ಪಂಜಾಬ್ : ಐಬಿ ಅನ್ನು ದಾಟಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ಪಾಕಿಸ್ತಾನದ ಪ್ರಜೆಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಡೆಗಳು ಗಡಿಯಲ್ಲಿವೇ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಅಮೃತಸರ ಜಿಲ್ಲೆಯ ಕಮೀರ್‌ಪುರ ಗ್ರಾಮದ ಬಳಿಯಲ್ಲಿ ನಡೆದಿದೆ. ಬಂಧಿತ ಪಾಕ್ ಪ್ರಜೆಯು ಅಚಾತುರ್ಯದಿಂದ ಭಾರತದ ಪ್ರದೇಶವನ್ನು ದಾಟಿದ್ದಾನೆ ಎಂದು ತನಿಖೆ ಯಿಂದ ತಿಳಿದು ಬಂದಿದೆ. ಮಾನವೀಯ ಆಧಾರದ ಮೇಲೆ ಅವರನ್ನು ಪಾಕಿಸ್ತಾನ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಗಳು (ಬಿಎಸ್‌ಎಫ್) ತಿಳಿಸಿದ್ದಾರೆ.
BIG NEWS : ಅಕ್ರಮವಾಗಿ ಪ್ರವೇಶಿಸಿದ ಪಾಕ್ ಪ್ರಜೆಯನ್ನು ಬಂಧಿಸಿದ ಬಿಎಸ್‌ಎಫ್

- Post author:Prajavikshane
- Post published:15/07/2023 6:59 am
- Post category:Breaking News / ಅಪರಾಧ / ರಾಷ್ಟ್ರೀಯ
- Post comments:0 Comments
- Reading time:1 mins read
Tags: #BSF