BREAKING : ಕೊಪ್ಪಳದಲ್ಲಿ ಮೂವರು ಕಾರ್ಮಿಕರ ದುರ್ಮರಣ..!

You are currently viewing BREAKING : ಕೊಪ್ಪಳದಲ್ಲಿ ಮೂವರು ಕಾರ್ಮಿಕರ ದುರ್ಮರಣ..!

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ :

BREAKING : ಕೊಪ್ಪಳ ಜಿಲ್ಲೆಯಲ್ಲಿ ಮೂವರು ಕಾರ್ಮಿಕರ ದುರ್ಮರಣ..!

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಘನ ಘೋರವಾದ ದುರಂತವೊಂದು ಸಂಭವಿಸಿದ್ದು, ಲಾರಿಯಿಂದ ಪೈಪ್ ಇಳಿಸುವಾಗ ಬರೋಬ್ಬರಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಷ್ಟಗಿ ಕೈಗಾರಿಕಾ ವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಇಂದು ಲಾರಿಯಿಂದ ಪೈಪ್ ಇಳಿಸುವಾಗ ಪೈಪ್ ಗಳು ಕಾರ್ಮಿಕರ ಮೇಲೆ ಬಿದ್ದಿವೆ ಎಂದು ತಿಳಿದು ಬಂದಿದೆ. ಈ ವೇಳೆ ಪೈಪ್ ಗಳ ಅಡಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿರುತ್ತಾರೆ. ಈ ಘಟನಾ ಸ್ಥಳಕ್ಕೆ ಕುಷ್ಟಗಿಯ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

error: Content is protected !!