LOCAL NEWS : ಮೇ 28ರಂದು ವಚನ ಸಾಹಿತ್ಯ ಪರಿಷತ್ ಉದ್ಘಾಟನೆ
ಕುಕನೂರು : ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ತಾಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮ ಮೇ 28 ರಂದು ಪಟ್ಟಣದ ಅನ್ನದಾನಿಶ್ವರ ಶಾಖಾ ಮಠದ ಸಭಾ ಭವನದಲ್ಲಿ ನಡೆಯಲಿದೆ ಎಂದು ತಾಲೂಕು ಅಧ್ಯಕ್ಷ ಈರಯ್ಯ ಎಸ್ ಕುರ್ತಕೋಟಿ ತಿಳಿಸಿದ್ದಾರೆ.
ಮೇ 28 ರ ಬುದುವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂವಾಗಲಿದ್ದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಶ್ರೀಮತಿ ಸಾವಿತ್ರಿ ಮಜುoದಾರ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು ಜಿಲ್ಲಾಧ್ಯಕ್ಷ ಜೀ ಎಸ್ ಗೋನಾಳ್, ಹಿರಿಯ ಸಾಹಿತಿ ಕೆ ಬಿ ಬ್ಯಾಳಿ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಲಬುರ್ಗಾ ಹಿರೇಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಮತ್ತು ಮುಂಡರಗಿ ಅನ್ನದಾನಿಶ್ವರ ಕುಕನೂರು ಶಾಖಾ ಮಠದ ಮಹಾದೇವ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಸಮಾಜ ಸೇವಕರಾದ ಶಿವಣ್ಣ ರಾಯರಡ್ಡಿ, ಕಳಕಪ್ಪ ಕಂಬಳಿ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ಈರಯ್ಯ ಕುರ್ತಕೋಟಿ ತಿಳಿಸಿದ್ದಾರೆ.