ಮುದಗಲ್ಲ ವರದಿ..
ಕನಕದಾಸ ಜಯಂತಿ: ಅದ್ಧೂರಿ ಮೆರವಣಿಗೆ..
ಡೊಳ್ಳು ಕುಣಿತದೊಂದಿಗೆ, ಡಿಜೆ ಅಬ್ಬರ..

ಮುದಗಲ್ಲ :- ಸಾಂಸ್ಕೃತಿಕ ಕಲರವದೊಂದಿಗೆ ಸೋಮವಾರ ಶ್ರೀ ಅಂಜೇನಯ ದೇವಸ್ಥಾನ ದಿಂದ ಮೇಗಳಪೇಟೆ ವರಗೆ ಕನಕದಾಸ ಜಯಂತಿ ವೈಭವದಿಂದ ಅದ್ದೂರಿ ಮೆರವಣಿಗೆ ನಡೆಯಿತು.

ಕುರುಬ ಸಮಾಜದ ಆಶ್ರಯದಲ್ಲಿ ಕನಕದಾಸ ಜಯಂತಿ ಆಯೋಜಿ ಸಲಾಗಿತ್ತು. ಯುವಕರ ಜಯಘೋಷದೊಂದಿಗೆ ಹೂವಿನಿಂದ ಅಲಂಕರಿಸಿದ್ದ ಗಾಡಿಯಲ್ಲಿ ಕನಕದಾಸರ ಚಿತ್ರವನ್ನು ಆರೋಹಣ ಮಾಡಲಾಯಿತು.

ನಂತರ ಕನಕದಾಸರ ಚಿತ್ರಕ್ಕೆ ಪೂಜೆ
ಸಲ್ಲಿಸಲಾಯಿತು. ಮಹಾಮಂಗಳಾರತಿ ನೆರವೇರಿದ ತಕ್ಷಣ ನೆರದಿದ್ದ ಗಣ್ಯರು ಕನಕದಾಸರ ಚಿತ್ರಕ್ಕೆ ಪುಷ್ಪವೃಷ್ಟಿ ಸಮರ್ಪಿಸಿದರು.
ಡೊಳ್ಳು ಕುಣಿತವನ್ನು ಜನರು ವಿಕ್ಷಿಸಿದರು. ಕಿವಿಗಡಚಿಕ್ಕುವ ಶಬ್ದದೊಂದಿಗೆ ನಾದಮಯವಾಗಿ ಕೇಳಿ ಬರುತ್ತಿದ್ದ ಡೊಳ್ಳಿನ ಸದ್ದಿಗೆ ಮೆರವಣಿಗೆಯಲ್ಲಿದ್ದವುರು ಹೆಜ್ಜೆ ಹಾಕುತ್ತಿದ್ದರು. ಮೆರವಣಿಗೆಯಲ್ಲಿ ಡಿಜೆಯ ಅಬ್ಬರ ಜೋರಾಗಿತ್ತು. ಯುವಕರನ್ನು ಕುಣಿಸುವಂತಹ ಹಾಡುಗಳೊಂದಿಗೆ ಕನಕದಾಸರು ಕೀರ್ತನೆಗಳು ಡಿಜೆಯಲ್ಲಿ ಕೇಳಿ ಬಂದವು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಎಸ್ ಹೂಲಿಗೇರಿ ಅವರು ಮಾತನಾಡಿದರು ಸಮಾಜವನ್ನು ಸನ್ಮಾರ್ಗದಲ್ಲಿನ ಕೊಂಡೊಯ್ಯಲು ಸಮಾಜದವರು ಒಗ್ಗಟ್ಟಿನಿಂದ ಸಾಗಬೇಕು. ಸಮಾಜದ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಬೇಕು. ಶೈಕ್ಷಣಿಕ ಸಾಧನೆಯಲ್ಲಿ ಸಮಾಜದ ಮಕ್ಕಳು ಹೆಜ್ಜೆ ಹಾಕಬೇಕು. ಕನದಾಸರ ಕೀರ್ತನೆಗಳನ್ನು ಹಾಡುವುದಕ್ಕೆ, ಕೇಳುವುದಕ್ಕೆ ಮಾತ್ರ ಬಳಕೆ ಮಾಡಿಕೊಳ್ಳದೆ, ಅದರಂತೆ ನಡೆದುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಚಂದ್ರಶೇಖರ್ , ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಿವಶಂಕರಗೌಡ , ಆಪ್ತ ಸಹಾಯಕ ರಾದ ಪಕೀರಪ್ಪ ಕುರಿ , ಸಣ್ಣ ಸಿದ್ದಯ್ಯ , ರಾಘವೇಂದ್ರ ಕುದುರಿ, ಶರಣಯ್ಯ ಒಡೆಯರ್ ,
ಅಯಪ್ಪಯ್ಯ, ರಾಯಪ್ಪ, ನಂದಪ್ಪ,
ಶಿವಯ್ಯ ಸ್ವಾಮಿ, ಹೊನ್ನಪ್ಪ,ಗೋರಪ್ಪ, ನಿಂಗಪ್ಪ, ನಾಗಪ್ಪ, ಸಂಜೀವಪ್ಪ ಹಂಚಿನಾಳ,
ಸಂಜೀವಪ್ಪ ಕನ್ನಾಪೂರ ಹಟ್ಟಿ, ಶಿವಪ್ಪ , ಪರಿಶಿಷ್ಟ ಜಾತಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಛಲವಾದಿ, ಯುವ ಕಾಂಗ್ರೆಸ್ ಅಧ್ಯಕ್ಷ ಖದಿರ ಪಾನ್ವಾಲೆ. ಪದವೀಧರ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ ಕೋರಿ.,ಮೌನೇಶ್ ಚಲವಾದಿ., ಗಂಗಾಧರ್ ಯಾದವ್. ಗಣ್ಯರು ಉಪಸ್ಥಿತರಿದ್ದರು,
ವರದಿ:-ಮಂಜುನಾಥ ಕುಂಬಾರ