವ ಶ್ರೀ ಮ.ನಿ.ಪ್ರ. ಜಗದ್ಗುರು ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮಗಳು, ಬೆಳಗ್ಗೆ 7: 00 ಗಂಟೆಗೆ ಸಹಜ ಶಿವಯೋಗ-ಅಂಗ ದೀಕ್ಷೆ, ಪ್ರಥಮ ಜಗದ್ಗುರು ಬಸವಪ್ರಿಯ ಅಪ್ಪಣ್ಣ ಮಹಾಸ್ವಾಮಿಯ ಕರ್ತೃಗದ್ದುಗೆ ಅಡಿಗಲ್ಲು ಸಮಾರಂಭ ಹಾಗೂ ಸಮಾಜದ 2025-26ನೇ ಸಾಲಿನ ಶೇ.90% ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ನಿಜಮುಕ್ತ ಅಂಗಮ್ಮ ತಾಯ ನೂತನ ಭಾವಚಿತ್ರ ಅನಾವರಣ ಸಮಾರಂಭ ಸೋಮವಾರ ದಿನಾಂಕ 22 -06 _2026 ರಂದು ತಂಗಡಗಿ ಅದ್ದೂರಿ ಯಾಗಿ ನಡೆಯುದೆ ಎಂದು ಪತ್ರಿಕೆ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಬೆಂಗಳೂರು ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ಗದ್ಯೆಪ್ಪ M ಜಕ್ಕೆರಮಡು ಅವರು ಸಮಾರಂಭ ಬಗ್ಗೆ ಮಾಹಿತಿ ನೀಡಿದರು.

ತಂಗಡಗಿ ಸುಕ್ಷೇತ್ರದ ಶ್ರೀ ಹಡಪದ ಅಪ್ಪಣ್ಣದೇವರ ಮಹಾ ಸಂಸ್ಥಾನ ಮಠದ ಪ್ರಥಮ ಜಗದ್ಗುರು ಶ್ರೀ ಶ್ರೀ ಬಸವಪ್ರಿಯ ಅಪ್ಪಣ್ಣ ಮಹಾ ಸ್ವಾಮಿಗಳ 18 ನೇ ಪುಣ್ಯಸ್ಮರ ಣೋತ್ಸವವು ಜೂನ್ 22, 2026ರ ಸೋಮವಾರದಂದು ಅತ್ಯಂತ ಭಕ್ತಿಪೂರ್ವಕವಾಗಿ ಜರುಗಲಿದೆ。

ಸಮಾರಂಭ ದಲ್ಲಿ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ
ಎಂ.ಬಿ.ಪಾಟೀಲ್‌ ವಿಜಯಪುರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು, ಭಾವಚಿತ್ರ ಅನಾವರಣ/ಪುಷ್ಪಾರ್ಪಣೆ ರಮೇಶ ಜಿಗಜಿಣಗಿ ಸಂಸದರು, ವಿಜಯಪುರ ಹಾಗೂ
ಕಾರ್ಯಕ್ರಮದ ಅಧ್ಯಕ್ಷರು ಸಿ ಎಸ್ ನಾಡಗೌಡ ಅಪ್ಪಾಜಿ
ಮಾನ್ಯ ಅಧ್ಯಕ್ಷರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗದುಹಾಗೂ ಶಾಸಕರು ಮುದ್ದೆಬಿಹಾಳ ವಿಧಾನಸಭಾ ಕ್ಷೇತ್ರ,
ಮುಖ್ಯ ಅತಿಥಿಗಳು ಶ್ರೀ ವಿಜಯಾನಂದ ಕಾಶಪ್ಪನವರ್
ಮಾನ್ಯ ಅಧ್ಯಕ್ಷರು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
ಹಾಗೂ ಶಾಸಕರು ಹನುಗುಂದ , ಹಾಗೂ ದಿವ್ಯಸಾನಿಧ್ಯ
ಶ್ರೀ ಮ.ನಿ.ಪ್ರ ಜಗದ್ಗುರು ಶಿವಮೂರ್ತಿ ಮುರಘಾ ಶರಣರು,
ಮುರಘಾಮಠ, ಚಿತ್ರದುರ್ಗ, ಶ್ರೀ ಮ.ನಿ.ಪ್ರ ಜಗದ್ಗುರು ಗುರುಮಹಾಂತ ಮಹಾ ಸ್ವಾಮಿಗಳು, ಚಿತ್ತರಗಿ ಶ್ರೀವಿಜಯಮಹಾಂತೇಶ್ವರ ಸಂಸ್ಥಾನಮಠ, ಇಲಕಲ್ಲ,
ಶ್ರೀ ಮ.ನಿ.ಪ್ರ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು, ಕಾಗಿನೆಲೆ ಕನಕಗುರುಪೀಠ,ಶ್ರೀ ಮ.ನಿ.ಪ್ರ ಜಗದ್ಗುರು ಶಾಂತವೀರ ಮಹಾ ಸ್ವಾಮಿಗಳು ಕುಂಚಿಟಿಗ ಮಹಾಸಂಸ್ಥಾನಮಠ ಸ್ವಾಮಿಗಳು ಸಮಾರಂಭದಲ್ಲಿ ಇರುತ್ತಾರೆ

ಹಾಗೂ ಪುಣ್ಯಸ್ಮರಣೋತ್ಸವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ಭಕ್ತಿಪೂರ್ವಕ ಕಾರ್ಯಕ್ರ ಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

 

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಬೆಂಗಳೂರು ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ಗದ್ಯೆಪ್ಪ M ಜಕ್ಕೆರಮಡು , ಶ್ರೀ ಗುಂಡಪ್ಪ ಕಿಲ್ಲ ಮುದುಗಲ್ , ಮುದಗಲ್ ಘಟಕದ ಅಧ್ಯಕ್ಷರು ಶ್ರೀ ಹನುಮಂತ ಎಂ ಜಕ್ಕರಮಡು ಉಪಾಧ್ಯಕ್ಷರು ಮುದುಗಲ್ ಘಟಕ ಶಿವಣ್ಣ ಎಂ ಖೈರವಾಡಿಗಿ ಕಾರ್ಯದರ್ಶಿಗಳು ಮುದಗಲ್ ಘಟಕ ,ಅಮರೇಶ A ಮಟ್ಟೂರು ಜಿಲ್ಲಾ ಸಮಿತಿ ಸದಸ್ಯರು  ,ಈಶಪ್ಪ S ವ್ಯಾಕರನಾಳ ಕಾನೂನು.ಸಲಯಗಾರರು, ದೊಡ್ಡಬಸಪ್ಪ ಕಂಬಳಿಹಾಳ ಮುಖಂಡರು , ಶಿವಮೂರ್ತಿ ಮೇಸ್ತಿ ಪೇಟೆ , ತಿರುಪತಿ ಆಶಿಹಾಳ ,ಗಣೇಶ್ ರಾಮತ್ನಾಳ, ಮಲ್ಲಪ್ಪ ಮಸ್ತಿಪೇಟೆ ಇತರರು ಉಪಸ್ಥಿತರಿದ್ದರು..

 ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!