You are currently viewing ಮುದಗಲ್ಲ :- ಉತ್ತಮ ಸಂಸ್ಕಾರಕ್ಕೆ ಪುರಾಣ ಅಗತ್ಯ :-ಡಾ!!  ಶಿವಬಸಪ್ಪ ಹೆಸರೂರ್..

ಮುದಗಲ್ಲ :- ಉತ್ತಮ ಸಂಸ್ಕಾರಕ್ಕೆ ಪುರಾಣ ಅಗತ್ಯ :-ಡಾ!!  ಶಿವಬಸಪ್ಪ ಹೆಸರೂರ್..

ಮುದಗಲ್ಲ ವರದಿ..

ಉತ್ತಮ ಸಂಸ್ಕಾರಕ್ಕೆ ಪುರಾಣ ಅಗತ್ಯ :-ಡಾ!!  ಶಿವಬಸಪ್ಪ ಹೆಸರೂರ್..

ಮುದಗಲ್ಲ : ಪಟ್ಟಣದ ಕುಂಬಾರಪೇಟೆಯ ಬಸವೇಶ್ವರ ಜಾತ್ರಾ ಮಹೋತ್ಸವದ ಹಾಗೂ ಬಸವ ಜಯಂತಿ ಉತ್ಸವದ ನಿಮಿತ್ತ 11 ದಿನಗಳು ನಡೆಯುವ ಪುರಾಣದಲ್ಲಿ ಆರನೇ  ದಿನದಂದು ನಿತ್ಯದ ಬದುಕಿಗೆ ಉತ್ತಮ ಸಂಸ್ಕಾರ ದೊರೆಯಲು ಪುರಾಣದಂತಹ ಆದರ್ಶ ಕಥೆಗಳು ಬಹಳಷ್ಟು ಅಗತ್ಯವಾಗಿವೆ ಎಂದುಲಿಂಗಸೂರ ನ ಖ್ಯಾತ ವೈದ್ಯರು ಹಾಗೂ ಅಖಿಲ ಭಾರತ ಬಣಜಿಗ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಡಾ!!  ಶಿವಬಸಪ್ಪ ಅವರು ಎಂದು
ಹೇಳಿದರು.

ಶ್ರೀ ಬಸವೇಶ್ವರ ನಾಲ್ಕನೇ ವರ್ಷದ ಜಾತ್ರಾ ಮಹೋತ್ಸವ   ಬಸವೇಶ್ವರ ಜಾತ್ರಾ ನಿಮಿತ್ಯವಾಗಿ 11 ದಿನಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸುಕ್ಷೇತ್ರ ಗುರುಗುಂಟಿ ಶ್ರೀ ಅಮರೇಶ್ವರ ಚರಿತಾಮೃತ ಪುರಾಣದಲ್ಲಿ ಸಾಯಂಕಾಲ 7:00 ಆರನೇ ದಿನದ ಪುರಾಣದಲ್ಲಿ ಮಾತನಾಡಿದ ಅವರು, ಮನುಷ್ಯನ ಮಾನವೀಯ ಮೌಲ್ಯಗಳು ವೃದ್ಧಿಯಾಗಲು ಶರಣ, ಸಂತರ ಪುಣ್ಯಕಥೆಗಳು ಅಗಾಧವಾಗಿ ಕಾರ್ಯನಿರ್ವ ಹಿಸುತ್ತವೆ. ಇಂಥಹ ಕಥೆಗಳ ಸಾರ ಪ್ರತಿಯೊಬ್ಬರು ಆಲಿಸಿ ಮಾನವ ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದರು.

ಯಲಬುರ್ಗಾದ ಹಲವು ಪ್ರಶಸ್ತಿ ಪುರಸ್ಕೃತರಾದ ಶ್ರೀ ಸಂಗಣ್ಣ ಕೊಪ್ಪಳ ಅವರಿಂದ ವಿಶೇಷ ವಿಷಯ ಚಿಂತನ ವಾಚನ ದಲ್ಲಿ  ಮನುಷ್ಯ ಜನ್ಮಕ್ಕೆ ಬಂದ ನಾವುಗಳೆಲ್ಲ ಮಹಾತ್ಮರು, ಶರಣ
ಸತ್ಪುರುಷರು ತೋರಿದ ದಾರಿ ಅನುಸರಿಸಬೇಕು. ಅವರ ಬದುಕಿನ ದಿನಗಳ ಬೆಳಕಿನಲ್ಲಿ ನಡೆದು ನಮ್ಮ ಜೀವನ ಪಾವನಮಾಡಿಕೊಳ್ಳ ಬೇಕೆಂದು ಹೇಳಿದರು

ಡಾ!!  ಶಿವಬಸಪ್ಪ , ಮಹಾಂತೇಶ ಪಾಟೀಲ್, ಉತ್ತಮವಾದ ಶಿಕ್ಷಕಿಯಾದ ವಿಜಯಲಕ್ಷ್ಮಿ ಮಾಟೂರು , ವರದಿಗಾರರಾದ ಶಿವರಾಜ ಸುಂಕದ , ಶಶಿಧರ ಕಂಚಿಮಠ , ಹಾಗೂ ಮಹಾಂತೇಶ ಪಾಟೀಲ್, ಮಹಾಂತೇಶ ಕುಂಬಾರ , ಬಸವೇಶ್ವರ ಸಮಿತಿ ಇಂದ ಗಣ್ಯರಿಗೆ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಷ.ಬ್ರ. ಡಾ. ಅಭಿನವ ಚನ್ನಬಸವ ಶಿವಾಚಾರ್ಯರು, ನಂದವಾಡಗಿ  ಸಂಗೀತ ಗಾಯಕ ರಾದ ಮನೋಹರ್ ಹಿರೇಮಠ ಹಾಗೂ ತಬಲಾ ವಾದ್ಯಕರಾದ
ಪ್ರತಾಪ ಹಿರೇಮಠ ಕುಷ್ಟಗಿ ,ಹಾಗೂ
ಅಖಿಲ ಭಾರತ ಬಣಜಿಗ ಸಮಾಜದ ಜಿಲ್ಲಾ ಅಧ್ಯಕ್ಷ ರಾದ ಮಹಾಂತೇಶ ಪಾಟೀಲ್ ಹಾಗೂ  ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಾಟೂರು, ಶಿವಾನಂದ ಸುಂಕದ, ಸಂಗಮೇಶ ಸರಗಣಾಚಾರಿ, ವೀರೇಶ ಖೇಣೇದ, ಅಮರೇಶಪ್ಪ ತಲೇಖಾನ್, ಶರಣಪ್ಪ ಕುಂಬಾರ, ಚನ್ನಬಸವಕುಂಬಾರ ,ಮಹಾಂತೇಶ ಗದ್ದಿ, ಅನುರಾಧ ಸಾಲಿಮಠ, ಶಶಿಕಲಾ ಭೋವಿ, ಬಸಮ್ಮ ಪಾಟೀಲ, ತೋಟಮ್ಮ ಅಂಗಡಿ, ಬಸವರಾಜ ಬಳೆಗಾರ, ಶರಣಪ್ಪ ಕುಂಬಾರ್ ಬಸಯ್ಯಸ್ವಾಮಿ, ನಾಗರಾಜ ದಫೇದಾರ, ಬಸವರಾಜ ಚಟ್ಟೇರ್, ಇದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!