LOCAL NEWS : ಬಿತ್ತನ ಬೀಜ, ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಿ : ಎಂ ಎನ್ ಕುಕನೂರ್
ಕುಕನೂರು : ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬಿತ್ತನೆಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ಗೊಬ್ಬರಗಳ ದಾಸ್ತಾನು ಕೊರತೆಯಾಗದಂತೆ ಅಧಿಕಾರಿಗಳು ನಿಗ ವಹಿಸಬೇಕು ಎಂದು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಾಷ್ಟ್ರಾಧ್ಯಕ್ಷ ಎಂ. ಎನ್ ಕುಕನೂರು ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಾಷ್ಟ್ರಾಧ್ಯಕ್ಷ ಎಂ ಎನ್ ಕುಕನೂರು ಮಾತನಾಡುತ್ತಾ ಕುಕನೂರು ಯಲಬುರ್ಗಾ ತಾಲೂಕಿನ ಬಹುತೇಕ ಪ್ರದೇಶ ಮಳೆಯಾಧಾರಿತವಾಗಿದ್ದು ಮುಂಗಾರು ಬಿತ್ತನೆಗೆ ಸದ್ಯ ಮಳೆ ಉತ್ತಮವಾಗಿ ಸುರಿದ್ದಿದ್ದು ರೈತರು ಕೃಷಿ ಚಟುವಟಿಕೆಗಾಗಿ ತಮ್ಮ ಜಮೀನನ್ನು ಹದಗೊಳಿಸುವ ನಿಟ್ಟಿನಲ್ಲಿ ಇನ್ನೇನು ಕಾರ್ಯಪ್ರವೃತ್ತರಾಗುತ್ತಾರೆ.
ಆದ್ದರಿಂದ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರಗಳನ್ನು ಪೂರೈಕೆ ಮಾಡುವ ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳು ನಿಗ ವಹಿಸಿ ಅಗತ್ಯಕ್ಕಿಂತ ಅಲ್ಪ ಪ್ರಮಾಣದ ಹೆಚ್ಚಿನ ದಾಸ್ತಾನವನ್ನು ಕೇಂದ್ರಗಳಲ್ಲಿ ಇಡುವುದರಿಂದ ರೈತರಿಗೆ ಅನುಕೂಲಕರವಾಗಿ ಉತ್ತಮ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಆದ್ದರಿಂದ ಯಾವುದೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಗ ವಹಿಸುವುದರೊಂದಿಗೆ ರೈತ ಪರ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಆಗ್ರಹ ಪಡಿಸಿದರು.
ಈ ವೇಳೆಯಲ್ಲಿ ಚಂದ್ರಕಾಂತ್ ಪಾಟೀಲ್ ರಾಜ್ಯ ಉಪಾಧ್ಯಕ್ಷರು, ಯಶೋದಾ ಸಿ ರಾಜ್ಯ ಉಪಾಧ್ಯಕ್ಷರು ಮಹಿಳಾ ಘಟಕ, ಮಂಜುಳಾ ರಾಮೇಗೌಡ ಮೈಸೂರು ಜಿಲ್ಲಾ ಉಪಾಧ್ಯಕ್ಷರು, ಪಿಡ್ಡ ನಗೌಡ ಮಾಲಿ ಪಾಟೀಲ್ ಕೊಪ್ಪಳ ಜಿಲ್ಲಾ ಕಾರ್ಯಧ್ಯಕ್ಷರು, ಬಸವರಾಜ ಅಡವಿ, ರಾಜೇಶ್ ಸಣ್ಣಕ್ಕಿ, ಮಾಜಿದ್ ಖಾನ್ ಮುಲ್ಲಾ, ಮೆಹಬೂಬ್ ಮಾಳೆಕೊಪ್ಪ, ಹನುಮೇಶ್, ಹೊನ್ನಪ್ಪ, ಬಶೀರ್ ಅಹಮದ್ ಖಾನ್ ಮುಲ್ಲಾ,ವೆಂಕಟೇಶ್ ಇಳಿಗೆರ್, ಬರ್ಮಣ್ಣ, ಅಂಬರೀಶ್, ಮತ್ತು ಇತರರು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ. ರಿ. ದೆಹಲಿ ಸದಸ್ಯರು ಉಪಸ್ಥಿತರಿದ್ದರು.